ಕಲಬುರಗಿ: ಈ ವರ್ಷ ಕರ್ನಾಟಕ ರಾಜ್ಯವು ಹಿಂದೆಂದೂ ಕಾಣದ ರೀತಿಯಲ್ಲಿ ಅತಿವೃಷ್ಟಿಯಿಂದ ಬಳಲಿ ಬಸವಳಿಸಿದ ಹಾಗೂ ನೆರೆ ಹಾವಳಿಯಿಂದ ಅಸಂಖ್ಯಾತ ಜನರು ಸಂತ್ರಸ್ತರಿಗೆ ಇಂದಿನವರೆಗೂ ತಾತ್ಕಾಲಿಕ ಶಿಬಿರಗಳಲ್ಲಿ ವಾಸವಿದ್ದು, ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ಥರ ನೆರವಿಗೆ ನಿಲ್ಲುವುದು ನಮ್ಮ ಕಾಂಗ್ರೆಸ್ಸಿಗರ ಆಧ ಕರ್ತವ್ಯವಾಗಿದ್ದು, ಕಾಂಗ್ರೇಸ ಪಕ್ಷದ ಶಿಸ್ತಿನ ಸಿಪಾಯಿ ಆದ ನಾನು ಈ ವರ್ಷ ನನ್ನ ಜನ್ನ ದಿನಾಚರಣೆಯನ್ನು ಮಾಡಿಕೊಳ್ಳದಿರಲು ನಿರ್ಧರಿಸಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಅಲ್ಲಮ ಪ್ರಭು ಪಾಟೀಲ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಸಿವು ನೀರಡಕೆಯಿಂದ ತಲ್ಲಣಿಸಿದ್ದ ಜನರಿಗೆ ಕರ್ನಾಟಕ ಸರ್ಕಾರ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಂತ್ರಸ್ಥರ ನೆರವಿಗೆ ಬಾರದೆ ಕುಂಟು ನೆಪ ಹೇಳುತ್ತಾ ದಿನ ಕಳೆಯುತ್ತಿದೆ ಎಂದು ಆರೋಪಿಸಿದರು.
ಅಭಿಮಾನಿಗಳು ಹಿತೈಷಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನನ್ನ ಹಿನ ದಿನದ ಸಮಾರಂಭವನ್ನು ಆಚರಿಸದೆ ಸಂತ್ರಸ್ತರ ಸಂಕಷ್ಟದಲ್ಲಿ ಪಾಲುಗೊಂಡು ನೋವು ಉಂಡವರ ನೆರವಿಗೆ ನಿಲ್ಲಬೇಕೆಂದು ವಿನಂತಿಸಿದ್ದಾರೆ.