ಸುರಪುರ: ಇಂದು ಟಿವಿ ಮತ್ತು ಮೊಬೈಲ್ ಬಳಕೆಯಿಂದಾಗಿ ಜನಪದದ ಸೊಗಡು ಜನರಲ್ಲಿ ಕಡಿಮೆಯಾಗುತ್ತಿದೆ.ಮುಖ್ಯವಾಗಿ ಮಕ್ಕಳಲ್ಲಿ ಜನಪದವನ್ನು ಬೆಳೆಸುವ ಮೂಲಕ ಇದನ್ನು ಜೀವಂತವಾಗಿಡಲು ಸಾಧ್ಯ ಎಂದು ಸುರಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಮಾತನಾಡಿದರು.
ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಶ್ರೀಗುರು ಸೇವಾ ಸಂಸ್ಥೆಯಿಂದ ಶ್ರೀಗುರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಜನಪದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಜನಪದ ಎಂಬುದು ಜನರ ಬಾಯಿಯಿಂದ ಬಾಯಿಗೆ ಹಾಡು ಕತೆಗಳ ರೂಪದಲ್ಲಿ ಜೀವಂತವಾಗಿದ್ದು ಈ ದೇಶದಲ್ಲಿ ಯಾವುದೇ ಸಾಹಿತ್ಯ ಉದಯಿಸುವ ಮುನ್ನವೆ ಜನಪದ ಕಲೆ ಉಗಮವಾಗಿತ್ತು,ಅದು ಇಂದಿಗೂ ಜನಮಾನಸದಲ್ಲಿ ಉಳಿದಿದೆ.ಆದರೆ ಇತ್ತೀಚೆಗೆ ಈ ಕಲೆಯೂ ಆಧುನಿಕ ಮಾದ್ಯಮಗಳಾದ ಟಿವಿ ಮತ್ತು ಮೊಬೈಲಗಳಿಂದಾಗಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ,ಜನಪದವನ್ನು ಎಲ್ಲರಿಗೆ ತಲುಪಿಸುವ ಕೆಲಸವನ್ನು ಶ್ರೀಗುರು ಸೇವಾ ಸಂಸ್ಥೆಯಂತಹ ಸಂಸ್ಥೆಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಮಾತನಾಡಿ,ಇಂದು ಜಾನಪದ ಕಲೆಯೂ ಪಟ್ಟಣಗಳಲ್ಲಿ ತೀರಾ ಕಡಿಮೆಯಾಗಿದೆ,ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ನಾವು ಕಾಣಬಹುದಾಗಿದೆ.ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಜನಪದವನ್ನು ರೂಢಿಸುವ ಮೂಲಕ ಇದನ್ನು ಬೆಳೆಸಲು ಸಾಧ್ಯವಿದೆ.ಇದನ್ನು ಗಮನದಲ್ಲಿಟ್ಟುಕೊಂಡು ಜನಪದ ಸೇವೆಗೆ ಮುಂದಾಗಿರುವ ಶ್ರೀಗುರು ಸೇವಾ ಸಂಸ್ಥೆ ಹಾಗು ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರವರ ಸೇವೆ ಮೆಚ್ಚುವಂತದ್ದು ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಜನಪದ ಸಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು,ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತಿ ಸದಸ್ಯ ದೊಡ್ಡ ಕೊತ್ಲೆಪ್ಪ ಹಾವಿನ್,ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಧರ್ಮರಾಜ ಬಡಿಗೇರ,ಶಿವು ಜಾಲಹಳ್ಳಿ,ಬಾಲಪ್ಪ ಚಂದನಕೇರಿ ಹಾಗು ಮಂಜುನಾಥ ಬಸನ್ನರ್ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕಸ್ತೂರಿ ದೀವಳಗುಡ್ಡ,ಬಸಮ್ಮ ಬಾದ್ಯಾಪುರ,ಪ್ರೇಮಾ ಎಂ.ಬಾದ್ಯಾಪುರ,ಅಯ್ಯಮ್ಮ ಶಿವಪುರ ಸೇರಿದಂತೆ ಅನೇಕ ವಿದ್ಯಾರ್ಥಿಗಳಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…