ಬಿಸಿ ಬಿಸಿ ಸುದ್ದಿ

‘ಥರ್ಡ್ ಕ್ಲಾಸ್’ನ ಹಣೆಬರಹ ಚಲನ ಚಿತ್ರ ಜ.3ಕ್ಕೆ

ಕಲಬುರಗಿ: ಸೆವೆನ್ ಹಿಲ್ಸ್ ಪ್ರೋಡಕ್ಷನ್‍ನಲ್ಲಿ  ಮೂಡಿಬರುತ್ತಿರುವ ಬಹುನಿರೀಕ್ಷೆಯ ‘ಥರ್ಡ್ ಕ್ಲಾಸ್’ ಚಲನಚಿತ್ರ ಜ.3ಕ್ಕೆ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಮತ್ತು ನಾಯಕನಟ ನಮ್ ಜಗದೀಶ ಹೇಳಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ‘ಥರ್ಡ್ ಕ್ಲಾಸ್’ ಸಿನಿಮಾ ಕುರಿತು ಮಾತನಾಡಿದ ಅವರು, ಚಿತ್ರವು ತಂದೆ-ಮಗಳ ನಡುವಿನ ಬಾಂಧವ್ಯ ತೋರಿಸುವುದರ ಜೊತೆಗೆ ನಟನು ಹಿರಿಯರಿಗೆ ನೀಡುವ ಗೌರವ ಪಾತ್ರ ಚಿತ್ರದ ಆಕರ್ಷಣೆ
ಕೇಂದ್ರ ಬಿಂದುಯಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಈಗಾಗಲೇ ಕೆಲ ಹಾಡುಗಳಿಗೆ ಉತ್ತಮ
ಪ್ರತಿಕ್ರಿಯೆ ಬಂದಿವೆ ಎಂದರು.

ಚಿತ್ರಕ್ಕೆ ಜಗದೀಶ್ ಸ್ವತಃ ಬಜೆಟ್ ಹಾಕಿದ್ದು, ಪ್ರದರ್ಶನದ ಮೊದಲದಿನದ ಮೊದಲ ವೀಕ್ಷಣೆಗೆ ಉಚಿತ ಪ್ರವೇಶವಾಗಿದೆ. ನೋಡುಗರಿಗೆ ಚಿತ್ರ ಮಾಸ್ ಆಗಿರಲಿದೆ. ಸಿನಿಮಾದ ಒಂದು ದಿನದ ಒಟ್ಟು ಗಳಿಕೆಯಲ್ಲಿ ನೆರೆ ಪೀಡಿತ ಪ್ರದೇಶವೊಂದನ್ನು ದತ್ತು ಪಡೆದುಕೊಂಡು, ಮೂಲಭೂತ ಸೌಕರ್ಯ ನೀಡಲು ತಂಡ ನಿರ್ಧರಿಸಿದೆ
ಎಂದು ಜಗದೀಶ ಸ್ಪಷ್ಟ ಪಡಿಸಿದರು.

ಈ ಚಿತ್ರಕ್ಕೆ ನಟಿಯಾಗಿ ಈಗಾಗಲೇ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಯುವನಟಿ ರೂಪಿಕಾ ನಟಿಸಿದ್ದಾರೆ. ನಿರ್ದೇಶನ ಅಶೋಕ ದೇವ್, ಸಂಗೀತ ನಿರ್ದೇಶಕರಾಗಿ ಜೆಸ್ಸಿ ಗಿಪ್ಟ್, ಸಂಕಲನ ಶ್ರೀಕಾಂತ್, ಕ್ಯಾಮೆರಾವನ್ನು ಶ್ಯಾಮ್ ನಿರ್ವಹಿಸಿದ್ದಾರೆ.

ಸಿನಿಮಾದಲ್ಲಿ ಪೋಷಕ ನಟರಾಗಿ ಅವಿನಾಶ, ರಮೇಶ ಭಟ್, ಉದಯ ಟಿವಿಯ ಹರೀಶ್, ಕಾಮಿಡಿ ಕಿಲಾಡಿಯ ಪವನ್ ಸೇರಿದಂತೆ ಹಲವಾರು ನಟರು ಚಿತ್ರದಲ್ಲಿ ನಟಿಸಿದ್ದಾರೆ.

emedialine

View Comments

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago