ಬಿಸಿ ಬಿಸಿ ಸುದ್ದಿ

ವ್ಯಕ್ತಿತ್ವ ವಿಕಸನ ಶಿಬಿರ: ವಿಪಸನ ಧ್ಯಾನದಿಂದ ಅರಿವು-ಏಕಾಗ್ರತೆ ಹೆಚ್ಚಳ: ಭಂತೆ

ಕಲಬುರಗಿ/ವಾಡಿ: ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಗ್ಗೆ ವಿಪಸನ ಧ್ಯಾನ ಕೈಗೊಳ್ಳುವುದರಿಂದ ಅರಿವು ಮತ್ತು ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು ಎಂದು ಬೆಂಗಳೂರು ಮಹಾಬೋಧಿ ಸೊಸೈಟಿಯ ಬೌದ್ಧ ಭಿಕ್ಷು ರಂಜೀತ ಸುಮನಪಾಲ ಹೇಳಿದರು.

ಬೆಂಗೂಳೂರಿನ ಮಹಾಬೋಧಿ ಸೊಸೈಟಿ ಹಾಗೂ ವಾಡಿ ಪಟ್ಟಣ ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ಸಹಯೋಗದಲ್ಲಿ ಸಮೀಪದ ಕೊಂಚೂರು ಏಕಲವ್ಯ ಮಾದರಿಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ನಾಲ್ಕು ದಿನದ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳ ಮಂಕಿ ಮನಸ್ಸನ್ನು ಮ್ಯಾನ್ ಮನಸ್ಸನ್ನಾಗಿ ಪರಿವರ್ತಿಸಲು ವಿಪಸನ ಧ್ಯಾನವು ಅತ್ಯಂತ ಪೂರಕವಾಗಿದೆ. ಶಿಕ್ಷಣ ಸಂಪಾದಿಸಲು ಹಂಬಲಿಸುವ ವಿದ್ಯಾರ್ಥಿಗಳ ಮನಸ್ಸು ಶಾಂತವಾಗಿರಬೇಕು. ಬುದ್ಧ ಬೋಧಿಸಿದ ಉತ್ಕೃಷ್ಟ ಧ್ಯಾನವೇ ವಿಪಸನ ಧ್ಯಾನ. ಪ್ರಶಾಂತ ಪರಿಸರದಲ್ಲಿ ಅಂತರದರ್ಶನ ಮಾಡಿಕೊಳ್ಳಲು ಮತ್ತು ದುಃಖದ ನಿಬ್ಬಾಣ ಸಾಧಿಸಲು ವಿದ್ಯಾರ್ಥಿಗಳು ಧ್ಯಾನದ ಮೊರೆಹೋಗಬೇಕು. ಮಕ್ಕಳು ಕೈಗೊಳ್ಳುವ ಮೈತ್ರಿ ಧ್ಯಾನದಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ದ್ವೇಶ ಮತ್ತು ದುರಹಂಕಾರ ತೊಡೆದುಹಾಕಲು ಮನೋಕ್ಷೆಭೆ ಧ್ಯಾನ ಮಾಡಬೇಕು ಎಂದು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿಎಸ್‌ಐ ವಿಜಯಕುಮಾರ ಭಾವಗಿ, ಮನುಷ್ಯನ ಬದುಕಿನಲ್ಲಿ ಶಿಕ್ಷಣ ಬಹುದೊಡ್ಡ ಪಾತ್ರ ನಿಭಾಯಿಸುತ್ತದೆ. ಜೀವನದಲ್ಲಿ ಶಿಸ್ತು, ಸಭ್ಯತೆ, ಆತ್ಮಗೌರವ, ನಯ, ವಿನಯ ಕಲಿಸುತ್ತದೆ. ನ್ಯಾಯ-ಅನ್ಯಾಯ ಅರಿತುಕೊಳ್ಳಲು ಶಿಕ್ಷಣ ಮಾರ್ಗದರ್ಶನ ಮಾಡುತ್ತದೆ. ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವುದೇ ಉತ್ತಮ ಶಿಕ್ಷಣವಾಗಬಲ್ಲದು. ಸಮಾಜದಲ್ಲಿ ಸಾಧಕನಾಗಿ ಬೆಳೆಯುವ ಗುರಿ ಹೊಂದಬೇಕು. ಗುರುಗಳ ಮಾರ್ಗದರ್ಶನ ಪಡೆದು ಗುರಿ ತಲುಪುವ ಛಲವಿದ್ದರೆ ಮಾತ್ರ ಹೊಸ ಇತಿಹಾಸ ಬರೆಯಲು ಸಾಧ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆಯ ಹೊಣೆ ಮುಂದಿನ ಪ್ರಜೆಗಳಾಗಲಿರುವ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗ ಸಂವಿಧಾನ ಬದ್ಧವಾಗಿ ಆಚರಣೆಯಲ್ಲಿ ತರಬೇಕಾದ ಭಾವಿ ಪ್ರಜೆಗಳಿಗೆ ನೈತಿಕ ಶಿಕ್ಷಣ ಕೊಡುವುದು ಅಗತ್ಯವಿದೆ. ಕಲ್ಯಾಣ ನಾಡಿನ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹಿಂದೆ ಬೀಳಬಾರದು. ಶಿಕ್ಷಣ ಕಲಿಕೆಗೆ ಉಂಟಾಗುತ್ತಿರುವ ಏಕಾಗ್ರತೆ ಎಂಬ ಕೊರತೆ ನೀಗಿಸಲು ಈ ಶಿಬಿರ ಆಯೋಜಿಸಲಾಗಿದೆ ಎಂದರು.
ಭಂತೆ ಬುದ್ಧರತ್ನ ಧಮ್ಮೋಪದೇಶ ನೀಡಿದರು. ಪ್ರಾಂಶುಪಾಲ ಬಸವರಾಜ ಅವಂಟಿ ಅಧ್ಯಕ್ಷತೆ ವಹಿಸಿದ್ದರು. ಅಪರಾಧ ವಿಭಾಗದ ಪಿಎಸ್‌ಐ ಗಂಗಮ್ಮಾ, ಕಿರಣಕುಮಾರ ದೋತ್ರೆ, ಶಿಕ್ಷಕರಾದ ಮೃತ್ಯುಂಜಯ ಭಾವೆ, ಬಸನಗೌಡ ಬಿರಾದಾರ, ಗುಂಡಪ್ಪ ಭಂಕೂರ, ಶಾಂತಾ ಅಲ್ಲೂರ, ವಿಶಾಲಾ ಜಾಧವ, ಮುಖಂಡರಾದ ಮಲ್ಲಿಕಾರ್ಜುನ ಕಟ್ಟಿ, ಸುರೇಶ ಬನಸೋಡೆ, ಬಸವರಾಜ ಜೋಗೂರ, ಸಾಯಿನಾಥ ತೋಲೆ ಪಾಲ್ಗೊಂಡಿದ್ದರು. ಶಿಕ್ಷಕ ಶ್ರೀನಾಥ ಇರಗೊಂಡ ಸ್ವಾಗತಿಸಿದರು. ಸಂತೋಷ ಜೋಗೂರ ನಿರೂಪಿಸಿದರು. ಸಾವಿರಾರು ಜನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago