ಚಿಂಚೋಳಿ ಉಪಚುನಾವಣೆ: 25 ಅಭ್ಯರ್ಥಿಯಿಂದ 27 ನಾಮಪತ್ರಗಳು ಸಲ್ಲಿಕೆ

0
317

ಕಲಬುರಗಿ: ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರಕ್ಕೆ 19 ರಂದು ನಡೆಯುವ ಉಪ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರದಂದು 25 ಅಭ್ಯರ್ಥಿಯಿಂದ 27 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ಅವರು ತಿಳಿಸಿದ್ದಾರೆ.

ಇಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ:

ಗುರುಶಾಂತ ಮಲ್ಲಪ್ಪ ಪಟ್ಟೇದಾರ್ ಆಲ್ ಇಂಡಿಯಾ ಮಜ್ಲಿಸ್ ಇತಿಹಾದುಲ್ ಮುಸ್ಲೀಮೀನ್ (ಎ.ಐ.ಎಮ್.ಐ.ಎಮ್.)-01 ನಾಮಪತ್ರ, ಬಸವರಾಜ ಮಲ್ಲಯ್ಯ ಜಾತ್ಯಾತೀತ ಜನತಾ (ಎಸ್) ಪಕ್ಷದಿಂದ-01 ನಾಮಪತ್ರ, ರಮೇಶ ಭೀಮಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ-01 ನಾಮಪತ್ರ, ಅವಿನಾಶ ಉಮೇಶ ಭಾರತೀಯ ಜನತಾ ಪಕ್ಷದಿಂದ-೦03 ನಾಮಪತ್ರಗಳು, ಹರಿಸಿಂಗ್ ರಾಮಜಿ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ವಿಜಯ ಗೋವಿಂದ ಜಾಧವ ಸರ್ವ ಜನತಾ ಪಕ್ಷದಿಂದ 01 ನಾಮಪತ್ರ, ಶಿವಕುಮಾರ ಶಂಕರ ಜನತಾದಳ (ಜಾತ್ಯಾತೀತ) ಪಕ್ಷದಿಂದ 01 ನಾಮಪತ್ರ, ಸುಭಾಷ ವಿಠ್ಠಲಸಿಂಗ್ ರಾಠೋಡ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ-01 ನಾಮಪತ್ರ,  ಪ್ರವೀಣಕುಮಾರ ಧೂಳಪ್ಪ ಬೆಳ್ಳುಂಡಗಿ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ,  ವಿಶ್ವೇಶ್ವರಯ್ಯ ತುಳಜಾರಾಮ ಭೋವಿ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ರಾಜೇಂದ್ರ ಪ್ರಸಾದ ಸಾಯಬಣ್ಣ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ತಿಪ್ಪಣ್ಣ ಒಡೆಯರಾಜ್ ಭೀಮಶಾ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಶಾಮರಾವ್ ಗಂಗಾರಾಮ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಹನುಮಂತ ರಾಮನಾಯ್ಕ ಭೀಮನಾಯ್ಕ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಗೌತಮ ಬಕ್ಕಪ್ಪ ಬಹುಜನ ಸಮಾಜವಾದಿ ಪಕ್ಷದಿಂದ 01 ನಾಮಪತ್ರ, ಮಲ್ಲಿಕಾರ್ಜುನ ನರಸಿಂಗ್‌ರಾವ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಭಾಗ್ಯ ಸಂತೋಷ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಸಂತೋಷ ಧನಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ,  ನಾಗೇಂದ್ರಪ್ಪ ಬಸಪ್ಪ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಮಾರುತಿ ಭೀಮಶಪ್ಪ ಬಹುಜನ ಮುಕ್ತಿ ಪಕ್ಷದಿಂದ 01 ನಾಮಪತ್ರ,  ಶಾಮರಾವ ಚಂದ್ರಪ್ಪ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಶಾಮರಾವ ಮಲ್ಲೇಶಪ್ಪ ಹೇರೂರ (ಕೆ) ಭಾರತೀಯ ರಿಪಬ್ಲಿಕ್ ಪಕ್ಷದಿಂದ 01 ನಾಮಪತ್ರ, ಪ್ರದೀಪಕುಮಾರ ಶಂಕ್ರಪ್ಪ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಕೆ. ದೀಪಾ ಗಣಪತರಾವ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ ಸಲ್ಲಿಸಿದ್ದಾರೆ.

Contact Your\'s Advertisement; 9902492681

ಅದೇ ರೀತಿ ಶಿವಕುಮಾರ ಖತಲಪ್ಪ ಕೊಳ್ಳೂರು ಅವರು ಏಪ್ರಿಲ್ 22ರಂದು ಕಾಂಗ್ರೆಸ್ ಪಕ್ಷದಿಂದ 01 ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ ಸಲ್ಲಿಸಿದ್ದಾರೆ.

ಈವರೆಗೆ ಒಟ್ಟು  27 ಅಭ್ಯರ್ಥಿಗಳಿಂದ 31 ನಾಮಪತ್ರಗಳು ಸಲ್ಲಿಕೆಯಾಗಿದೆ.  ಏಪ್ರಿಲ್ 30ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಮೇ 2 ರಂದು ಕೊನೆಯ ದಿನವಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here