ಕಲಬುರಗಿ: ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರಕ್ಕೆ 19 ರಂದು ನಡೆಯುವ ಉಪ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರದಂದು 25 ಅಭ್ಯರ್ಥಿಯಿಂದ 27 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ಅವರು ತಿಳಿಸಿದ್ದಾರೆ.
ಗುರುಶಾಂತ ಮಲ್ಲಪ್ಪ ಪಟ್ಟೇದಾರ್ ಆಲ್ ಇಂಡಿಯಾ ಮಜ್ಲಿಸ್ ಇತಿಹಾದುಲ್ ಮುಸ್ಲೀಮೀನ್ (ಎ.ಐ.ಎಮ್.ಐ.ಎಮ್.)-01 ನಾಮಪತ್ರ, ಬಸವರಾಜ ಮಲ್ಲಯ್ಯ ಜಾತ್ಯಾತೀತ ಜನತಾ (ಎಸ್) ಪಕ್ಷದಿಂದ-01 ನಾಮಪತ್ರ, ರಮೇಶ ಭೀಮಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ-01 ನಾಮಪತ್ರ, ಅವಿನಾಶ ಉಮೇಶ ಭಾರತೀಯ ಜನತಾ ಪಕ್ಷದಿಂದ-೦03 ನಾಮಪತ್ರಗಳು, ಹರಿಸಿಂಗ್ ರಾಮಜಿ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ವಿಜಯ ಗೋವಿಂದ ಜಾಧವ ಸರ್ವ ಜನತಾ ಪಕ್ಷದಿಂದ 01 ನಾಮಪತ್ರ, ಶಿವಕುಮಾರ ಶಂಕರ ಜನತಾದಳ (ಜಾತ್ಯಾತೀತ) ಪಕ್ಷದಿಂದ 01 ನಾಮಪತ್ರ, ಸುಭಾಷ ವಿಠ್ಠಲಸಿಂಗ್ ರಾಠೋಡ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ-01 ನಾಮಪತ್ರ, ಪ್ರವೀಣಕುಮಾರ ಧೂಳಪ್ಪ ಬೆಳ್ಳುಂಡಗಿ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ವಿಶ್ವೇಶ್ವರಯ್ಯ ತುಳಜಾರಾಮ ಭೋವಿ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ರಾಜೇಂದ್ರ ಪ್ರಸಾದ ಸಾಯಬಣ್ಣ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ತಿಪ್ಪಣ್ಣ ಒಡೆಯರಾಜ್ ಭೀಮಶಾ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಶಾಮರಾವ್ ಗಂಗಾರಾಮ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಹನುಮಂತ ರಾಮನಾಯ್ಕ ಭೀಮನಾಯ್ಕ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಗೌತಮ ಬಕ್ಕಪ್ಪ ಬಹುಜನ ಸಮಾಜವಾದಿ ಪಕ್ಷದಿಂದ 01 ನಾಮಪತ್ರ, ಮಲ್ಲಿಕಾರ್ಜುನ ನರಸಿಂಗ್‌ರಾವ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಭಾಗ್ಯ ಸಂತೋಷ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಸಂತೋಷ ಧನಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ನಾಗೇಂದ್ರಪ್ಪ ಬಸಪ್ಪ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಮಾರುತಿ ಭೀಮಶಪ್ಪ ಬಹುಜನ ಮುಕ್ತಿ ಪಕ್ಷದಿಂದ 01 ನಾಮಪತ್ರ, ಶಾಮರಾವ ಚಂದ್ರಪ್ಪ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಶಾಮರಾವ ಮಲ್ಲೇಶಪ್ಪ ಹೇರೂರ (ಕೆ) ಭಾರತೀಯ ರಿಪಬ್ಲಿಕ್ ಪಕ್ಷದಿಂದ 01 ನಾಮಪತ್ರ, ಪ್ರದೀಪಕುಮಾರ ಶಂಕ್ರಪ್ಪ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಕೆ. ದೀಪಾ ಗಣಪತರಾವ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ ಸಲ್ಲಿಸಿದ್ದಾರೆ.
ಅದೇ ರೀತಿ ಶಿವಕುಮಾರ ಖತಲಪ್ಪ ಕೊಳ್ಳೂರು ಅವರು ಏಪ್ರಿಲ್ 22ರಂದು ಕಾಂಗ್ರೆಸ್ ಪಕ್ಷದಿಂದ 01 ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ ಸಲ್ಲಿಸಿದ್ದಾರೆ.
ಈವರೆಗೆ ಒಟ್ಟು 27 ಅಭ್ಯರ್ಥಿಗಳಿಂದ 31 ನಾಮಪತ್ರಗಳು ಸಲ್ಲಿಕೆಯಾಗಿದೆ. ಏಪ್ರಿಲ್ 30ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಮೇ 2 ರಂದು ಕೊನೆಯ ದಿನವಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…