ಶಹಾಪುರ: ತಾಲ್ಲೂಕು ವಿದ್ಯಾರ್ಥಿಗಳ ತುರ್ತು ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾನ್ಯ ತಹಸೀಲ್ದಾರರ ಮುಖಾಂತರ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಬೇಕು,ಶಾಲೆಯ ರಸ್ತೆ ಡಾಂಬರೀಕರಣ ಮಾಡಬೇಕು, ಶಾಲೆಯ ಸುತ್ತಮುತ್ತಲೂ ಉತ್ತಮ ಪರಿಸರ ಇರುವಂತೆ ನೋಡಿಕೊಳ್ಳಬೇಕು,ಕಾಲೇಜು ವಿದ್ಯಾರ್ಥಿಗಳಿಗೆ ಸಿಟಿ ಬಸ್ ಓಡಿಸಬೇಕು, ಕೂಡಲೇ ವಿದ್ಯಾರ್ಥಿ ವೇತನ ನೀಡಬೇಕು, ಶಿಥಿಲಗೊಂಡ ಶಾಲಾ ಕಟ್ಟಡಗಳು ರಿಪೇರಿ ಮಾಡಬೇಕು, ಹೀಗೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡ ಸೋಫಿಸಾಬ ಕನ್ಯಾಕೊಳ್ಳೂರ, ವಿಜಯ್ ರಾಠೋಡ್, ಭೀಮರಾಯ ಪೂಜಾರಿ, ಕೇಶನಾಥ ರಾಠೋಡ, ನಿಂಗಪ್ಪ ಹೊಸಮನೆ, ವೆಂಕಟೇಶ, ಧನರಾಜ್,ಹಾಗೂ ಇತರರು ಹಾಜರಿದ್ದರು.