ಸುರಪುರ: ಹುಣಸಗಿ ಮತ್ತು ಸುರಪುರ ತಾಲೂಕಿನಾದ್ಯಂತ ನಿರ್ಮಿತಿ ಕೇಂದ್ರದ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟ ಮತ್ತು ಅರ್ದಂಬರ್ಧ ಕಾಮಗಾರಿ ಮಾಡಿ ನಿಲ್ಲಿಸಿದ್ದಾರೆ ಎಂದು ಜಯಕರ್ನಾಟಕ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶರಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಹುಣಸಗಿ ತಹಸಿಲ್ ಕಚೇರಿ ಮುಂದೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಘು ಸಾಂಕೇತಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.ನಂತರ ಹುಣಸಗಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮಾಲಿ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕೇಂದ್ರಗಳು,ಸಮುದಾಯ ಭವನಗಳು,ಶಾಲಾ ಕಟ್ಟಡಗಳು,ಸಾರ್ವಜನಿಕ ಶೌಚಾಲಯಗಳು,ಹುಣಸಗಿ ತಾಲೂಕಿನ ಅರಣ್ಯ ಕಚೇರಿ,ಶ್ರೀನಿವಾಸಪುರದ ವೈದ್ಯಾಧಿಕಾರಿಗಳ ವಸತಿಗೃಹ,ಜುಮಲಾಪುರ ಸರಕಾರಿ ಆಸ್ಪತ್ರೆ ಹೀಗೆ ಅನೇಕ ಕಾಮಗಾರಿಗಳು ಕಳಪೆ ಗುಣಮಟ್ಟದ ಮಣ್ಣು ಮಿಸ್ರಿತ ಮರಳು,ತುಕ್ಕು ಹಿಡಿದ ಕಬ್ಬಿಣ ಬಳಸಿ ನಿರ್ಮಿಸಲಾಗುತ್ತಿದೆ.ಅದು ಅರಬರೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಸುರಪುರ ತಾಲೂಕು ಅಧ್ಯಕ್ಷ ರವಿಕುಮಾರ ನಾಯಕ ಮಾತನಾಡಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಬರದೆ ಖಾಸಗಿ ವ್ಯಕ್ತಿಗಳಿಂದಲೇ ಕಾಮಗಾರಿ ನಿರ್ವಹಣೆ ಮಾಡಿಸುತ್ತಾರೆ.ಅಲ್ಲದೆ ಅಧಿಕಾರಿಗಳು ಇಂತಹ ಕಾಮಗಾರಿ ನಿರ್ಮಾಣದಲ್ಲಿ ಭಾಗಿಗಳಾಗುತ್ತಿರುವುದು ಬೇಲಿಯೆ ಎದ್ದು ಹೊಲ ಮೆಯ್ದಂತಾಗುತ್ತಿದೆ.ಇದರಿಂದ ಸರಕಾರದ ಕೋಟ್ಯಾಂತರ ಹಣ ಪೋಲಾಗುತ್ತದೆ.ಆದ್ದರಿಂದ ಕೂಡಲೆ ನಿರ್ಮಿತಿ ಕೇಂದ್ರ ನಿರ್ಮಿಸುತ್ತಿರುವ ಎಲ್ಲಾ ಕಾಮಗಾರಿಗಳನ್ನು ತನಿಖೆ ಮಾಡಿಸಬೇಕು ಹಾಗು ಕಳಪೆ ಕಾಮಗಾರಿಗಳನ್ನು ಪುನರ್ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಇದಕ್ಕು ಮುನ್ನು ತಹಸೀಲ್ ಕಚೇರಿ ಮುಂದೆ ಕೆಲ ಕಾಲ ಸಾಂಕೇತಿಕ ಧರಣಿ ನಡೆಸಿದರು.ನಂತರ ತಹಸೀಲ್ದಾರ ವಿನಯ ಪಾಟೀಲರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಶಹಾಪುರ ತಾಲೂಕು ಅಧ್ಯಕ್ಷ ಸೋಪಣ್ಣ,ಹುಣಸಗಿ ಕಾರ್ಯಾಧ್ಯಕ್ಷ ಶರಣಪ್ಪ,ಮಲ್ಲು ಕಬಾಡಗೇರಾ,ಶಶಿಧರ ಪತ್ತಾರ,ಬಸವರಾಜ ಮಾಲಿ ಪಾಟೀಲ,ನಿಂಗಣ್ಣ ಪೊಲೀಸ್ ಪಾಟೀಲ,ಶಂಕ್ರಗೌಡ ಮಾಲಿ ಪಾಟೀಲ,ಗದ್ದೆಪ್ಪ ಹವಲ್ದಾರ,ಸಂಗಮೇಶ ಉಪ್ಪಲದಿನ್ನಿ,ಹಣಮಂತ್ರಾಯ ಶಖಾಪುರರಮೇಶ ಕಾಂಗ್ರೆಸ್,ಯಮನೂರಪ ಬಂಗಿ,ಯಮನೂರಿ ಕರೆಕಲ್,ದೇವಪ್ಪ ಗುಜಲಕ್ ಸೇರಿದಂತೆ ಅನೇಕರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…