ಜಗತ್ತಿನ ಇತಿಹಾಸದಲ್ಲಿ ರಾಜನೇ ಒಲಿದು ಬಂದರೂ ಅದನ್ನು ಧಿಕ್ಕರಿಸಿ,ದಿಟ್ಟವಾಗಿ ಎದುರಿಸಿದ ಒಂದೇ ಒಂದು ಉದಾಹರಣೆ ಕೇವಲ ಅಕ್ಕ ಮಹಾದೇವಿ ಮಾತ್ರ. ಮಾಯೆಯ ಆಟ ಬಹಳ ವಿಚಿತ್ರವಾದುದು. ಒಂದನ್ನು ತಿರಸ್ಕರಿಸಿದರೆ ಮತ್ತೊಂದು ಮುಖದಲ್ಲಿ ಬರುತ್ತದೆ. ಮಾಯೆಗೆ ನೂರಾರು ಮುಖಗಳು. ಇಂತಹ ಮಾಯೆಗೆ ಮೋಸ ಹೋಗದ ಅಪ್ರತಿಮ ಜಾಣ್ಮೆ ಅಕ್ಕನದು. ಸದಾ ಕಾಲ ಜಾಗುರೂಕತೆಯಾಗಿದ್ದ ಮಹಾದೇವಿಯನ್ನು ಅರಸಿ ಅರಸ, ರಾಜ್ಯ, ಪಟ್ಟದ ರಾಣಿ, ವಿಲಾಸ-ವೈಭೋಗ ಬಂದರೂ ಅವೆಲ್ಲವನ್ನು ಗುರುತಿಸುವ ಶಕ್ತಿ, ತ್ಯಾಗ,ವೈರಾಗ್ಯ ಆಕೆಯಲ್ಲಿತ್ತು.
೧೨ನೇ ಶತಮಾನದ ಉಳಿದೆಲ್ಲ ವಚನಕಾರರ ಹೆಚ್ಚು ವಚನಗಳು ತಾತ್ವಿಕವಾಗಿದ್ದರೆ, ಅಕ್ಕನ ವಚನಗಳು ಮಾತ್ರ ಆಕೆಯ ಜೀವನ ಚರಿತ್ರೆ ಬರೆದಂತಿವೆ. ಆಕೆ ಮಾತನಾಡಿದ್ದು ಕೇವಲ ತನ್ನ ಜೀವನ ಮತ್ತು ಚೆನ್ನಮಲ್ಲಿಕಾರ್ಜುನನ ಜೊತೆ ಮಾತ್ರ! ಸ್ತ್ರೀ ಅದ್ಯಾತ್ಮ ಮತ್ತು ಧಾರ್ಮಿಕ ಜೀವನಕ್ಕೆ ಅಡ್ಡಿ. ಸ್ತ್ರೀ ಮಾಯೆ. ಮೋಕ್ಷಕ್ಕೆ ಅಡ್ಡಿ ಎಂಬ ಹೀನಾಯ ಸ್ಥಿಯಲ್ಲಿರುವಾಗ ಈ ಲೋಕಕ್ಕೆ ಕಾಲಿರಿಸಿದ ಅಕ್ಕ, ಅಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಹೊಸ ನೋಟ ಬೀರಿದಳು. ಹೆಣ್ಣಿಗೆ ಪುರುಷ ಕೂಡ ಮಾಯೆ. ಹೆಣ್ಣು, ಹೊನ್ನು, ಮಣ್ಣು ಮಾಯೆ ಅಲ್ಲ. ಮಾಯೆ ಇರುವುದು ಮನಸ್ಸಿನಲ್ಲಿ ಎಂದು ಪುರುಷ ವರ್ಗಕ್ಕೆ ಸವಾಲು ಹಾಕುತ್ತಾಳೆ. ದೇವನ ದಾರಿಗೆ ಬಂದವರಿಗೆ ಮಾಯೆ, ಮರೆವು, ಅಭಿಮಾನಗಳಿಲ್ಲ ಎಂದು ಹೇಳಿದಳು.
ಕೌಶಿಕನೆಂಬ ಮಾಯೆ ಕಾಡುತ್ತಿರಲು “ಭೋಗ ತಿರಸ್ಕರಿದಾಗ ಅದು ನಮ್ಮನ್ನು ಬೆನ್ನಟ್ಟಿ ಬರುತ್ತದೆ. ಅದನ್ನು ಬಯಸಿದಾಗ ನಮ್ಮಿಂದ ದೂರ ಹೋಗುತ್ತದೆ. ಸತ್ಯದ ಕಡೆ ಮುಖ ಮಾಡಿ ಹೊರಟವರಿಗೆ ಸುಖ ಕಟ್ಟಿಟ್ಟ ಬುತ್ತಿ. ನೀನು ಯಾವ ಮಾಯೆ ತಂದಿಟ್ಟರೂ ನಾನು ಅದರಲ್ಲಿ ಸಿಕ್ಕಿ ಬೀಳುವುದಿಲ್ಲ. ನೀನಿಲ್ಲದೆ ಈ ಜಗತ್ತು ಬೇಡವೆನಗೆ ಎಂದಿರುವಾಗ ಅದನ್ನೇ ಮುಂದೆ ತಂದಿಡುವೆಯಲ್ಲ ಏನಿದು? ಅಮೃತ ಉಂಬ ಶಿಶುವಿಗೆ ವಿಷಯವುಣಿಸುವುದೇ? ನನ್ನ ಸೌಂದರ್ಯ ನೋಡಿ ಬಂದ ರಾಜ ಒಬ್ಬ ಮಾಂಸ ಮಾರಾಟಗಾರ. ಹೀಗೆ ಕಟುಕರ ಕೈಯಲ್ಲಿ ನನ್ನನ್ನು ಒಪ್ಪಿಸುವುದೇ?” ಎಂದು ಅಕ್ಕ ಆರ್ತತೆಯಿಂದ ಕಣ್ಣೀರು ಸುರಿಸುತ್ತಾಳೆ.
ಗುರುಗಳ ಬಳಿ ತೆರಳಿ ಈ ಸಮಸ್ಯೆ ಕುರಿತು ಪರಿಹಾರ ಕೇಳಿದಾಗ, ಕಷ್ಟಗಳು ನಮ್ಮನ್ನು ಎಚ್ಚರಿಸಲು ಬರುತ್ತವೆ. ನಚ್ಚಿದೆ, ಮೆಚ್ಚಿದೆ ಎಂದು ಹೋದವರಿಗೆ ದೇವರು ತನು, ಮನ, ಧನವನ್ನಲ್ಲಾಡಿಸಿ ನೋಡುತ್ತಾನೆ. ನಿನೊಲಿದವ ನು ಒಡ್ಡಿದ ಪರೀಕ್ಷೆಯಿದು.ಎನ್ನ ಮಾನಾಪಮಾನವೂ ನೀನೆ ಅಯ್ಯ ಎಂಬ ಅಚಲ ನಿಷ್ಠೆಗೆ ಆ ದೇವರು ಸಹ ಗಡ ಗಡ ನಡುಗುತ್ತಾನೆ ನೀನು ನಿಶ್ಚಿಂತಳಾಗಿರು ಎಂದು ಧೈರ್ಯ ತುಂಬುತ್ತಾರೆ. ಹೀಗಿರಲು ಕೌಶಿಕನ ಮಂತ್ರಿ ವಸಂತಕ ಅಕ್ಕನನ್ನು ಅರಮನೆಗೆ ಕರೆತರಲು ಬರುತ್ತಾನೆ. ಆಕಳನ್ನು ಸಿಂಹದ ಜೊತೆಗೆ ಬಿಡಲು ಬರುತ್ತದೆಯೇ? ಎಂದು ತಾಯಿ ಲಿಂಗಮ್ಮ ಅಕ್ಕನನ್ನು ಬಿಗಿದಪ್ಪಿ ದುಃಖಿಸುತ್ತಾಳೆ.
ನೀರಿಗಿಳಿಯದೆ ಈಜು ಬರುವುದಿಲ್ಲ. ಹೆದರದಿರು ಮನವೆ, ಬೆದರದಿರು ತನುವೆ. ನಿನ್ನ ಸುರಕ್ಷಿತ ಕವಚದಲ್ಲಿರುವೆ. ಯಾರು ಏನಂದರೂ ಮನಸಾಕ್ಷಿ ದೊಡ್ಡದು. ಜನಸಾಕ್ಷಿಗಿಂತ ಮನ ಸಾಕ್ಷಿ ಮುಖ್ಯ. ಕೋಣನ ಮೈ ಮೇಲಣ ಸೊಳ್ಳೆಗಳೆತ್ತ ಬಲ್ಲವು? ಎನಗೆ ಶರಣರ ನುಡಿಯೇ ಗತಿ, ಮತಿ, ಸೋಪಾನ ಎಂದು ಸಂತೈಸುತ್ತಾಳೆ. ಮೇನೆಯಲ್ಲಿ ಕುಳಿತು ಅರಮನೆಗೆ ಹೋದಾಗ ಕೌಶಿಕ ಅಕ್ಕನ ಸೌಂದರ್ಯದ ಬಗ್ಗೆ ಹೊಗಳಿ ತಾನು ಕೂಡ ಹೇಗೆ ಕಾಣುತ್ತಿರುವೆ? ಎಂದು ಪ್ರಶ್ನಿಸುತ್ತಾನೆ. ನಾನೆ ಸುರಸುಂದರ ಎಂದು ಬೀಗುತ್ತಿರುವ ನಿನಗೆ ಈ ಸೌಂದರ್ಯವನ್ನು ಕೊಟ್ಟ ಆ ದೇವರು ಎಷ್ಟು ಸುಂದರವಾಗಿದ್ದಾನೆ? ಸದ್ಗುಣವೇ ಸೌಂದರ್ಯ. ಅಂತಹ ದೇವನಿಗೆ ಒಲಿದ ಕಾಯವಿದು. ಕಾಲನ ಒತ್ತಡಕ್ಕೆ ಮಣಿದು ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದಳು.
ನಾನು ಈಗಾಗಲೇ ಐದು ವಾರ ವ್ರತ ಕೈಗೊಂಡಿರುವೆ. ಹಗಲು ಗುರು,ಲಿಂಗ,ಜಂಗಮದ ಪೂಜೆ, ರಾತ್ರಿ ಯಾರನ್ನೂ ಭೇಟಿಯಾಗುವುದಿಲ್ಲ. ಇದಕ್ಕೆ ತಮ್ಮಿಂದ ಭಂಗ ಬರಬಾರದು. ಈ ವೇಳೆಯಲ್ಲಿ ನೀವು ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳದೆ ಮೂರು ಬಾರಿ ತಪ್ಪು ಮಾಡಿದರೆ ನನ್ನ ಮತ್ತು ನಿಮ್ಮ ಸಂಬಂಧ ಅಲ್ಲಿಗೆ ತೀರಿಹೋಗಿ ನಾನು ಸರ್ವಸ್ವತಂತ್ರಳಾಗುತ್ತೇನೆ ಎಂಬ ಷರತ್ತುಗಳನ್ನು ಕೌಶಿಕ ಮಹಾರಾಜನಿಗೆ ಅಕ್ಕ ವಿಧಿಸುತ್ತಾಳೆ
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…