ಸುರಪುರ: ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.ಗುರುವಾರ ಬೆಳಿಗ್ಗೆ ತಾಲೂಕಿನ ನಾರಾಯಣಪುರ ದಿಂದ ಸುರಪುರ ವರೆಗೆ ಬೈಕ್ ರ‍್ಯಾಲಿ ಮೂಲಕ ತಂದು,ನಗರಸಭೆ ಬಳಿಯಿರುವ ಸಂಗೊಳ್ಳಿ ರಾಯಣ್ಣನವರ ವೃತ್ತದಿಂದ ಡೊಳ್ಳು,ಭಾಜಾ ಬಜಂತ್ರಿ ಹಾಗು ಡೆಜೆ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.
ಮದ್ಹ್ಯಾನ ಒಂದು ಗಂಟೆಗೆ ಆರಂಭಗೊಂಡ ಮೆರವಣಿಗೆಯೂ ಸಂಜೆಯ ವೇಳೆಗೆ ಕುಂಬಾರಪೇಟ ವೃತ್ತ ತಲುಪಿತು.ಮೆರವಣಿಗೆಯುದ್ದಕ್ಕೂ ಎಲ್ಲೆಡೆ ಯುವಕರು ಭಂಡಾರ ಹಚ್ಚುತ್ತ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸುತ್ತ ಮೂರ್ತಿಯ ಮೆರವಣಿಗೆ ನಡೆಸಿದರು.
ಮೂರ್ತಿಯ ಕುರಿತು ಕುರುಬ ಸಮುದಾಯದ ಮುಖಂಡ ನಿಂಗರಾಜ ಬಾಚಿಮಟ್ಟಿ ಮಾಹಿತಿ ನೀಡಿ,ಸುಮಾರು ಎರಡು ಲಕ್ಷ ರೂಪಾಯಿಗಳಲ್ಲಿ ಮೆಟಲ್ ಬಳಸಿ ಮೂರ್ತಿ ತಯಾರಿಸಲಾಗಿದ್ದು. ಸುಮಾರು ಒಂಬತ್ತು ಅಡಿ ಎತ್ತರವಿದೆ.ನಗರದ ಕುಂಬಾರಪೇಟೆ ವೃತ್ತದಲ್ಲಿ ಪ್ರತಿಷ್ಠಾಪಿಸಲು ತರಲಾಗಿದ್ದು ಸದ್ಯ ಮೂರ್ತಿಯನ್ನು ಜೋಡಿಸಲಾಗುವುದು.ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರೆ ಗಣ್ಯರ ಅಮೃತ ಹಸ್ತದಿಂದ ಮೂರ್ತಿಯನ್ನು ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಮಾಜಿ ಶಾಸಕರ ಸುಪುತ್ರರಾದ ರಾಜಾ ವೇಣುಗೋಪಾಲ ನಾಯಕ,ರಾಜಾ ವಿಜಯಕುಮಾರ ನಾಯಕ,ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ,ಮಲ್ಲಣ್ಣ ಸಾಹು ಮುದೋಳ,ಮರೆಪ್ಪ ದೊರೆ,ಮಲ್ಲಣ್ಣ ದಂಡಿನ್,ಶರಣು ಶಾಂತಪುರ,ರಂಗನಗೌಡ ದೇವಿಕೇರಾ,ನಿಂಗು ಐಕೂರ,ಕಾಳಪ್ಪ ಕವಾತಿ,ನಾಗರಾಜ ಸಾಹು ಬಳಿಗಾರ,ಕೃಷ್ಣಾ ಯಾದವ್,ಮಲ್ಲಿಕಾರ್ಜುನ ಬಡಿಗೇರ ಸೇರಿದಂತೆ ಅನೇಕರಿದ್ದರು.