ಬಿಸಿ ಬಿಸಿ ಸುದ್ದಿ

ಅಕ್ಕನ ಮೊದಲ ಷರತ್ತು ಮುರಿದ ಕೌಶಿಕ ಮಹಾರಾಜ

ಹಿಂಡನಗಲಿ ಹಿಡಿವಡೆದ ಕುಂಜರ
ತನ್ನ ವಿಂಧ್ಯವ ನೆನೆವಂತೆ ನೆನೆವನಯ್ಯ
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ
ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯ
ಚನ್ನಮಲ್ಲಿಕಾರ್ಜುನ
-ಅಕ್ಕ ಮಹಾದೇವಿ

ತಾರುಣ್ಯಾವಸ್ಥೆಯಲ್ಲಿಯೇ ಜಾಗೃತ ದಿವ್ಯ ಚೇತನವಾಗಿದ್ದ ಅಕ್ಕ ಮಹಾದೇವಿ ಮಾನವ ಸ್ವಭಾವ ಮೀರಿದ ವ್ಯಕ್ತಿತ್ವದವಳು. ಕೌಶಿಕನ ಅರಮನೆಯಲ್ಲಿ ಪ್ರಭುತ್ವದ ಎದುರು ಕಿಂಚತ್ ಅಳುಕಿಲ್ಲದೆ ಬದುಕುತ್ತಿರಲು, ಕೌಶಿಕ ಅವಳ ಅಂದ-ಚೆಂದ ಸೌಂದರ್ಯವನ್ನು ಹೊಗಳುತ್ತಾನೆ. “ಕಾಮಾತುರಾಣಂ ನಭಯಂ. ನಲಜ್ಜಂ” ಎನ್ನುವಂತೆ ನೀವು ಆಸೆ ಪಡುವುದು ಹೊಸತೇನಲ್ಲ ಎಂದು ಮುಖದ ಮೇಲೆ ಹೊಡೆದಂತೆ ಹೇಳುತ್ತಾಳೆ. ಪಂಚೇಂದ್ರಿಯಗಳ ಸೆಳೆತಕ್ಕೆ, ಎಳೆತಕ್ಕೆ ಸಿಕ್ಕ ಮನುಷ್ಯ ಮೃಗನಾಗುತ್ತಾನೆ. ಭೋಗವೆ ಜೀವನ ಎಂದು ಮನುಷ್ಯ ರೋಗಿಷ್ಠನಾಗಿ ಬದುಕುತ್ತಿದ್ದಾನೆ ಎಂದು ಅಲ್ಲಮಪ್ರಭುಗಳ ವಚನದ ಉದಾಹರಣೆ ಕೊಡುತ್ತಾಳೆ.

ಅಕ್ಕನ ಉಪದೇಶವನ್ನು ಕಿವಿಯಲ್ಲಿ ಹಾಕಿಕೊಳ್ಳದ ಕೌಶಿಕ, ರಸ, ಕಲೆ, ಸೌಂದರ್ಯ ಆರಾಧನೆ ಇದ್ದಾಗ ಜೀವನಕ್ಕೆ ಅರ್ಥ ಬರುತ್ತದೆ. ಯಾರು ಆ ಪ್ರಭುದೇವರು ಎಂದು ಕೇಳಿದರು. ನಿಮ್ಮ ರಾಜ್ಯದವರೆ ಆದ ಅಲ್ಲಮರು ಬಸವಕಲ್ಯಾಣದ ಅನುಭವ ಮಂಟಪದ ಶೂನ್ಯಪೀಠದ ಅಧ್ಯಕ್ಷರಾಗಿದ್ದರು ಎಂದಳು. ಈ ಹಾಡು ಇಲ್ಲಿವರೆಗೆ ಹೇಗೆ ಬಂತು? ಎಂದು ಮತ್ತೆ ಕೇಳಿದಾಗ, ಬಸವಣ್ಣನ ನೇತೃತ್ವದಲ್ಲಿ ನಡೆದ ವಚನ ಚಳವಳಿಯಲ್ಲಿ ಭಾಗವಹಿಸಿದ ನಿನ್ನಂಥ ೧೧ ದೇಶದ ರಾಜರು ಹಾಗೂ ಉಳಿದ ವಚನಕಾರರು “ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ” ಎಂದು ಅವರ ವಚನ ರಚನೆಯ ಬಗ್ಗೆ ರಾಜನಿಗೆ ತಿಳಿಸಿ ಹೇಳುತ್ತಾಳೆ.

ಸುಖ ಯಾರಿಗೂ ಸಿಕ್ಕಿಲ್ಲ. ಸುಖ ಸಿಕ್ಕಾಗ ಜೀವನ ನಿಲ್ಲುತ್ತದೆ. ಹಣ, ಮದುವೆ, ಮಕ್ಕಳು ಬಂದು-ಬಾಂಧವರು, ಪ್ರಶಸ್ತಿ-ಪುರಸ್ಕಾರ ಸಿಕ್ಕರೂ ನಮ್ಮ ಪ್ರಯಾಣ ನಡೆದಿದೆ. ಅಂದರೆ ಸುಖದ ಅನ್ವೇಷಣೆ ನಡೆದಿದೆ ಎಂದು ರಾಜನಿಗೆ ವಿವರಿಸುತ್ತಾಳೆ. ಇದನ್ನು ಕೇಳಿದ ರಾಜ ಅಕ್ಕನಿಗೆ ಮತ್ತೆ ಮಾತಾಡಲು ತಿಳಿಸುತ್ತಾನೆ. ಅವನ ಕಾಮದ ಮನಸ್ಸನ್ನು ಅರಿತ ಅಕ್ಕ, ನಿಮಗೆ ವಿಷಯದ ಬಯಕೆಯಿದ್ದು, ನೀವು ಹಾವಿನಂತೆ ವಿಷವಾಗಿದ್ದೀರಿ ಎಂದು ಗಂಭೀರವಾಗಿಯೇ ನುಡಿದು ತನ್ನ ಷರತ್ತನ್ನು ಮತ್ತೆ ನೆನಪಿಸಿ, ಎಚ್ಚರಿಸಿ ಕೋಣೆಯೊಳಗೆ ಹೋಗುತ್ತಾಳೆ.

“ಎಂಥೆಂಥ ಕಾಡು ಕುದುರೆಗಳನ್ನು ಪಳಗಿಸಿದ ನನಗೆ ಈ ಯಕಸ್ಚಿತ್ ಹೆಣ್ಣನ್ನು ಪರಗಿಸುವುದೇನು ಕಷ್ಟ!” ಎಂದು ರಾಜ ತನ್ನ ಮನಸ್ಸಿಗೆ ಸಮಾಧಾನ ತಂದುಕೊಂಡ. ಇತ್ತ ಮಹಾದೇವಿ, “ನನ್ನ ಮೇಲೆ ಮುನಿಸಿಕೊಂಡು ನೀನು ಅವನಿಗೆ ಮಾರಿ ಬಿಟ್ಟಿರುವೆ. ಅವನು ಕಾಯ ಬಯಸಿದ್ದಾನೆ. ಈ ಕಾಯದ ಮಾಂಸವನ್ನು ತೂಗಿ ಕೊಡುತ್ತೇನೆ. ನಾನು ನಿನಗೆ ಹೃದಯ ಕೊಟ್ಟಿದ್ದೇನೆ. ನಾನು ಅಂಜುವಳಲ್ಲ” ಎಂದು ಚನ್ನಮಲ್ಲಿಕಾರ್ಜುನನಲ್ಲಿ ತನ್ನ ಮನದ ಇಂಗಿತವನ್ನು ನಿವೇದಿಸಿಕೊಳ್ಳುತ್ತಾಳೆ.

ಪ್ರೀತಿಗೆ ಇರುವಷ್ಟು ಧೈರ್ಯ ಯಾವುದಕ್ಕಿರುವುದಿಲ್ಲ. ಜೋಶ್ ಇದ್ದಲ್ಲಿ ಓಶ್ ಇರುವುದಿಲ್ಲ ಎನ್ನವಂತೆ ಅಕ್ಕ ಚನ್ನ ಮಲ್ಲಿಕಾರ್ಜುನನ್ನು ಉತ್ಕಟವಾಗಿ ಪ್ರೇಮಿಸುತ್ತಿದ್ದಳು. ಲೌಕಿಕ ಪ್ರೇಮವೇ ಪ್ರಾಣತ್ಯಾಗದಲ್ಲಿ ಪರ‍್ಯಾವಸನವಾಗುವಾಗ, ಅಧ್ಯಾತ್ಮ ಪ್ರೇಮದಲ್ಲಿ ಮುಳುಗಿದ ಅಕ್ಕನ ಪ್ರೇಮ ಹೇಗಿರಬೇಡ? ಅಕ್ಕನ ಸಾತ್ವಿಕಶಕ್ತಿಯ ಎದುರು ಕೌಶಿಕನ ರಾಜಶಕ್ತಿ ತತ್ತರಿಸಿ ಹೋಗುತ್ತದೆ. ಹೂವಿನಷ್ಟೇ ಕೋಮಲೆಯಾಗಿರಬಹುದು ಎಂದು ಭಾವಿಸಿದ್ದ ರಾಜನಿಗೆ ಈಕೆ ವಜ್ರ ಕಠೋರವಾಗಿದ್ದಾಳೆ ಎಂದೆನಿಸಿದರೂ ರಾಜ ವೈಭೋಗಕ್ಕೆ ಕರಗಬಹುದು ಆಸೆ ಇಟ್ಟುಕೊಳ್ಳುತ್ತಾನೆ. ತನ್ನ ಕೋಣೆಯಲ್ಲಿ ಬಂದ ಅಕ್ಕ, ಕೇವಲ ಚಾಪೆ, ಫಲಹಾರ ಉಳಿಸಿಕೊಂಡು ಬೇಡವಾಗಿರುವ ವೈಭೋಗದ ವಸ್ತುಗಳನ್ನು ಹೊರಗೆ ಹಾಕುತ್ತಾಳೆ. ಅಲ್ಲಿರುವ ದಾಸಿಯರ ಹೆಸರು ಮಾತ್ರವಲ್ಲ ಅವರ ಮನಸ್ಸು ಬದಲಾಯಿಸುತ್ತಾಳೆ.

ಅದೊಂದು ಬೆಳದಿಂಗಳ ರಾತ್ರಿ ಸುಂದರವಾದ ತೋಟದಲ್ಲಿ ನೀಳವಾದ ಕೂದಲು, ಬಳಿ ಸೀರೆಯುಟ್ಟು, ಕೈಯಲ್ಲಿ ಲಿಂಗವಿಡಿದುಕೊಂಡು ತನ್ನನ್ನು ತಾನು ಮರೆತು ಲಿಂಗಪೂಜೆಯಲ್ಲಿ ನಿರತಳಾಗಿರುತ್ತಾಳೆ. ಅರಿಸಿಣವನೆ ಮಿಂದು, ಹೊಂದುಡುಗೆಯನ್ನುಟ್ಟು ಪುರುಷನೇ ಬಾರ, ಪುರುಷ ರತ್ನವೇ ಬಾರಯ್ಯ ಎಂದು ಧ್ಯಾನಾಸಕ್ತಳಾಗಿ ಚನ್ನಮಲ್ಲಿಕಾರ್ಜುನನ್ನು ಕರೆದು ಹಾಡುತ್ತಿರುತ್ತಾಳೆ. ಇದನ್ನು ತಪ್ಪಾಗಿ ಭಾವಿಸಿಕೊಂಡ ಕೌಶಿಕ ಮಹರಾಜ, ಕೆಂಬೂತದಂತೆ ಕುಣಿದು ಅವಳ ಬಳಿ ಬಂದು ಅಕ್ಕನ ಕೂದಲು ಹಾಗೂ ಸೀರೆ ಮುಟ್ಟುತ್ತಾನೆ. ಎನಗೊಂದು ಚಿಂತೆ, ನಿಮಗೊಂದು ಚಿಂತೆ. ರಾಜರೇ ನೀವು ನನ್ನ ಮೊದಲ ಷರತ್ತು ಮುರಿದಿದ್ದೀರಿ ಎಚ್ಚರ! ಎಂದು ಸಿಂಹಿಣಿಯಂತೆ ಘರ್ಜಿಸುತ್ತಾಳೆ.

(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 hour ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

3 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

10 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

10 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

11 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

21 hours ago