ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ಸೆಂಟರ ಆಫ್ ಇಂಡಿಯನ್ ಟ್ರೇಡ್ ಯುನಿಯನ್ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಸಂಘ ಜಂಟಿಯಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುವುದನ್ನು ವಿರೋಧಿಸಿ ನಗರದ ನೆಹರು ಗಂಜದಿಂದ ಒಕ್ಕಲಗೇರಿ ಮಿಜಗುರಿ, ಮುಸ್ಲಿಂ ಚೌಕ ದರ್ಗಾ ಮಾರ್ಗವಾಗಿ ಜಗತ ವೃತದ ವರೆಗೆ ಪ್ರತಿಭಟನಾ ಮೆರವಣೆಗೆ ನಡೆಸಿದರು.
ಸಂವಿಧಾನ ನಿರ್ಮಾಪಕ ಡಾ.ಬಾಬಾಸಾಹೇಬ ಅಂಬೇಡ್ಕರ ರವರ ಪುತ್ಥಳಿ ಎದುರು ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿ ಸುಡುವ ಮೂಲಕ ಆಕ್ರೋಶ ಹೊರಹಾಕಿದರು.
ರೈತ ಮುಖಂಡ ಮಾರುತಿ ಮಾನ್ಪಡೆ ಮಾತನಾಡಿ ಪೌರತ್ವ ಕಾಯೆಯ ದೇಶವನ್ನು ಧಾರ್ಮಿಕವಾಗಿ ವಿಭಜನೆ ಮಾಡುತ್ತಿದ್ದು, ಸಾವರ್ಕರ ರವರ ದೇಶ ವಿಭಜನೆ ಸಿದ್ದಾಂತವನ್ನು ಬಿ.ಜೆ.ಪಿ. ಸರಕಾರ ಮತ್ತೊಮ್ಮೆ ಜಾರಿ ಮಾಡುತ್ತದೆ. ಪೌರತ್ರ ಕಾಯ್ದೆ ರಾಜಕೀಯ ದುರುದ್ದೇಶ ಹಾಗೂ ಮತ ಬ್ಯಾಂಕಿಗಾಗಿ ರಾಜಕೀಯಕ್ಕಾಗಿ ಸರಕಾರ ಈ ಮಸೂದೆ ತಿದ್ದುಪಡಿ ಮಾಡಿತ್ತಿರುವುದು ಖಂಡನಿಯ ಎಂದರು.
ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ನಿರುದ್ಯೋಗ, ಪೆಟ್ರೋಲ್ ಬೆಲೆ ಡಾಲಕ ಎದುರು ರೂಪಾಯಿ ಮೌಲ್ಯ ಕುಸಿತ, ರೈತರ ಆತ್ಮಹತೆ ದಂತಹ ಎರಿಕೆ ದೇಶದ ಮುಂತಾದ ಜ್ವಾಲಂತರ ಸಮಸ್ಯೆಗಳನ್ನು ಮರೆಮಾಡಲು ಧರ್ಮದ ಆಧಾರದಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದಿದೆ ಎಂದು ಆರೋಪಿಸಿದ್ದಾರು.
ಪ್ರತಿಭಟನೆಯಲ್ಲಿ ಸಿ.ಐ.ಟಿ.ಯು ಮುಖಂಡರಾದ ಮಾರುತಿ ಮಾನಪಡೆ, ಗೌರಮ್ಮ ಪಾಟೀಲ, ಶೆಟಿ. ವಿನಕರ, ಅಶೋಕ ಮ್ಯಾಗೇರಿ, ಶಿವಾನಂದ ಕವಲಗಾ ಬಿ ರೀಯಾ ಜೊಬ್ಬಿನ ಬರ ಮುಗಳಿ ಮತ್ತಿತರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.