ಬಿಸಿ ಬಿಸಿ ಸುದ್ದಿ

ಬಯಲು ಕವಿಗೋಷ್ಠಿ: ಜನರ ದನಿಯಾಗಿ ಪ್ರತಿಭಟಿಸಲಿ ಕಾವ್ಯ: ಹಿಂದಿನಕೇರಿ

ವಾಡಿ: ದೇವರ ತೃಪ್ತಿಗೆ ಮನುಷ್ಯರನ್ನು ಬಲಿ ಕೊಡುವ ಕೆಟ್ಟ ವ್ಯವಸ್ಥೆಯಲ್ಲಿ ನಾವಿಂದು ಬದುಕುತ್ತಿದ್ದೇವೆ. ಅಸಮಾನತೆ ಹಾಗೂ ಅನ್ಯಾಯಗಳ ವಿರುದ್ಧ ಎದುರಾಳಿಯ ಎದೆಬಿರಿಯುವಂತೆ ಕಾವ್ಯ ಉತ್ತರ ನೀಡಬೇಕಾದ ಅಗತ್ಯವಿದೆ. ಜನರ ನೋವಿಗೆ ಸ್ಪಂದಿಸದ್ದು ಕಾವ್ಯವೇ ಅಲ್ಲ. ಅಕ್ಷರಗಳು ಜನರ ದನಿಯಾಗಿ ಪ್ರತಿಭಟಿಸಬೇಕು ಎಂದು ಯುವ ಬರಹಗಾರ, ಸಂಚಲನ ಸಾಹಿತ್ಯ ವೇದಿಕೆಯ ಹಿರಿಯ ಸದಸ್ಯ ಕಾಶೀನಾಥ ಹಿಂದಿನಕೇರಿ ಹೇಳಿದರು.

ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ವತಿಯಿಂದ ರವಿವಾರ ಸನ್ನತಿಯ ಐತಿಹಾಸಿಕ ಬೌದ್ಧ ಶಾಸನ ಪರಿಸರದ ಭೀಮಾನದಿ ದಂಡೆಯಲ್ಲಿ ಆಯೋಜಿಸಲಾಗಿದ್ದ ಬಯಲು ಕವಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಅನ್ಯಾಯ, ಅತ್ಯಾಚಾರ, ಕೊಲೆ, ಕ್ರೌರ್ಯ ಹಾಗೂ ಅಶ್ಲೀಲತೆ ವ್ಯಾಪಕವಾಗಿ ಹಬ್ಬಿದ್ದರೂ ನಮಗೇನು ಸಂಬಂದವಿಲ್ಲದಂತೆ ವರ್ತಿಸುವ ಜನರ ಮನೋಭಾವ ಆತಂಕ ಸೃಷ್ಟಿಸಿದೆ. ಪ್ರತಿಭಟಿಸುವ ಮನೋಭಾವ ಸಾಯುತ್ತಿರುವುದು ನೋವಿನ ಸಂಗತಿ. ಭಾರತದ ಭವ್ಯ ಸ್ವಾತಂತ್ರ್ಯದ ಕನಸು ಕಂಡಿದ್ದ ಭಗತ್‌ಸಿಂಗ್ ಹಾಗೂ ಚಂದ್ರಶೇಖರ ಆಜಾದ್‌ರಂತಹ ಕ್ರಾಂತಿಕಾರಿಗಳ ಕನಸ್ಸು ಈಡೇರಿಸಬೇಕಾದ ಅಗತ್ಯವಿದೆ. ವ್ಯವಸ್ಥೆಯಲ್ಲಿ ಘಟಿಸುವ ಕೆಟ್ಟ ನೀತಿಗಳ ವಿರುದ್ಧ ತಿರುಗಿಬೀಳುವ ಕಾವ್ಯವವೇ ನಿಜವಾದ ಕಾವ್ಯ ಎಂದರು.

ಸಂಸ್ಕೃತಿಯ ಸೊಂಕು ಎಂಬ ಶಿರ್ಷಿಕೆ ಹೊತ್ತ ತಮ್ಮ ಸ್ವರಚಿತ ಕವಿತೆ ವಾಚಿಸಿದ ಕಾಶೀನಾಥ ಹಿಂದಿನಕೇರಿ, ನಿಜ ಹೇಳಿ ಆಕೆಯನ್ನು ನೀವು ದೇವತೆಯನ್ನಾಗಿಸಿದ್ದು ಭಕ್ತಿಗೋ ಇಲ್ಲ ಬಂಧನಕ್ಕೋ… ಕೈಗಳಿಗೆ ಕಟ್ಟುವ ಭರವಸೆಯ ದಾರ ಹಬ್ಬದಂದು ಮಾತ್ರ ರಾಖಿಯಾಯಿತಲ್ಲ. ಸುಟ್ಟು ಕರಕಲಾದ ನನ್ನ ಸಹೋದರಿಯ ಬೂದಿಯಲ್ಲಿ ನನ್ನ ನೆಲದ ಸಂಸ್ಕೃತಿ ಭಯವಾಗುತ್ತಿದೆ ಎಂದು ಆತಂಕ ಪ್ರದರ್ಶಿಸಿದರು. ವಿಕ್ರಮ ನಿಂಬರ್ಗಾ ವಾಚಿಸಿದ ಕ್ಷಮಿಸಿ ಬಿಡು ಸಹೋದರಿ ಕಾವ್ಯದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ಜಾತಿ ನೋಡಿ ನ್ಯಾಯ ದಕ್ಕುತ್ತಿದೆ ಈ ಶಿಖಂಡಿ ಸಮಾಜದಲ್ಲಿ ಎಂದು ಕಿಡಿಕಾರಿದರು.

ಯುವ ಕವಿಗಳಾದ ಶ್ರವಣಕುಮಾರ ಮೌಸಲಗಿ, ವೀರಣ್ಣ ಯಾರಿ, ಮಲ್ಲಿಕಪಾಸಾ ಮೌಜನ್, ಚಂದ್ರು ಕರಣಿಕ, ಖೇಮಲಿಂಗ ಬೆಳಮಗಿ, ಕರುಣೇಶ ಕೆಲ್ಲೂರ, ಸಿದ್ಧಯ್ಯಶಾಸ್ತ್ರೀ ನಂದೂರಮಠ, ರವಿ ಕೋಳಕೂರ, ದೇವಿಂದ್ರ ಹಡಪದ ರಾವೂರ, ಗುಂಡಪ್ಪ ಭಂಕೂರ ಹಾಗೂ ಇತರರು ಸ್ವರಚಿತ ಕವಿತೆ ವಾಚಿಸುವ ಮೂಲಕ ಅಶ್ಲೀಲ, ಸಿನೆಮಾ, ಸಾಹಿತ್ಯಗಳ ವ್ಯಾಪಕ ಪ್ರಚಾರವನ್ನು ಖಂಡಿಸಿದರಲ್ಲದೆ, ಹೆಣ್ಣಿನ ರಕ್ಷಣೆ ವಹಿಸದ ಸರಕಾರಗಳ ವಿರುದ್ಧ ಸಿಟ್ಟು ಹೊರಹಾಕಿದರು.

ಈ ವೇಳೆ ಮಾತನಾಡಿದ ವಾಡಿ ನಗರದ ಸಾಹಿತ್ಯ ಪ್ರೇಮಿ ಲಕ್ಷ್ಮೀಕಾಂತ ಬಿರಾದಾರ, ಸಮಾಜದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲವಾಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ಅಮಾಯಕ ಯುವತಿಯರು ಬಲಿಯಾಗುತ್ತಿದ್ದಾರೆ. ಬೀದಿಗಿಳಿದು ಹೋರಾಟ ಮಾಡುವ ಅಗತ್ಯ ಎಷ್ಟಿದೆಯೋ ಅಷ್ಟೇ ಅಗತ್ಯ ಕವಿ ಕಲಾವಿದರು ಸಾಹಿತ್ಯದ ಮೂಲಕ ಖಂಡಿಸಬೇಕಿದೆ. ಸಂಚಲನ ಸಾಹಿತ್ಯ ವೇದಿಕೆಯಿಂದ ಏರ್ಪಡಿಸಲಾದ ಬಯಲು ಕವಿಗೋಷ್ಠಿ ಹೆಣ್ಣಿನ ಅತ್ಯಾರ ಪ್ರಕರಣಗಳಿಗೆ ಪ್ರತಿರೋಧ ವ್ಯಕ್ತಪಡಿಸುರುವುದು ನಿಜಕ್ಕೂ ಹೃದಯವಂತಿಕೆಯ ಕಾರ್ಯ ಎಂದು ಬಣ್ಣಿಸಿದರು.
ಸಾಹಿತ್ಯಾಸಕ್ತರಾದ ವಿ.ಕೆ.ಕೆದಿಲಾಯ, ವಿಠ್ಠಲ ಜ್ಯೋಶಿ, ಜಯದೇವ ಜೋಗಿಕಲಮಠ, ಕಾಶಿನಾಥ ಶೆಟಗಾರ, ರಾಮಚಂದ್ರ ಹೊನಗುಂಟಿಕರ, ರಾಜೇಶ ಅಗರವಾಲ, ಸತೀಶ ಸಾವಳಗಿ, ಶ್ರೀಕಾಂತ ಬಿರಾಳ, ವಿಜಯಕುಮಾರ ಯಲಸತ್ತಿ, ಸಂತೋಷ ಸೊಲ್ಲಾಪುರ, ಅಜಯ ದೊಡ್ಡಮನಿ, ಜಗನ್ನಾಥ ಕಲಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

18 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago