ಗ್ರಾಮ ಪಂಚಾಯಿತ್ ಅವ್ಯವಸ್ಥೆ ಸರಿಪಡಿಸಲು SFI DYFI ಪ್ರತಿಭಟನೆ

0
47

ರಾಯಚೂರು: ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಾಲಾಪುರ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಗ್ರಂಥಾಲಯದ ಸಮಸ್ಯೆ, ವಿದ್ಯಾರ್ಥಿಗಳ ಪಠ್ಯ ಪುಸ್ತಕ ಖರೀದಿಗೆ ಹಣ, ಉದೋಗ ಖಾತ್ರಿ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ (SFI) ಮತ್ತು (DYF) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಹಾಲಾಪೂರು ಪಂಚಾಯ್ತಿಯಲ್ಲಿ ಗ್ರಂಥಾಲಯದಲ್ಲಿನ ಪುಸ್ತಕಗಳು ಧೂಳಿನಿಂದ ಕೂಡಿವೆ. ಪತ್ರಿಕೆ, ಮ್ಯಾಗಜೇನ್‌ಗಳಿಲ್ಲದೆ ಸಕಾಲಕ್ಕೆ ದೊರೆಯಲ್ಲ ಹೀಗಾಗಿ ಈ ಗ್ರಂಥಾಲಯಕ್ಕೆ ಹೊಸ ಕಟ್ಟಡ ಮಂಜೂರು ಮಾಡಿ, ಮೂಲ ಸೌಲಭ್ಯ ಒದಗಿಸಿ ಗ್ರಂಥಾಲಯವನ್ನು ಬಲಪಡಿಸಬೇಕು ಮತ್ತು ಪಠ್ಯ ಪುಸ್ತಕ ಖರೀದಿಗೆ ಪಂಚಾಯ್ತಿಯಿಂದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ೨೪.೭೫ರ ಅನುದಾನದಲ್ಲಿ ನೀಡಬೇಕಾದ ಹಣವನ್ನು ಸೂಕ್ತ ಸಮಯದಲ್ಲಿ  ನೀಡುತ್ತಿಲ್ಲ  ಜೂನ್-ಜುಲೈನಲ್ಲಿ ಒದಗಿಸಬೇಕಿದ್ದ ಪುಸ್ತಕಗಳನ್ನು ಡಿಸೆಂಬರ್‌ನಲ್ಲಿ ಕಾಟಾಚಾರಕ್ಕೆ ಒದಗಿಸುತ್ತಿದ್ದಾರೆ ಎಂದು ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ ವೀರಾಪೂರು ಆರೋಪಿಸಿದರು.

Contact Your\'s Advertisement; 9902492681

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸಬೇಕು, ಉದ್ಯೋಗಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೆ ಮುಂದಾಗಬೇಕು ಪಂಚಾಯ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ಚಂರಡಿ, ರಸ್ತೆ, ನೀರು ಸೇರಿದಂತೆ ಇನ್ನಿತರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಅವರು ಆಗ್ರಹಿಸಿದರು.

ಅನಿರ್ಧಿಷ್ಟಾವಧಿಯ ಹೋರಾಟವನ್ನು ತಾಲ್ಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಮಸ್ಯೆಗಳ ಈಡೇರಿಕೆಗೆ ಲಿಖಿತ ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ರಮೇಶ ವೀರಾಪೂರು, ಮುಖಂಡರಾದ ಬಸವಂತ ಹಿರೇಕಡಬೂರು, ಬಸವರಾಜ್ ಇರಕಲ್, ತಿಪ್ಪಣ ನಿಲೋಗಲ್, ಶಿವು ಬಸವನ ಕ್ಯಾಂಪ್,ಅಮರೇಶ ಹಿರೇಕಡಬೂರು, ಸುಬಾಷ್, ಬಸವರಾಜ್, ಅಮರೇಗೌಡ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here