ಲಸಿಕೆ ಕೊಡಿಸುವುದು ಪ್ರತಿಯೊಬ್ಬ ತಂದೆ ತಾಯಿಯರ ಕರ್ತವ್ಯ

0
62

ಕಲಬುರಗಿ/ಶಹಾಬಾದ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಸುಮುದಾಯ ಆರೋಗ್ಯ ಕೇಂದ್ರ ಶಹಾಬಾದ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಶಹಾಬಾದ ಸಂಯುಕ್ತಾಶ್ರಯದಲ್ಲಿ ವಿಶೇಷ ಶಾಲಾ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಮಿನಿ ರೋಸ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಹಾಬಾದನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ ಶಂಕರ ರಾಠೋಡ ಅವರು ಮಾತನಾಡುತ್ತಾ ಸರ್ಕಾರದ ಈ ಕಾರ್ಯಕ್ರಮ ಬಹಳ ಮಹತ್ವವಾದು ಅದರಲ್ಲೂ ವಿಶೇಷವಾಗಿ ಮಕ್ಕಳು ಬಹಳ ತೊಂದರೆ ಉಂಡುಮಾಡುವ ಗಂಟಲುಮಾರಿ,ನಾಯಿಕೆಮ್ಮು ,ಧರ್ನುವಾಯು ಮಾರಕ ರೋಗವಾಗಿ ಕಾಡುತ್ತಿದೆ.ಈ ರೋಗವನ್ನು ತಡೆಗಟ್ಟಲು ಸರ್ಕಾರವು ಶಾಲೆಯಲ್ಲಿ ಒದುತ್ತಿರುವ ಮಕ್ಕಳಿಗೆ ಶಾಲೆಯಲ್ಲಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಮಳಿಗೆ ಅಂನವಾಡಿ ಕೇಂದ್ರಗಳಲ್ಲಿ ಡಿ,ಪಿ,ಟಿ,ವರ್ದಕ ಮತ್ತು ಟಿ,ಡಿ ಲಸಿಕೆಗಳನ್ನು ಹಾಕಲಾಗುತ್ತಿದೆ.ತಮ್ಮ ೫ ವರ್ಷ ರಿಂದ ೬ವರ್ಷ ಮಕ್ಕಳಿಗೆ ಗಂಟಲುಮಾರಿ ನಾಯಿ ಕೆಮ್ಮು ಧರ್ನುವಾಯು ಹಾಗೂ ೭ ರಿಂದ ೧೬ ವರ್ಷದ ಮಕ್ಕಳಿಗೆ ಗಂಟಲುಮಾರಿ ಧರ್ನುವಾಯು ಲಸಿಕೆ ಮಕ್ಕಳಿಗೆ ನೀಡಿ ರೋಗವನ್ನು ತಡೆಗಟ್ಟಬಹುದು ಎಂದು ಹೇಳಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಶ್ರೀ ಅಮರೇಶ ಇಟಗಿಕರ್ ಹದಿಹರೆಯ ಆಪ್ತಸಮಾಲೋಚಕರು ಮಾತನಾಡುತ್ತಾ ರಾಷ್ರ್ಟೀಯ ಕಾರ್ಯಕ್ರವಾದ ವಿಶೇಷ ಶಾಲಾ ಲಸಿಕಾ ಅಭಿಯಾನ ಕಾರ್ಯಕ್ರವನ್ನು ೯ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಶಹಾಬಾದ ನಗರದ ಎಲಾ ಶಾಲೆಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ದಿನಾಂಕ ೧೧ ಡಿಸೆಂಬರ ರಿಂದ ೩೧ ಡಿಸೆಂಬರ ೨೦೧೯ ರವರೆಗೆ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು ೧ ನೇ ತರಗತಿಯಿಂದ ೧೦ ನೇ ತರಗತಿಯ ಎಲ್ಲಾ ಮಕ್ಕಳಿಗೆ ಅವರವರ ಶಾಲೆಗಲ್ಲಿ ಉಚಿತವಾಗಿ ನೀಡಲಾಗುತ್ತುದೆ.ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆರೋಗ್ಯ ಕೇಂದ್ರದ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ ೧೦೦೩೮ ಹತ್ತು ಸಾವಿರ ಮೂವತ್ತೆಂಟು ಮಕ್ಕಳಿಗೆ ಈ ಲಸಿಕೆ ಹಾಕುವ ಗುರಿ ಹೊಂದಿದೆ ಎಂದು ಪ್ರಾಸ್ತವಿಕ ನುಡಿಗಳಲ್ಲಿ ತಿಳಿಸಲಾಯಿತು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಶಹಾಬಾದ ಪರುಷ ಹಾಗೂ ಮಹಿಳೆ ಕಿರಿಯ ಆರೋಗ್ಯ ಸಹಾಯಕರಾದ ಶ್ರೀ ಯೂಸಫ ಸಾಬ ನಾಕೇದಾರ, ಶ್ರೀಮತಿ ವಾಣೀಶ್ರೀ ,ಸುನಿತಾ ಅಲ್ಲಿಪೂರ, ಶ್ರೀಮತಿ ಸಂದ್ಯಾರಾಣಿ ,ವಿಜಯಲಕ್ಷ್ಮೀ,ಪದ್ಮಾವತಿ, ಜಯಶ್ರೀ .ಇರೆಲ್ಲರು ಕೂಡಿ ಶಲೆಯಲ್ಲಿರು ಮಕ್ಕಳಿಗೆ ಡಿ,ಪಿ,ಟಿ,ಹಾಗೂ ಟಿ,ಡಿ ಲಸಿಕೆಗಳನ್ನು ಮಕ್ಕಳಿಗೆ ನೀಡಿದರು.

ಈ ಕಾರ್ಯಕ್ರದಲ್ಲಿ ಡಾ ದಶತಥ ಜಿಂಗಾಡೆ, ವೈದ್ಯಾಧಿಕಾರಿಗಳು, ಶ್ರೀಮತಿ ಸುನಂದಾ ಆರೋಗ್ಯ ಶಿಕ್ಷಣ ಅಧಿಕಾರಿಗಳು ಚಿತ್ತಾಪೂರ ಶ್ರೀ ಪರಶುರಾಮ ಮುಖ್ಯ ಗುರುಗಳು ಮಿನಿರೋಸ್ ಪ್ರಾ .ಹಾಗೂ ಪ್ರೌಢ ಶಾಲೆ ಶಹಾಬಾದ ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಮತ್ತು ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here