ಜಗತ್ತು ಹಿಂದೆಂದೂ ಕಂಡರಿಯದ, ಕೇಳಿರದ ಅಪೂರ್ವ ನಿರ್ಣಯವನ್ನು ಅಕ್ಕಮಹಾದೇವಿ ಕೈಗೊಳ್ಳಲು ಅಸಾಮಾನ್ಯ, ಅಸಾಧಾರಣ ಧೈರ್ಯ, ಪರಮಾತ್ಮನ ಅನುಭಾವ ಕಾರಣವಾಯಿತು. ಆಕೆಯ ಎದುರಿಗೆ ಆಗ ಎರಡು ದಾರಿಗಳಿದ್ದವು. ಒಂದು ಸುರಕ್ಷತೆಯ ಗುರುಮನೆಯ ದಾರಿ. ಇನ್ನೊಂದು ನೆಮ್ಮದಿಯ ಗೂಡು ಹೆತ್ತಮ್ಮನ ತವರು ಮನೆ. ಅಕ್ಕ ಆಯ್ಕೆ ಮಾಡಿಕೊಂಡದ್ದು ವಿಷಯಾಸಕ್ತಿಯ ಹೆತ್ತಮ್ಮನ ಮನೆಯಲ್ಲ. ಬದಲಿಗೆ ಅಧ್ಯಾತ್ಮ ಕಲಿಕೆಯ ಗುರುಮನೆ. ಬೆಂಕಿ ಮತ್ತು ಪೆಟ್ರೋಲ್ ಎರಡೂ ಕೂಡಿದರೆ ಇಂದ್ರೀಯಗಳು, ವಿಷಯಗಳು ಧಗಧಗ ಸುಡುತ್ತವೆ. ಅಮೂಲ್ಯ ಜೀವನವನ್ನು ನಾಶ ಮಾಡುತ್ತವೆ. ಅಂತೆಯೇ ಬಸವಣ್ಣನವರು “ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ? ಎಂದು ಪ್ರಶ್ನಿಸಿದ್ದಾರೆ.
ನಾಶವಾಗುವ ಬದಕನ್ನು ಅಧ್ಯಾತ್ಮ, ಭಕ್ತಿರಸದ ನೀರಿನಿಂದ ಉಳಿಸಬಹುದು. ಅರಿವು ಮೂಡಿದರೆ ವಿಷ ಉಣ್ಣಬಾರದು ಎಂಬ ತಿಳಿವಳಿಕೆ ಮೂಡುತ್ತದೆ. ಶರಣರು ಎಚ್ಚರಗೊಂಡವರು. ಅಂತಹ ಎಚ್ಚರಗೊಂಡ ಶರಣರಲ್ಲಿ ಅಕ್ಕಮಹಾದೇವಿ ಕೂಡ ಒಬ್ಬರು. ಇಹ-ಪರ ಎರಡೂ ಏಕ ಕಾಲದಲ್ಲಿ ಹಿಡಿಯಲಾಗುವುದಿಲ್ಲ ಎಂದರಿತ ಆಕೆ ಪರಿಪೂರ್ಣದ ಹಾದಿ ಹಿಡಿದಳು. ಮನವನ್ನು ಮಹಾದೇವನನ್ನಾಗಿ ಮಾಡಿಕೊಂಡ ಆಕೆಗೆ ರಾಜಭೋಗ ತೃಣವೆನಿಸಿತು.
ತಾನುಟ್ಟ ಸೀರೆಯನ್ನು ಕೌಶಿಕನ ಮುಖಕ್ಕೆ ಎಸೆದು ಹೊರಟಿದ್ದ ಅಕ್ಕನ ದಟ್ಟವಾದ, ನೀಳವಾದ ಕೂದಲು ಆಕೆಯ ಮೈ ಮರೆ ಮಾಡಿತ್ತು. ಮೃಗೀಯ ಸ್ವಭಾವದ ಕೌಶಿಕ, ಅರಮನೆಯ ಕಾವಲುಗಾರರನ್ನು ಬಿಡಿಸಿಕೊಂಡು ತಾನು ಬಂದುದರ ಬಗ್ಗೆ ಯೋಚಿಸಿ ಆ ಜಾಗೃತ ಮನಸ್ಸಿಗೆ ಧನ್ಯವಾದ ಹೇಳಿದಳು.
ಶಾರೀರಿಕ, ಮಾನಸಿಕ, ಆತ್ಮಿಕ ಈ ಮೂರು ಸ್ತರದ ಶಕ್ತಿಗಳಲ್ಲಿ ಮಾನಸಿಕ ಮತ್ತು ಆತ್ಮಿಕ ಶಕ್ತಿಯನ್ನು ಎಚ್ಚರಿಸಿಕೊಂಡವಳು ಅಕ್ಕ. ಭುವನ ಸುಂದರಿ, ವಿಶ್ವ ಸುಂದರಿಯಾಗಿದ್ದ ಅಕ್ಕನಿಗೆ ಕೌಶಿಕನ ಬಂಧನ ಮತ್ತು ಪುರುಷರ ಕಾಮುಕತನ ಬಿಡಿಸುವುದು ಅನಿವಾರ್ಯವಾಗಿತ್ತು. ಜಾಗೃತ, ಪ್ರಜ್ಞಾಸ್ಥಿತಿಯಲ್ಲಿದ್ದ ಅಕ್ಕ ಜಗದ ಹಂಗು ತೊರೆದು ಹೊರಗೆ ಬರುವ ಅನಾಹುತ ನಿರ್ಧಾರ ತೆಗೆದುಕೊಂಡಿರುವುದನ್ನು ನೋಡಿದರೆ ಆಕೆ ಎಷ್ಟೊಂದು ರೋಸಿ ಹೋಗಿದ್ದಳು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅರಮನೆಯಿಂದ ಹೊರ ಬಂದಿದ್ದ ಅಕ್ಕನಿಗೆ ನಾಲ್ಕು ದಿಕ್ಕುಗಳೂ ಮುಚ್ಚಿದಂತೆ ಕಂಡು ಬಂದವು. ಅಪರಿಮಿತ ಮನೋಬಲ, ಉತ್ಕಟ ಪ್ರೇಮದಿಂದ ಸತ್ಯದ ಹಾದಿ ತುಳಿದು ಮಹಾದ್ವಾರದಲ್ಲಿ ನಿಂತ ಅಕ್ಕನ ಮನಸ್ಸು ಎಲ್ಲಿಗೆ ಹೋಗುವುದು? ಎಂದು ಒಂದು ಕ್ಷಣ ಹೊಯ್ದಾಡುತ್ತದೆ. ಕೊನೆಗೆ ಗುರುಮನೆಯ ದಾರಿ ಹಿಡಿದು ಕಣ್ಣು ಮುಚ್ಚಿಕೊಂಡು ಬರುತ್ತಿರುವಾಗ ಲೋಕದ ಜನ ಬಾಯಿ ತೆರೆಯುತ್ತಾರೆ.
ಲೋಕದ ಜನರ ನಿಂದೆಯ ಮಾತುಗಳನ್ನು ಕಿವಿಯಾರೆ ಕೇಳಿದ ಅಕ್ಕನ ಮನಸ್ಸು ಮುದುಡಿದಂತಾಗುತ್ತದೆ. “ಈ ಜಗತ್ತಿಗಾಗಿ ನೀನು ಬದುಕಿದವಳಲ್ಲ; ಜಗದೊಡೆಯನಿಗಾಗಿ ನೀನು ಬದುಕಿದವಳು” ಎಂದು ಜಾಗೃತ ಮನಸ್ಸು ಹೇಳುತ್ತದೆ. ಎಚ್ಚರಗೊಂಡ ವಿವೇಕದನ್ವಯ ಬರಬರನೆ ಮಠದೊಳಗೆ ನಡೆದು ಹೋಗಿ ಧ್ಯಾನಾಸಕ್ತರಾಗಿ ಕುಳಿತಿದ್ದ ಗುರುಲಿಂಗದೇವರ ಪಾದ ಮುಟ್ಟಿ ನಮಸ್ಕರಿಸುತ್ತಾಳೆ. ಅವಳ ಬೆತ್ತಲೆ ದೇಹ ನೋಡಿ ಯಾರಮ್ಮ ನೀನು? ಎಂದು ಗುರುಗಳು ಕೇಳುತ್ತಾರೆ. ಈ ಜಗತ್ತು ನನ್ನನ್ನು ಮರೆತಿರಬಹುದು. ಆದರೆ ನೀವೂ ಮರೆಯುವುದೇ? ಎಂದು ಅಕ್ಕ ಪ್ರಶ್ನಿಸುತ್ತಾಳೆ. ಮಹಾದೇವಿ ಈ ವೇಷ ಯಾಕೆ? ಎಂದು ಗುರುಗಳು ಕೇಳಿದಾಗ, ನೀವೂ ನನ್ನ ಮೇಲೆ ಸಂಶಯ ಪಡಬಹುದೇ? ಎನ್ನುತ್ತಾಳೆ. ಸೂರ್ಯನ ಸನ್ನಿಧಿಯಲ್ಲಿ ಮಂಜುಗಡ್ಡೆ ಇದೆ ಎಂದರೆ ನಂಬಬಹುದು. ಆದರೆ ಮಹಾದೇವಿ ಜೀವನದಲ್ಲಿ ಕಳಂಕ ಇದೆ ಎಂದರೆ ನಂಬಲಾಗುವುದಿಲ್ಲ ಎಂದು ಗುರುಗಳು ಅಕ್ಕನನ್ನು ಸಂತೈಸುತ್ತಾರೆ.
ಮಗಳು ಮಠಕ್ಕೆ ಬಂದ ಸುದ್ದಿ ತಾಯಿ ಲಿಂಗಮ್ಮ ಹಾಗೂ ತಂದೆ ಓಂಕಾರಶೆಟ್ಟಿಗೆ ಗೊತ್ತಾಗಿ ಮಗಳ ಮಾನ ಮುಚ್ಚಲು ಸೀರೆ ತೆಗೆದುಕೊಂಡು ಬಂದು ಲೋಕ ಹೀಗೆ ಬೆತ್ತಲೆಯಾಗಿದ್ದರೆ ಒಪ್ಪುವುದಿಲ್ಲ. ಮನೆಗೆ ಬಾ ಎಂದು ಕರೆಯುತ್ತಾರೆ. ಆದರೆ ಅಕ್ಕ ಇಹಕ್ಕೊಬ್ಬ ಗಂಡ, ಪರಕ್ಕೊಬ್ಬ ಗಂಡನೆ? ಜನಮೆಚ್ಚಿ ಬದುಕುವುದಕ್ಕಿಂತ ಮನ ಮೆಚ್ಚಿ ಬದುಕಬೇಕು ಎಂದು ಮನೆಗೆ ಬರಲು ನಿರಾಕರಿಸಿ ಹೊರಟು ನಿಲ್ಲುತ್ತಾಳೆ. ತಂದೆ-ತಾಯಿ, ಗುರುಗಳು ನಿನಗೆ ಹಸಿವು, ನಿದ್ರೆ, ನೀರಡಿಕೆ, ಚಳಿಯಾದರೆ ಏನು ಮಾಡುವೆ? ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಆತ್ಮ ಸಂಗಾತಕ್ಕೆ ಚನ್ನಮಲ್ಲಿಕಾರ್ಜುನ ಇರುವಾಗ ನನಗೆ ಇನ್ಯಾವುದರ ಚಿಂತೆ ಎಂದು ಅಕ್ಕ ಕಲ್ಯಾಣದತ್ತ ಮುಖ ಮಾಡುತ್ತಾಳೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…