ಕಾಯಕವೇ ಕೈಲಾಸ……

0
201

ಜಗತ್ತಿನಲ್ಲಿ ಕಾಯಕ ಜೀವಿಗಳ ಸಂಘಟನೆ ಮಾಡಿದವರಲ್ಲಿ ಬಸವಣ್ಣನವರು ಮೊದಲಿಗರು. ಸಮಾಜೋಧಾರ್ಮಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದ ಕಾಯಕಜೀವಿಗಳಿಗೆ ಯಾವುದೇ ಸ್ಥಾನವಿರಲಿಲ್ಲ. ತಮ್ಮ ಬದುಕಿನ ಅಸ್ತಿತ್ವಕ್ಕಾಗಿ ಹೋರಾಟ ಮಾಡುವ ಕಾಯಕ ಜೀವಿಗಳಿಗಳನ್ನು ಸಂಘಟಿಸುವ ಮೂಲಕ ಸಮಾನತೆಯ ಸಿದ್ಧಾಂತ ಪರಿಕಲ್ಪನೆ ಮೂಡಿಸಿದರು .

ತಳವರ್ಗ ಸಮುದಾಯದ ಕಾಯಕ ಜೀವಿಗಳ ಮೇಲೆ ನಿರಂತರ ಶೋಷಣೆ ನಡೆಯುತ್ತಿರುವುದು ಕಂಡ ಬಸವಣ್ಣ ಸಮಾನತೆ ಸಮಾಜ ರೂಪಿಸಲು ಮುಂದಾದರು . ಯಾವುದೇ ಕಾಯಕವಾದರೂ ಅದು ನಿಷ್ಠೆ, ಪ್ರಾಮಾಣಿಕವಾಗಿ ಕಾಯಕ ಮಾಡುವುದರ ಮೂಲಕ ಸ್ವಾಲಂಬನೆಯಾಗಿ ಬದುಕಲು ಪ್ರೋತ್ಸಾಹಿಸಿದರು . ‘ಕಾಯಕದಲ್ಲಿ ನಿರತನಾದಡೆ ಗುರು ದರ್ಶನವಾದರೂ ಮರೆಯಬೇಕೆಂದು ‘ ಹೇಳುವ ಮುಖಾಂತರ ಶರಣರು ಕಾಯಕಕ್ಕೆ ಅದೆಷ್ಟು ಮಹತ್ವ ಕೊಟ್ಟಿದರೆಂಬುದು ಗೊತ್ತಾಗುತ್ತದೆ .

Contact Your\'s Advertisement; 9902492681

ಕಾಯದಿಂದ ಗುರುವ ಕಂಡೆ, ಕಾಯದಿಂದ ಲಿಂಗವ ಕಂಡೆ, ಕಾಯದಿಂದ ಜಂಗಮವ ಕಂಡೆ, ಕಾಯದಿಂದ ಪ್ರಸಾದವ ಕಂಡೆ. ಕಾಯದಿಂದ ಸಕಳೇಶ್ವರದೇವರ ಪೂಜಿಸುವಲ್ಲಿ, ಉತ್ತರಸಾಧಕನಾದೆಯಲ್ಲಾ, ಎಲೆ ಕಾಯವೆ. ಎಂದು ‘ಸಕಳೇಶ ಮಾದರಸ’ ಶರಣರು ಭಕ್ತಿಯ ಕಾಯಕದಲ್ಲಿ ಗುರು ಲಿಂಗ ಜಂಗಮ ಹಾಗೂ ಪ್ರಸಾದವ ಕಂಡುಕೊಳ್ಳಲು ಸಾಧ್ಯ ಎಂಬುದು ಹೇಳುತ್ತಾರೆ .ಜಗತ್ತಿನಲ್ಲಿ ಪ್ರತಿಯೊಬ್ಬರು ಕಾಯಕ ಬದುಕು ನಡೆಸಬೇಕು, ಕಾಯಕ ಬದುಕು ನಮ್ಮ ಜೀವನಕ್ಕೆ ಬೆಳಕು ನೀಡುತ್ತದೆ . ಯಾವುದೇ ಕಾಯಕವಿದ್ದರೂ ನಾವು ಹೆಮ್ಮೆಯಿಂದ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸುತ್ತಾರೆ .

ವಿಶ್ವದ ಎಲ್ಲಾ ಕಾಯಕ ಜೀವಿಗಳಿಗೆ ಕಾರ್ಮಿಕ ದಿನಾಚರಣೆಯ ಗೌರವಪೂರ್ವಕ ಶುಭಾಷಯಗಳು

ಬಾಲಾಜಿ ಕುಂಬಾರ, ಚಟ್ನಾಳ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here