ವಿದ್ಯಾರ್ಥಿನಿಯರಿಗೆ ಸ್ವ-ರಕ್ಷಣಾ ಕಲೆ ಅವಶ್ಯಕವಾದುದು: ರಾಜಾ ಕೃಷ್ಣಪ್ಪ ನಾಯಕ

0
122

ಸುರಪುರ: ಇಂದು ವಿದ್ಯಾರ್ಥಿನಿಯರಿಗೆ ಸ್ವ-ರಕ್ಷಣಾ ಕಲೆ ಅವಶ್ಯವಾದುದಾಗಿದೆ.ಇದನ್ನು ಮನಗಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿನಿಯರಿಗೆ ತರಬೇತಿ ಕೊಡಿಸುವ ಮೂಲಕ ಉತ್ತಮವಾದ ಕಾರ್ಯ ಮಾಡಿದೆ ಎಂದು ಸುರಪುರ ರಾಜ ವಂಶಸ್ಥ ರಾಜಾ ಕೃಷ್ಣಪ್ಪ ನಾಯಕ ಮಾತನಾಡಿದರು.

ನಗರದ ಶ್ರೀಪ್ರಭು ಕಾಲೇಜು ಮೈದಾನದಲ್ಲಿ ಎಬಿವಿಪಿಯಿಂದ ಹಮ್ಮಿಕೊಂಡಿದ್ದ ಮಿಷನ್ ಸಾಹಸಿ ವಿದ್ಯಾರ್ಥಿನಿಯರ ಸ್ವ-ರಕ್ಷಣಾ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿನಿಯರಲ್ಲಿ ಹೆಚ್ಚೆಚ್ಚು ಆತ್ಮಸ್ಥೈರ್ಯ ಹೆಚ್ಚಲಿದೆ ಹಾಗು ಅವರಿಗೆ ಸದಾಕಾಲ ನೆರವಾಗಲಿದೆ ಎಂದರು.

Contact Your\'s Advertisement; 9902492681

ಮತ್ತೋರ್ವ ಮುಖ್ಯ ಅತಿಥಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿ,ಮಿಷನ್ ಸಾಹಸಿ ಹೆಸರಲ್ಲಿ ವಿದ್ಯಾರ್ಥಿನಿಯರ ಸ್ವ-ರಕ್ಷಣಾ ತರಬೇತಿ ನೀಡುವ ಮೂಲಕ ಸರಕಾರಕ್ಕೂ ಇದು ಮಾದರಿಯಾದಂತಾಗಿದೆ. ಎಬಿವಿಪಿ ಇಂತಹ ಕಾರ್ಯಕ್ರಮದ ಮೂಲಕ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.ಇದರಲ್ಲಿ ಇನ್ನೂ ಹೆಚ್ಚೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿ ಸ್ವ-ರಕ್ಷಣಾ ಕೆಲಯನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.

ಎಬಿವಿಪಿ ವಿಭಾಗಿಯ ಸಹ ಪ್ರಮುಖ ಉಪೇಂದ್ರ ನಾಯಕ ಸುಬೇದಾರ ಮಾತನಾಡಿ,ವಿದ್ಯಾರ್ಥಿನಿಯರ ಮನೋ ಬಲ ಮತ್ತು ದೈಹಿಕ ಬಲ ಹೆಚ್ಚಳದ ಉದ್ದೇಶದಿಂದ ಇಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಿಷನ್ ಸಾಹಸಿ ಆರಂಭಿಸಿದೆ,ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಹದಿನೈದು ದಿನಗಳಿಂದ ನಿತ್ಯವೂ ಕರಾಟೆ ತರಬೇತಿಯನ್ನು ಕೊಡಿಸಲಾಗಿದೆ. ಇದರಿಂದ ವಿದ್ಯಾರ್ಥಿನಿಯರು ತಮ್ಮ ಮೇಲೆ ಆಗುವ ಅನಿರೀಕ್ಷಿತವಾದ ಆಕ್ರಮಣಗಳಿಂದ ರಕ್ಷಿಸಿಕೊಳ್ಳಬಹುದು. ಇಂದು ಸಮಾಜದಲ್ಲಿ ನಿತ್ಯವೂ ಮಹಿಳೆಯರ ಮೇಲೆ ಹಲ್ಲೆ ಅತ್ಯಾಚಾರಗಳು ನಡೆಯುತ್ತಿವೆ, ಇದರಿಂದ ಮಹಿಳೆಯರು ತಮ್ಮ ರಕ್ಷಣೆ ಪಡೆಯಲು ಸಾಧ್ಯವಿದೆ.ರಾಷ್ಟ್ರವ್ಯಾಪಿ ಮಹಿಳೆಯರನ್ನು ಸಾಹಸಿಗಳನ್ನಾಗಿ, ಸಬಲೆಯರನ್ನಾಗಿ ಮಾಡುವ ಉದ್ದೇಶ ಈ ಮಿಷನ್ ಸಾಹಸಿಗಿದೆ.ಇದಕ್ಕೆ ಎಲ್ಲಾ ವಿದ್ಯಾರ್ಥಿನಿಯರು ಭಾಗಿಗಳಾಗಿ ಸ್ವ-ರಕ್ಷಣಾ ಕಲೆಯನ್ನು ರೂಢಿಸಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಹದಿನೈದು ದಿನಗಳ ಕಾಲ ವಸತಿನಿಲಯದಲ್ಲಿ ಸ್ವ-ರಕ್ಷಣಾ ಕರಾಟೆ ಕಲೆಯ ತರಬೇತಿ ಪಡೆದ ವಿದ್ಯಾರ್ಥಿನಿಯರಿಂದ ಕಲಾ ಪ್ರದರ್ಶನ ನಡೆಯಿತು.ಇದರಲ್ಲಿ ಅನೇಕ ಜನ ವಿದ್ಯಾರ್ಥಿನಿಯರು ಕರಾಟೆಯ ವಿವಿಧ ಭಂಗಿಗಳ ಮೂಲಕ ತಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿದರು.ನಂತರ ಜಿನೇವಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕರನ್ನು ಎಬಿವಿಪಿಯಿಂದ ಸನ್ಮಾನಿಸಲಾಯಿತು.ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಸ್.ಹೆಚ್.ಹೊಮನಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ,ಟಿಹೆಚ್‌ಒ ಡಾ: ಆರ್.ವಿ.ನಾಯಕ,ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮಿಸೇ,ಶಹಾಪುರ ಅಬಕಾರಿ ನಿರೀಕ್ಷಕರು ಭಾರತಿ ವಿದ್ಯಾಧರ,ಉಪನ್ಯಾಸಕಿ ಲಕ್ಷ್ಮೀಬಾಯಿ ಕುರ್ಲಿ,ಉಪನ್ಯಾಸಕ ವೇಣುಗೋಪಾಲ ಜೇವರ್ಗಿ,ಎಬಿವಿಪಿ ಕಲಬುರ್ಗಿ ವಿಭಾಗಿಯ ಸಂಘಟನಾ ಕಾರ್ಯದರ್ಶಿ ಧನಂಜಯ್,ಮಹ್ಮದ್ ವಾರೀಸ್ ಕುಂಡಾಲೆ ಇದ್ದರು.

ಎಬಿವಿಪಿಯ ಜಿಲ್ಲಾ ಸಂಚಾಲಕ ಕ್ಯಾತಪ್ಪ ಮೇದಾ,ವಿಭಾಗ ಸಹ ಸಂಚಾಲಕ ನಾಗರಾಜ ಮಕಾಶಿ,ನಗರ ಕಾರ್ಯದರ್ಶಿ ಪರಶುರಾಮ ಬೈಲಕುಂಟಿ,ಶಂಕರಲಿಂಗ,ಹಣಂತ್ರಾಯ ಮಂಜಲಾಪುರ,ಬಸ್ಸು ಮೇದಾ,ಹುಲಗಪ್ಪ ಮೇದಾ,ಮಲ್ಲಯ್ಯ ಹಿರೇಮಠ,ಭೀಮು ಚಂದ್ಲಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here