ಸುರಪುರ: ಈ ಭಾಗದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಕೆರೆ-ಬಾವಿಗಳನ್ನು ಕಟ್ಟಿಸುವ ಮೂಲಕ ಹಾಗೂ ಅನ್ನ ದಾಸೋಹ ದಾನಿಗಳಾಗಿದ್ದ ಸುರಪುರ ಸಂಸ್ಥಾನದ ಇಲ್ಲಿನ ರಾಜರ ಆಡಳಿತ ಕಾಲದಲ್ಲಿ ನಿಷ್ಠಿ ಮನೆತನದವರಾದ ವೀರಪ್ಪ ನಿಷ್ಠಿ ಅವರು ಕೈಗೊಂಡ ಜನಪರ ಅಭಿವೃಧ್ಧಿ ಕಾರ್ಯಗಳು ಸೇರಿದಂತೆ ಇಂದಿನವರೆಗೂ ನಿಷ್ಠಿ ಕುಟುಂಬದ ಕೊಡುಗೆ ಅಪಾರ ಎಂದು ಬಳ್ಳಾಗಿ ಜಿಲ್ಲೆ ಕ.ಸಾ.ಪ. ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಹೇಳಿದರು.
ನಗರದ ಹಸನಾಪುರ ಕ್ಯಾಂಪ್ ಬಳಿ ಇರುವ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವೀರಭದ್ರಪ್ಪ ನಿಷ್ಠಿರವರ ೧೧ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿ ಈ ಭಾಗದಲ್ಲಿ ನಿಷ್ಠಿ ಎಂದರೇ ವೀರಪ್ಪ ನಿಷ್ಠಿರವರ ಹೆಸರು ಪ್ರತಿಯೊಬ್ಬರ ಮನಸ್ಸಿನಲ್ಲಿ ನೆನಪಾಗುತ್ತದೆ ಅವರು ಕೈಗೊಂಡ ಅನೇಕ ಜನ ಕಲ್ಯಾಣ ಕಾರ್ಯಕ್ರಮಗಳು ಇಂದಿಗೂ ಚಿರಸ್ಥಾಯಿ ಆಗಿ ಉಳಿದಿವೆ ಎಂದ ಅವರು ಈಗ ಈ ಮನೆತನದವವರಾದ ಶರಣಬಸಪ್ಪ ನಿಷ್ಠಿ ಅವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ವಿಶಾಲವಾದ ಭೂಮಿಯನ್ನು ದಾನವಾಗಿ ನೀಡುವ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ನಿಷ್ಠಿ ಕಾರ್ಯಕ್ರಮ ಉದ್ಘಾಟಿಸಿದರು, ಅಧ್ಯಕ್ಷತೆ ವಹಿಸಿದ್ದ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ಶರಣಬಸಪ್ಪ ನಿಷ್ಠಿ ಮಾತನಾಡಿದರು, ಕಬಾಡಗೇರಾ ಕಡ್ಲಪ್ಪನವರ ಮಠದ ಪ್ರಭುಲಿಂಗ ಮಹಾಸ್ವಾಮಿಗಳು ಹಾಗೂ ನೀಲಮ್ಮ ತಾಯಿ ವೀರಭದ್ರಪ್ಪ ನಿಷ್ಠಿ ಜಹಾಗೀರದಾರ ಸಾನಿಧ್ಯ ವಹಿಸಿದ್ದರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರವೀಂದ್ರಕುಮಾರ ನಾಗರಾಳೆ, ಶರಣಬಸವ ಕಾಲೇಜಿನ ಪ್ರಾಂಶುಪಾಲ ಡಾ.ಅನಿಲಕುಮಾರ ಪಾಟೀಲ, ಹಾಗೂ ಬಸವರಾಜಪ್ಪ ಅಪ್ಪಾ ಪದವಿ ಕಾಲೇಜಿನ ಪ್ರಾಂಶುಪಾಲ ನಾನಾಗೌಡ ದೇಸಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ರೇವಪ್ಪ ನಿರೂಪಿಸಿದರು, ರತ್ನಪ್ರಭಾ ಅತಿಥಿಗಳನ್ನು ಪರಿಚಯಿಸಿದರು ಹಾಗೂ ರಶ್ಮಿ ಹಿರೇಮಠ ವಂದಿಸಿದರು.
ಸನ್ಮಾನ : ಈ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಕ್ಕಾಗಿ ಸುರಪುರ ಸಂಸ್ಥಾನದ ರಾಜ ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ ಅವರನ್ನು ಹಾಗೂ ಡಾ.ಶಾಂತಲಾ ಎಸ್.ನಿಷ್ಠಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು,