ಕಲಬುರಗಿ/ಆಳಂದ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಸಿಎಬಿ ವಿರೋಧಿಸಿ ಪಟ್ಟಣದಲ್ಲಿ ಸಂವಿಧಾನ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರಗತಿಪರರು ಆಕ್ರೋಶ ಹೊರಹಾಕಿದರು.
ಬಸ್ ನಿಲ್ದಾಣ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ಮುಖಂಡರನ್ನು ತಡೆಯೊಡಿದ್ದ ಪೊಲೀಸರು ತಹಸೀಲ್ದಾರ ಅವರಿಗೆ ಕರೆಯಿಸಿ ಮನವಿ ಸಲ್ಲಿಸಲು ಅವಕಾಶ ನೀಡಿ ಪ್ರತಿಭಟನೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರು ಆಕ್ರೋಶ ಹೊರಹಾಕಿ ರಜ್ವಿರೋಡ್ ಮೂಲಕ ದಾರುಲ್ ಸಭಾಂಗಣದ ವರೆಗೆ ಬೃಹತ್ ಸಂಖ್ಯೆಯಲ್ಲಿ ಹಿಂದುರುಗಿದರು.
ಈ ಮೊದಲು ಕಲಬುರಗಿಯಿಂದ ಕಡಗಂಚಿ ಬಳಿ ಬರುತ್ತಿದ್ದ ಮುಖಂಡ ಮೌಲಾ ಮುಲ್ಲಾ, ಅಫಜಲ ಅನ್ಸಾರಿ, ಎಂ.ಡಿ. ಖೈಯಿಪ್ ಅನ್ಸಾರಿ ಅವರನ್ನು ನರೋಣಾ ಪೊಲೀಸರು ವಶಕ್ಕೆ ಪಡೆಕೊಂಡರು. ಆಳಂದ ಪಟ್ಟಣದಲ್ಲಿ ಎಂಐಎಂ ತಾಲೂಕು ಅಧ್ಯಕ್ಷ ಜಹೀರ್ ಅನ್ಸಾರಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿ ತಹಬಂದಿಗೆ ತರಲು ಮುಂಜಾಗೃತ ಕ್ರಮವಾಗಿ ಬೀಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಭಾರತ ಸಂವಿಧಾನವು ಜಾತ್ಯತೀತ ಆಶಯ ಹೊಂದಿದ್ದು, ಧರ್ಮದ ಹೆಸರಿನಲ್ಲಿ ಪೌರತ್ವ ನಿರ್ಧರಿಸುವ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಗ್ರೇಡ್-೨ ತಹಸೀಲ್ದಾರ ಬಿ.ಜಿ. ಕುದರಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯ ಲಾಭಕ್ಕಾಗಿ ದೇಶೇದ ಹಿತ ಬಲಿಕೊಟ್ಟು ಬಿಜೆಪಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಹೊರಟಿದೆ ಎಂದು ಟೀಕಿಸಿದರು.
ಬೆಂಬಲಿಸಿ ರಮೇಶ ಲೋಹಾರ ಪಾಲ್ಗೊಂಡಿದ್ದರು. ಅಲ್ಲದೆ, ಸಂವಿಧಾನ ರಕ್ಷಣಾ ಸಮಿತಿಯ ತಹ್ರಿಕ್-ಎ-ಖುದಾದ್ ಹೈ.ಕ. ಅಧ್ಯಕ್ಷ ರಫೀಕ ಮುಲ್ಲಾ, ಆಸ್ಫಾಕ್ ಮುಲ್ಲಾ, ಅಬ್ದುಲ್ ರಜಾಕ ಶೇಖ, ಬಾಬಾಶೇಖ, ಬಾವಾಸಾಬ ಖುರೇಷಿ, ಯುನೂಸ್ ಭಾಗವಾನ, ಇಮ್ರಾನ್ ಖಾಜಿ, ಮೋಹಿಜ್ ಕಾರಬಾರಿ, ಹಮ್ಮಿದ ಅನ್ಸಾರಿ, ಹಾಜಿ ಅಹ್ಮೆದ್ ಚುಲಬುಲ್, ಪುರಸಭೆ ಸದಸ್ಯ ಅಮ್ಜದ್ ಅಲಿ ಖರ್ಜಗಿ ಮತ್ತಿತರರು ಪಾಲ್ಗೊಂಡಿದ್ದರು.
ಆಳಂದ ಪಟ್ಟಣದಲ್ಲಿ ತಾಲೂಕು ಮಟ್ಟದ ಗುರುವಾರದ ಸಂತೆ ಯತ್ತಾವತ್ತಾಗಿ ನಡೆಯಿತು. ಪ್ರತಿಭಟನಾಕಾರರ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಶಿವಾನಂದ ಗಾಣಿಗೇರ್, ಪಿಎಸ್‌ಐ ಮಲ್ಲಿಕಾರ್ಜುನ, ಅಫಜಲಪೂರ ಸಿಪಿಐ ಮಹಾದೇವ ಪಂಚಮುಖಿ, ರೇವೂರ ಠಾಣೆ ಪಿಎಸ್‌ಐ ಸುರೇಶ ಬಾಬು, ನರೋಣಾದ ಉದ್ದಂಡಪ್ಪ, ನಿಂಬರಗಾ ಠಾಣೆಯ ಪಿಎಸ್‌ಐ ಸುರೇಶ ಚವ್ಹಾಣ ಸೇರಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ, ಕೆಎಸ್‌ಆರ್‌ಪಿ ತುಕಡಿ ಬಂದೋಬಸ್ತ್ ಒದಗಿಸಿ ಮುಂಜಾಗೃತ ಕ್ರಮವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…