ಕಲಬುರಗಿ: ಧರ್ಮಶಾಸ್ತ್ರ ಸಂವಿಧಾನವಲ್ಲ. ಮಹಿಳೆಯರ ಬದುಕಿಗೆ ಶರಣರು ಬೆಲೆ ತಂದುಕೊಟ್ಟರು ಎಂದು ಗುಲ್ಬರ್ಗ ವಿವಿಯ ಪ್ರಸಾರಂಗದ ನಿರ್ದೇಶಕರಾದ ಡಾ.ಎಚ್.ಟಿ. ಪೋತೆ ಅಭಿಪ್ರಾಯಪಟ್ಟರು.
ಅವರು ಬಸವ ಪ್ರಕಾಶನ ಕಲಬುರಗಿ ಹಾಗೂ ಸಂಸ್ಥಾಪಕ ಲಿಂ. ಬಸಮ್ಮಬ. ಕೊನೇಕ ರವರ 6ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ‘ಬಸವ ಸಿರಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಚರಿತ್ರೆಯ ಸಂರಕ್ಷಣೆ ಪ್ರಜ್ಞೆ ಭಾರತೀಯರಲ್ಲಿ ಇಲ್ಲ. ಬಸವ ಪಾರಾಯಣ ಬಿಡಿ, ಬಸವ ಪ್ರಜ್ಞೆ ಬೆಳಸಿ ಎಂದು ಅವರು ಕರೆ ನೀಡಿದರು.
ಬಸವ ಸಿರಿ ಪ್ರಶಸ್ತಿ ಪುರಸ್ಕೃತರಾದ ಜಮಖಂಡಿಯ ಬಸವಜ್ಞಾನ ಗುರುಕುಲದ ಶರಣ ಡಾ. ಈಶ್ವರ ಮಂಟೂರ ಅವರಿಗೆ ಬಸವ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ವ್ಯಕ್ತಿಗೆ ಪಟ್ಟ ಕಟ್ಟುವ ಬದಲು ಕಾಯಕಕ್ಕೆ ಪಟ್ಟ ಕಟ್ಟಬೇಕು. ಕಾಡು ಪ್ರಾಣಿಗಳು ಕಾಡಿನಲ್ಲಿವೆ. ಕಾಡಿನ ಪ್ರಾಣಿಗಳು ನಾಡಿನಲ್ಲಿವೆ ಎಂದರು.
ನನಗೆ ಕೊಟ್ಟಿರುವ 11 ಸಾವಿರ ಮೊತ್ತದ ಪ್ರಶಸ್ತಿ ಮೊತ್ತವನ್ನು 11 ಜನ ಕಾಯಕ ಜೀವಿಗಳಿಗೆ ತಲಾ ಒಂದು ಸಾವಿರ ನೀಡಿ ಗೌರವಿಸುತ್ತೇನೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಮಹಿಳೆಯಿಂದಲೇ ಮನೆ, ಮನೆತನ ಉಚ್ರಾಯ ಸ್ಥಿತಿಯಲ್ಲಿ ಬರಲಿದೆ ಎನ್ನುವುದಕ್ಕೆ ಲಿಂ. ಬಸಮ್ಮ ಬ. ಕೊನೇಕ್ ಸಾಕ್ಷಿಯಾಗಿದ್ದರು ಎಂದು ತಿಳಿಸಿದರು.
ಬಸವರಾಜ ಕೊನೇಕ್, ಶರಣಬಸವ, ಸಿದ್ದು ಕೊನೇಕ್ ಇತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…