ಬಿಸಿ ಬಿಸಿ ಸುದ್ದಿ

ರಾಜ್ಯಮಟ್ಟದ ವಿದ್ಯಾರ್ಥಿ ಆಪ್ತಸಮಾಲೋಚನ ಕೌಶಲ್ಯ ತರಬೇತಿ ಕಾರ್ಯಾಗಾರ

ಕಲಬುರಗಿ: ಡಿಜಿಟಲ್ ಕಾಲಕ್ಕೆ ತಕ್ಕಂತೆ ಉಪನ್ಯಾಸಕವರ್ಗ ಆಧುನಿಕ ವಿದ್ಯಾರ್ಥಿ ಆಪ್ತಸಮಾಲೋಚನಾ ಕೌಶಲ್ಯಗಳನ್ನು ಎನ್ ಎಲ್ ಪಿ ಎನ್ನುವ ಆಂತರ್ಯ ವಿಜ್ಞಾನ ಕೌಶಲ್ಯ ತರಬೇತಿ ಪಡೆಯುವುದು ಅವಶ್ಯಕವಾಗಿದೆ ಎಂದು  ಬಿ ಎಲ್ ಡಿ ಸಂಸ್ಥೆಯ ವಾಣಿಜ್ಯ ಬಿ ಎಚ್ ಎಸ್ ಕಲಾ ಮತ್ತು  ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದ ಆಡಳಿತಾಧಿಕಾರಿ ಎಸ್ ಎಚ್ ಲಗಳಿ ಹೇಳಿದರು.

ಇಂದು ಬಿ ಎಲ್ ಡಿ ಸಂಸ್ಥೆಯ ವಾಣಿಜ್ಯ ಬಿ ಎಚ್ ಎಸ್ ಕಲಾ ಮತ್ತು  ಟಿಜಿಪಿ ವಿಜ್ಞಾನ  ಮಹಾವಿದ್ಯಾಲಯದಲ್ಲಿ  ಜರುಗಿದ  ಉಪನ್ಯಾಸಕರಿಗಾಗಿ ಆಯೋಜಿಸಿದ್ದ  ಒಂದು ದಿನದ ರಾಜ್ಯಮಟ್ಟದ ವಿದ್ಯಾರ್ಥಿ ಆಪ್ತಸಮಾಲೋಚನ ಕೌಶಲ್ಯ ತರಬೇತಿ ಕಾರ್ಯಾಗಾರ  ಉದ್ಘಾಟಿಸಿ ಮಾತನಾಡಿದ ಅವರು, ತರಬೇತಿ ನೀಡಲು ಬೆಂಗಳೂರಿನಿಂದ ಆಗಮಿಸಿದ ಮನೋತಜ್ಞ ಹಾಗೂ ಶೈಕ್ಷಣಿಕ ತಜ್ಞ, ಭುಜಬಲಿ ಬೋಗಾರ ಅವರಿಗೂ ನಾನು ಅಭಿನಂದನೆ ಹೇಳುತ್ತೇನೆ, ಉಪನ್ಯಾಸಕವರ್ಗದವರಾದ ತಾವೆಲ್ಲರೂ ಈ ತರಬೇತಿ ಶಿಬಿರದ ಸದುಪಯೋಗ ಪಡೆದು ಅತ್ಯುತ್ತಮ ಉಪನ್ಯಾಸಕರಾಗಿ ಕಾರ್ಯರ್ನಿಹಿಸಿ. ಆವಾಗಲೇ ಭಾರತವನ್ನು ಒಂದು ವಿಶ್ವಶಕ್ತಿ ದೇಶವನ್ನಾಗಿ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ನಂತರ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ರಾಜ್ಯಮಟ್ಟದ ವಿದ್ಯಾರ್ಥಿ ಆಪ್ತಸಮಾಲೋಚನ ಕೌಶಲ್ಯ ತರಬೇತಿ ಕಾರ್ಯಾಗಾರ  ನಡೆಸಿಕೊಟ್ಟ  ಟಾನ್ಸ್‌ಫಾರ್ಮೊ ಇನ್‌ಕಾರ್ಪ್ ತರಬೇತಿ ಸಂಸ್ಥಾಪಕ ಮನೋತಜ್ಞ  ಹಾಗೂ ಶೈಕ್ಷಣಿಕ ತಜ್ಞ ಮಾತನಾಡಿ,ಇಂದಿನ ಯುವಜನತೆ ಅತ್ಯಂತ ಮಾನಸಿಕ ತೊಳಲಾಟದಲ್ಲಿದ್ದು ,ಸ್ವಯಂ ನಿರ್ಧಾರವನ್ನು ಸರಿಯಾಗಿ ತೆಗೆದುಕೊಳ್ಳಲಿಕ್ಕಾಗದ ಪರಿಸ್ಥಿತಿಯಲ್ಲಿದ್ದಾರೆ.ಮೊಬೈಲ್,ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣದ ಸುಳಿಯಲ್ಲಿ ಸಿಲುಕಿ ಅವರ ಅಮೂಲ್ಯವಾದ ಸಮಯ ಮತ್ತು ಪಾಲಕರ ಶ್ರಮವನ್ನು ದುರುಪಯೋಗಪಡಿಸಿಕೊಂಡು ನಂತರ ಪಶ್ಚಾತ್ತಾಪ ಪಟ್ಟು ಅದರಿಂದ ಹೊರಬರಲಾಗದೇ ತೊಳಲಾಟದಲ್ಲಿದ್ದಾರೆ.ಈ ನಿಟ್ಟಿನಲ್ಲಿ ಅವರನ್ನು ಎನ್ ಎಲ್ ಪಿ ಆಧುನಿಕ ಪದ್ಧತಿಯಾದ ಆಪ್ತಸಮಾಲೋಚನೆಯ ಮೂಲಕ ವಿದ್ಯಾರ್ಥಿಗಳನ್ನು ಮನಪರಿವರ್ತನೆಗೆ ಪ್ರೇರೇಪಿಸಿ ಸದೃಢಗೊಳಿಸಲು ಉಪನ್ಯಾಸಕರು ಕಾರ್ಯೋನ್ಮಖರಾಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ವಿಶೇಷ ಕೌಶಲ್ಯಗಳನ್ನು ಗುರ್ತಿಸಿ ಅವರಲ್ಲಿನ ಪ್ರತಿಭೆ ಹೊರತೆಗೆಯುವ ಕೆಲಸ ಉಪನ್ಯಾಸಕರಿಂದಾಗಬೇಕಾಗಿದೆ. ಹಾಗಾಗಿ ಉಪನ್ಯಾಸಕರು ತಮ್ಮ ವ್ಯಕ್ತಿತ್ವವನ್ನು ಪ್ರಭಾವಶಾಲಿ ಹಾಗೂ ಮಾದರಿಯಾಗಿಸಿಕೊಳ್ಳಲು ಪರಿಣಾಮಕಾರಿ ಆಪ್ತಸಮಾಲೋಚನೆ ಹಾಗೂ ಬೋಧನೆಗೆ ಈ ರೀತಿಯ ತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕವಾಗಿವೆ ಎಂದು ಹೇಳಿದರು.

ಸ್ವಾಗತಗೀತೆ ಅಕ್ಷತಾ ಕಟ್ಟಿ, ಪ್ರಾಸ್ತಾವಿಕ ಎಸ್ ಬಿ ಕಮತಿ,ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಿ ಎಲ್ ಡಿ ಸಂಸ್ಥೆಯ ವಾಣಿಜ್ಯ ಬಿ ಎಚ್ ಎಸ್ ಕಲಾ ಮತ್ತು  ಟಿಜಿಪಿ ವಿಜ್ಞಾನ  ಮಹಾವಿದ್ಯಾಲಯದ  ನ್ಯಾಕ್ ಕಮಿಟಿ ಕೊಆರ್ಡಿನೇಟರ್ ಎಮ್ ಸಿ ಕಾರಭಾರಿ,ಉಪಪ್ರಾಚಾರ್ಯರು ಕೆ ಎಸ್ ಪಾಟೀಲ್, ಐಕ್ಯೂಎಸ್ ಸಿ ಕೊಆರ್ಡಿನೇಟರ್ ಎಸ್ ಬಿ ಕಮತಿ ,ಮೌನಯೋಗಿ ಫೌಂಡೇಶನ್ನಿನ sಸಂಸ್ಥಾಪಕ ಅಧ್ಯಕ್ಷರಾದ ಶ್ರಾವಣಯೋಗಿ ಹಿರೇಮಠ,ಬಿಎಲ್‌ಡಿ ಸಂಸ್ಥೆಯ ಆಡಳಿತ ಮಂಡಳಿ ಅಧಿಕಾರಿ ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago