ಆಳಂದ: ಪಟ್ಟಣದ ಪುರಸಭೆ ವ್ಯಾಪ್ತಿಯ ಬೀದಿಬದಿಯ ವ್ಯಾಪಾರಿಗಳ ಸಮಿತಿ ಸದಸ್ಯರ ಆಯ್ಕೆಗೆ ಇದೇ ಮೊದಲು ಬಾರಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದು ಗಮನ ಸೆಳೆಯಿತು.
ಪಟ್ಟಣದ ಜೈನಪಾಠ ಶಾಲೆಯಲ್ಲಿ ಸ್ಥಾಪಿಸಿದ ಎರಡು ಮತಗಟ್ಟೆಯಲ್ಲಿ ಮತದಾನ ನಡೆಯಿತು. ಒಟ್ಟು ೪೭೦ ಮತದಾರರಿದ್ದು, ಈ ಪೈಕಿ ೨೮೨ ವ್ಯಾಪಾರಿಗಳು ಮತದಾನ ಕೈಗೊಂಡರು. ಒಟ್ಟು ೭ ಸ್ಥಾನಕ್ಕೆ ನಾಲ್ವರು ಮಹಿಳಾ ಪ್ಯಾಪಾರಿಗಳು ಪುರುಷರು ಸೇರಿ ೧೪ ಜನ ಸ್ಪರ್ಧಿಸಿದ್ದು ಗಮನಾರ್ಹವಾಗಿತ್ತು.
ಚುನಾವಣಾಧಿಕಾರಿ, ಸಿಡಿಒ ಸಿಂಜಯ ಕಪೂರ್, ಸಹಾಯಕ ಅಧಿಕಾರಿ ಪರಶುರಾಮ ಯಾದವ ಸಹಾಯಕ, ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ಇನ್ನಿತರ ಸಿಬ್ಬಂದಿಗಳೊಂದಿಗೆ ಬೆಳಗಿನ ೯:೦೦ಗಂಟೆಯಿಂದ ಮಧ್ಯಾಹ್ನ ೪:೦೦ಗಂಟೆಯ ತನಕ ಮತದಾನ ಪ್ರಕ್ರಿಯೆ ನಡೆಸಿದರು. ಬಳಿಕ ಮತ ಏಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗಿದೆ.
ಮಹಿಳಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಬಿಸ್ಮೀಲಾ ಇಬ್ರಾಹಿಂ ಭಾಗವಾನ ೧೭೦ (ಗೆಲುವು), ಪ್ರತಿಸ್ಪರ್ಧಿ ಗೋರಿಮಾ ಬಾಬುಲಾಲ ಭಾಗನವಾನ ೧೬೦ (ಸೋಲು), ಕಣದಲ್ಲಿದ್ದ ಸಿದ್ಧಮ್ಮ ಬಸವರಾಜ ೧೫೧, ನಾಗಮ್ಮ ಬಸವರಾಜ ೧೩೪ ಮತಗಳನ್ನು ಪಡೆದಿದ್ದಾರೆ.
ಅಲ್ಪಸಂಖ್ಯಾತರ ಸ್ಥಾನಕ್ಕೆ ಜಾವೇದ ಕಾಶೀಂ ಭಾಗವಾನ ೧೪೯ (ಗೆಲುವು) ಅಬ್ದುಲ ಖಾದರ ಯಾಖುಬ ಅಲಿ ೬೪ (ಸೋಲು), ಹಿಂದುಳಿದ ವರ್ಗದ್ ಕ್ಷೇತ್ರಕ್ಕೆ ಗುರುನಾಥ ಭೀಮಣ್ಣಪ್ಪ ಕಳಸೆ ೧೪೦ (ಗೆಲುವು), ಸೂರ್ಯಕಾಂತ ಶಣರಪ್ಪ ೮೭ (ಸೋಲು), ಸಾಮಾನ್ಯ ಕ್ಷೇತ್ರಕ್ಕೆ ೨ ಸ್ಥಾನಗಳಿಗೆ ಫಾರುಕ್ ಅಲಿ ಮೈನೋದ್ದೀನ ಭಾಗವಾನ ೧೦೮ (ಗೆಲವು) ಪ್ರತಿಸ್ಪರ್ಧಿ ಸೈಫಾನ್ ಮಹಿಬೂಬ ಭಾಗವಾನ ೯೭ (ಸೋಲು) ಕಣದಲ್ಲಿದ್ದ ಜಗದೀಶ ಭೀಮಶಾ ಖರಾತೆ ೯೫ ನಾರಾಯಣ ಫುಲಚಂದ ಚವ್ಹಾಣ ೫೬ ಹಾಗೂ ಇಸ್ಲಾಕ್ ಅಲಿ ಅಬ್ದುಲಮಿಯಾ ೫೯ ಸಿದ್ಧರೂಢ ಅಡಿವೆಪ್ಪ ಅಲ್ಮದ್ ೨೦ ಮತಗಳನ್ನು ಪಡೆದಿದ್ದಾರೆ.
ಪರಿಶಿಷ್ಟ ಪಂಗಡದ (ಎಸ್ಸಿ) ಮತಕ್ಷೇತ್ರದಲ್ಲಿ ಸಾಬವ್ವ ಅರ್ಜುನ ಕಡಗಂಚಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಪ್ರಕಟಿಸಿದ್ದಾರೆ. ಅಲ್ಲದೆ, ಎಸ್ಟಿ ಮತ್ತು ಅಂಗವಿಕಲ ಈ ಎರಡು ಮೀಸಲು ಸ್ಥಾನಕ್ಕೆ ನಾಮಪತ್ರವೇ ಸಲ್ಲಿಕೆಯಾಗದ ಹಿನ್ನೆಲೆ ಚುನಾವಣೆ ನಡೆಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳಾಗಿ ಶಿವಶರಣಪ್ಪ ಪಾಟೀಲ ವಿಜಯ ರೆಡ್ಡಿ, ಯೋಗಿರಾಜ ಮಾಡಿಯಾಳ, ಚಾಂದಭಾಷಾ ಅನ್ಸಾರಿ, ಮಲ್ಲಿಕಾರ್ಜುನ ಕಾರ್ಯನಿರ್ವಹಿಸಿದರು.