ಬಿಸಿ ಬಿಸಿ ಸುದ್ದಿ

ಸಂತೆಕೆಲ್ಲೂರ್: ನಾಗಭೂಷಣ ಶಿವಯೋಗಿಗಳ ಸ್ಮರಣೋತ್ಸವ 29 ರಿಂದ

ಕಲಬುರಗಿ: ವೈರಾಗ್ಯ ಚಕ್ರವರ್ತಿ ಕೃಷಿ ಋಷಿ ಘನಮಠ ನಾಗಭೂಷಣ ಶಿವಯೋಗಿಗಳ ೧೪೦ನೇ ಪುಣ್ಯಸ್ಮರಣೋತ್ಸವ, ಮಹಾರಥೋತ್ಸವ, ಸಾಮೂಹಿಕ ವಿವಾಹ, ಶರಣರ ಜೀವನ ದರ್ಶನ ಪ್ರವಚನ ಮಹಾಮಂಗಲ ಡಿ.೨೯ರಿಂದ ಜನವೆರಿ ೧ರ ವರೆಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರ್ ಶ್ರೀ ಘನಮಠೇಶ್ವರರ ಮಠದಲ್ಲಿ ಬಹುವಿಜೃಂಭಣೆಯಿಂದ ಜರುಗಲಿವೆ ಎಂದು ಸಂತೆಕೆಲ್ಲೂರ್ ಶ್ರೀಮಠ ಹಾಗೂ ಫಿರೋಜಾಬಾದ್ ಅನ್ನದಾನೇಶ್ವರ ಮಠದ ಪೀಠಾಧಿಪತಿ ಪೂಜ್ಯ ಗುರುಬಸವ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಡಿ. ೨೯ ರಂದು ಸಂಜೆ ೭ ಗಂಟೆಗೆ ಜೇರಟಗಿಯ ಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರವಚನ ಮಂಗಲವಾಗಲಿದೆ. ಲಿಂಗಸ್ಗೂರುನ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮಸ್ಕಿಯ ವರರುದ್ರಮುನಿ ಶಿವಾಚಾರ್ಯರು, ಮುರುಘರಾಜೇಂದ್ರ ಸ್ವಾಮಿಗಳು, ಮರಿಮಹಾಂತ ದೇವರು ಸಮ್ಮುಖವಹಿಸುವರು. ಸ್ಥಳೀಯ ಸಹಾಯಕ ಆಯುಕ್ತ ಡಾ. ದಿಲೀಪ ಸಾಶಿ, ಸ್ಥಳೀಯ ತಹಸೀಲ್ದಾರ ಚಾಮರಾಜ್ ಪಾಟೀಲ್, ಡಿವೈಎಸ್ಪಿ ಬಿ. ಹರೀಶ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ೩೦ ರ ವರೆಗೆ ಕೃಷಿ ವಿಚಾರ ಸಂಕಿರಣ, ಕೃಷಿ ವಸ್ತು ಪ್ರದರ್ಶನ ನಡೆಯಲಿದೆ. ಕೃಷಿ ಋಷಿ ಪ್ರಶಸ್ತಿಗೆ ಸಂಗಣ್ಣ ಮಲ್ಲಪ್ಪ ಬಿಚಕಲ್ ಆಯ್ಕೆ ಮಾಡಲಾಗಿದೆ ಎಂದು ಸನ್ನಿಧಿಗಳು ತಿಳಿಸಿದ್ದಾರೆ.

ದಿ.೩೦ ರಂದು ಮಧ್ಯಾಹ್ನ ೧೨ ಗಂಟೆಗೆ ಸಾಮೂಹಿಕ ವಿವಾಹ ನಡೆದರೆ, ಸಂಜೆ ೭ ಗಂಟೆಗೆ ಪುಣ್ಯಸ್ಮರಣೋತ್ಸವ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಸಂತೆಕೆಲ್ಲೂರಿನ ಪೀಠಾಧಿಪತಿ ಗುರುಬಸವ ಮಹಾಸ್ವಾಮಿಗಳ ಸೇರಿದಂತೆ ಹರ ಗುರು ನೇತೃತ್ವದಲ್ಲಿ ಮಹಾರಥೋತ್ಸವ ನೆರವೇರಲಿದೆ. ನಂತರ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿಯ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಪೂಜ್ಯ ಡಾ. ಸಂಗಬಸವ ಸ್ವಾಮೀಜಿ ಸಾನಿಧ್ಯದಲ್ಲಿ ಇಲಕಲ್‌ನ ಗುರುಮಹಾಂತ ಸ್ವಾಮೀಜಿಗಳು ನೇತೃತ್ವವಹಿಸುವರು. ಒಳಬಳ್ಳಾರಿಯ ವಿರಕ್ತಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಅನೇಕ ಹರ ಗುರು ಮಠಾಧೀಶರು ಭಾಗವಹಿಸಲಿದ್ದಾರೆ.

ಕೇಂದ್ರ ಮಾಜಿ ಸಚಿವ ಬಸವರಾಜ್ ಅನ್ವರಿ, ಹಿರಿಯ ವೈದ್ಯ ಡಾ. ಸಿ.ಬಿ. ನಾವದಗಿ ಪಾಲ್ಗೊಳಲಿದ್ದಾರೆ. ಬಸವನ ಬಾಗೇವಾಡಿಯ ಅಕ್ಕಮಹಾದೇವಿ ಪ್ರೌಢ ಶಾಲೆಯ ಶಿಕ್ಷಕ ಅಶೋಕ ಹಂಚಲಿ ಉಪನ್ಯಾಸ ನೀಡುವರು. ಇದೇ ವೇಳೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಬಿ. ಶ್ರೀರಾಮಲು, ಅಡ್ವೋಕೇಟ್ ಜನರಲ್ ಪ್ರಭುಲಿಂಗ, ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ, ನೇತ್ರ ತಜ್ಞ ಡಾ. ಪ್ರಭುಗೌಡ ಬಿ.ಎಲ್ ಅವರನ್ನು ಸತ್ಕರಿಸಲಾಗುವುದು. ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಶಾಸಕರಾದ ಅಮರೇಗೌಡ ಬಯ್ಯಾಪುರ, ಡಿ.ಎಸ್. ಹೂಲಗೇರಿ, ದೊಡ್ಡನಗೌಡ ಪಾಟೀಲ್, ವೆಂಕಟರಾವ್ ನಾಡಗೌಡ, ವಿಧಾನಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರ್, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ಬ್ಯಾಗವಾಟ್, ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಸಿರವಾರ, ಕೃಷಿ ವಿವಿ ನಿವೃತ್ತ ಕುಲಪತಿ ಬಿ.ವಿ. ಪಾಟೀಲ್, ಬಿ.ವಿ. ಹಿರೇಮಠ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ದಿ. ೩೧ ರಂದು ಘನಮಠೇಶ್ವರ ಗ್ರಾಮೀಣ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ, ಜ. ೧ ರಂದು ಉಚ್ಛಾಯಿ ಉತ್ಸವ ಜರುಗಲಿದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago