ಕಲಬುರಗಿ: ನಾಡಿನ ಜಾನಪದ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಲೀ.ಪ್ರೊ. ಸೂಗಯ್ಯ ಹಿರೇಮಠ ಅವರ ಹೆಸರಿನ ಮೇಲೆ ಕಲಬುರಗಿಯಲ್ಲಿರುವ ಸಗರನಾಡು ಕ್ಷೇಮಾಭಿವೃದ್ಧಿ ಸಂಘವು ಪ್ರತಿವರ್ಷದಂತೆ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಮಾಡಿ ರಾಜ್ಯ ಮಟ್ಟದ “ಸಗರನಾಡಿನ ಸೌರಭ” ಪ್ರಶಸ್ತಿ ನೀಡಲಾಗುವುದು ಎಂದು ಸಗರನಾಡು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪ. ಮಾನು ಸಗರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಡಿ.31 ರ ವರೆಗೆ ಅರ್ಜಿ ಸಲ್ಲಿಸಲು ಸಮಯ ವಿಸ್ತರಿಸಲಾಗಿದೆ. ತಮ್ಮ ಸ್ವ-ಪರಿಚಯದೊಂದಿಗೆ ಪ್ರಟಕಗೊಂಡ ಪ್ರತಿಗಳನ್ನು ಹಾಗೂ ಅರ್ಜಿಸಲ್ಲಿಸಲು ವಿಳಾಸ ಪ. ಮಾನು ಸಗರ ಅಧ್ಯಕ್ಷರು, ಸಗರನಾಡು ಕ್ಷೇಮಾಭಿವೃದ್ಧಿ ಸಂಘ ವಿಶ್ವದೀಪ ಕಾಂಪ್ಲೆಕ್ಸ್, ದೇವಾನಗರ ಕ್ರಾಸ್ ಹಳೆ ಜೇವರ್ಗಿ ರಸ್ತೆ, ಕಲಬುರಗಿ 585102, ಮೊ.ನಂ. 9448214003, 9731662566. ಕಳಿಸಬೇಕೆಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಡಾ.ಎಸ್. ಎಸ್.ಗುಬ್ಬಿ ಕಾರ್ಯದರ್ಶಿ ಯಾದ ವೆಂಕಟೇಶ ನಿರಡಗಿ, ಡಾ. ಕೆ.ಸಿ. ನಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು.