ಕಲಬುರಗಿ: ಪೌರತ್ವ ಕಾಯಿದೆ ವಿರುದ್ದ ಜನರು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಜಾಮೀಯಾ ಅಲೀಗಡ್ ವಿವಿ ಯಲ್ಲಿ ಪೊಲೀಸರು ವಿದ್ಯಾರ್ಥಿಗಳ ಹಲ್ಲೆ ಮಾಡಿದ್ದಾರೆ. ಐಐಟಿ ಐಐಎಂ ವಿವಿಗಳ ವಿದ್ಯಾರ್ಥಿಗಳ ಮೇಲೆ ಕೂಡಾ ಹಲ್ಲೆ ಮಾಡಲಾಗಿದೆ ಅತಿ ಹೆಚ್ಚು ಮೆಜಾರಿಟಿಯಿಂದ ಆಯ್ಕೆಯಾದ ಕೇಂದ್ರ ಸರಕಾರ ಅಂಬೇಡ್ಕರ್ ಹಾಗೂ ಗಾಂಧಿ ಅವರ ತತ್ವ ಆಧಾರಿತ ಪ್ರಬುದ್ಧ ಸಮಾಜ ನಿರ್ಮಾಣ ಮಾಡುವ ಬದಲು ಸಮಾಜ ಒಡೆಯುವ ಪೌರತ್ವ ಕಾಯಿದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧರ್ಮದ ಆಧಾರಿತ ಕಾಯಿದೆಯಾದ ಪೌರತ್ವ ಕಾಯ್ದೆಯಡಿಯಲ್ಲಿ ಹಿಂದೂ ಕ್ರಿಶ್ಚಿಯನ್, ಬೌಧ್ದ, ಸಿಖ್ ಧರ್ಮದ ಜನರು ಬಾಂಗ್ಲಾ, ಪಾಕಿಸ್ಥಾನ ಹಾಗೂ ಅಫ್ಘಾನಿಸ್ತಾನ ದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದು ನೆಲೆಸಿದವರಿಗೆ ಪೌರತ್ವ ಕೊಡುವುದು ಆಗಿದೆ. ಆದರೆ, ಮುಸ್ಲಿಂರಿಗೆ ಹಾಗೂ ಶ್ರೀಲಂಕಾ ತಮಿಳರನ್ನು ಈ ಕಾಯಿದೆಯಡಿಯಲ್ಲಿ ಸೇರಿಸಿಕೊಂಡಿಲ್ಲ RAW ( Research Analasys Wing) ರ ಪ್ರಕಾರ CAA ಜಾರಿಗೆ ತರಲು ವಿರೋಧವಿದೆ. ಬೇರೆ ಬೇರೆ ರಾಷ್ಟ್ರಗಳಿಂದ ಬರುವವರು ಇಲ್ಲಿನ ಭದ್ರತೆಗೆ ಧಕ್ಕೆ ತರುವ ಕುರಿತು ಅವರು ಹೇಳಿದ್ದಾರ.
ಕೇವಲ 31313 ಜನರು ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನ ದೇಶದಿಂದ ಬಂದಿರುವವರು ಭಾರತೀಯ ನಾಗರಿಕತೆಗಾಗಿ ಅರ್ಜಿ ಹಾಕಿದ್ದಾರೆ. ಕೇಂದ್ರ ಸರಕಾರ ಕಾನೂನು ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಹಾಗೂ ಸಾರ್ವಜನಿಕರ ಗಮನಕ್ಕೆ ತರದೆ ಪೌರತ್ವ ಕಾಯಿದೆ ತಂದಿದ್ದಾರೆ, ಇದರಲ್ಲಿ ಮುಸ್ಲೀಮರನ್ನು ಹೊರಗಿಟ್ಟಿದ್ದಾರೆ. ಯಾಕೆ? ಮುಸ್ಲಿಂ ರ ಕೊಡುಗೆ ಈ ರಾಷ್ಟ್ರಕ್ಕೆ ಇಲ್ಲವೇ? CAA ಜೊತೆಗೆ NRC ಜಾರಿಗೆ ತರುವ ಮೂಲಕ ಕೇಂದ್ರ ಈ ದೇಶವನ್ನ ನಿರ್ನಾಮ ಮಾಡ ಹೊರಟಿದೆ. ವಿದ್ಯಾರ್ಥಿಗಳ ಭವಿಷ್ಯ ಹಾಳ ಮಾಡಹೊರಟಿದೆ ಎಂದು ದುರಿದರು.
NRC ಪ್ರಕಾರ ದಾಖಲಾತಿ ಕೊಡಲು ವಿಫಲರಾದವರು ಈ ದೇಶದ ನಾಗರಿಕರು ಅಲ್ಲವೆಂದು ತೀರ್ಮಾನಿಸಿ ಡಿಟೆನ್ಶನ್ ಸೆಂಟರ್ ಗಳಲ್ಲಿ ಇಡಲಾಗುತ್ತದೆ ಮೊಟ್ಟಮೊದಲು NRC ಜಾರಿಗೆ ತಂದ ಪರಿಣಾಮ ಆಸ್ಸಾಂ ನಲ್ಲಿ 19 ಲಕ್ಷ ಜನ ನಾಗರಿಕರಲ್ಲ ಎಂದು ಗುರುತಿಸಿ ಡಿಟೆನ್ಶನ್ ಸೆಂಟರ ನಲ್ಲಿ ಇಡಲಾಗಿದೆ. ಅವರಲ್ಲಿ 13 ಲಕ್ಷ ಹಿಂದೂಗಳೇ ಇದ್ದಾರೆ. ಈಗ ಅಲ್ಲಿ ಕಾಯಿದೆಗೆ ಪ್ರತಿರೋಧ ಎದುರಾಗಿದೆ ಅದು ಕೇವಲ ಮುಸ್ಲಿಂರಿಂದಕಲ್ಲ ಹಿಂದೂಗಳು ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.
ಡಿಟೆನ್ಶನ್ ಸೆಂಟರ್‌ನಲ್ಲಿ ಇಲ್ಲಿಯವರೆಗೆ ೪೫ ಜನ ಸತ್ತಿದ್ದಾರೆ ಅದರಲ್ಲಿ ೪೫ ದಿನದ ಹಸುಗೂಸು ಕೂಡಾ ಸೇರಿದೆ ಆಸ್ಸಾಂ ರಾಜ್ಯದಲ್ಲಿ NRC ಪ್ರಕಾರ ಗಣತಿ ಮಾಡಲು ಐದು ವರ್ಷ ತಗೆದುಕೊಳ್ಳಲಾಗಿದೆ ಐವತ್ತು ಸಾವಿರ ಸರಕಾರಿ ನೌಕರರ ಬಳಕೆ ಮಾಡಲಾಗಿದೆ. ಇದಕ್ಕೆ ನೂರಾರು ಕೋಟಿ ಖರ್ಚು ಮಾಡಲಾಗಿದೆ ಈಗ NRC ಯನ್ನು ಇಡೀ ದೇಶಕ್ಕೆ ಜಾರಿ ಮಾಡಲು ಕೇಂದ್ರ ಹೊರಟಿದೆ. ಹಾಗಾದರೆ, ಎಷ್ಟುವರ್ಷ, ಎಷ್ಟು ಕೋಟಿ ವ್ಯಯವಾಗಲಿದೆ ಎಂದರು.
ಇದು ಯಾರ ದುಡ್ಡು? ಇದಕ್ಕೆ ಮೋದಿ – ಶಾ ಉತ್ತರಿಸಲಿ ಅಮಿತ್ ಶಾ ಅವರ ಪ್ರಕಾರ, ಪಾಸ್ ಪೋರ್ಟ್, ಆಧಾರ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಓಟರ್ ಐಡಿ, ಸೇರಿದಂತೆ ಯಾವ ದಾಖಲೆಯಲ್ಲಿ ನಾಗರೀಕತೆ ಸಾಬೀತುಪಡಿಸಲು ಪರಿಗಣಿಸಲಾಗದು ಎಂದು ಹೇಳಿದ್ದಾರೆ. ಹಾಗಾದರೆ, ಪಾಸ್ ಪೋರ್ಟ್ ಮೂಲಕ ವಿದೇಶಗಳಲ್ಲಿ ನೌಕರಿ ಪಡೆದ ಭಾರತೀಯರ ಗತಿ ಏನು? ಯಾವ ಓಟರ್ ಐಡಿ ಮೂಲಕ ಮತ ಪಡೆದುಕೊಂಡು ಅದನ್ನೇ ಒಪ್ಪದಿದ್ದರೆ ಹೇಗೆ? ಇಂತಹ ನಿರ್ಧಾರಗಳಿಂದಾಗ ದೇಶವನ್ನು ಸ್ವಾತಂತ್ರ್ಯ ಪೂರ್ವಕ್ಕೆ ತೆಗೆದುಕೊಂಡು ಹೋಗಿ ಹಿಂದೂ ಮುಸ್ಲಿಂರ ನಡುವೆ ಬಿರುಕು ಉಂಟು ಮಾಡಲು ಕೇಂದ್ರ ಹೊರಟಿದ.
NRC/ CAA ವಿರುದ್ದ 20 ವಿವಿ ವಿದ್ಯಾರ್ಥಿಗಳು ಹಾಗೂ 16 ಬಿಜೆಪಿಯೇತರ ಸರಕಾರಗಳು ಒಪ್ಪಿಲ್ಲ. ಕಾಯಿದೆ ವಿರುದ್ದ ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ಗಲಭೆಗಳಾಗುತ್ತಿವೆ. ಇದಕ್ಕೆ ಯಾರು ಕಾರಣರು. ಎಲ್ಲೋ ಒಂದು ಕಡೆ ಈ ಗಲಭೆಗಳಿಗೆ ಬಿಜೆಪಿ ಪ್ರಚೋದಿಸುತ್ತಿರುವ ಅನುಮಾನಗಳಿವೆ ಕಾಯಿದೆ ವಿವರ ಹೇಳಲು ಮೋದಿ ಶಾ ಅವರಿಗೆ ಧೈರ್ಯವಿದ್ದರೆ ಬಹಿರಂಗ ಪ್ರೆಸ್ ಕಾನ್ಫರೆನ್ಸ ಮಾಡಲಿ ಬಿಜೆಪಿ ಪರವಾಗಿರುವ ಮಾಧ್ಯಮಗಳನ್ನು ಹೊರತುಪಡಿಸಿ ಬೇರೆ ಮಾಧ್ಯಮದ ಮಿತ್ರರು, ಚಿಂತಕರು, ಸಮಾಜದ ಹಾಗೂ ದೇಶದ ಹಿತೈಷಿಗಳು ಹಾಗೂ ಜನರು ಕೇಳುವ ಪ್ರಶ್ನೆ ಗಳಿಗೆ ಉತ್ತರ ನೀಡಲಿ ರಾಜ್ಯದಲ್ಲಿ ಬಿಜೆಪಿ ಕೆಲ ಶಾಸಕರು ಶಾಂತಿ ಕದಡುವ ಮಾತುಗಳನ್ನು ಆಡುತ್ತಿದ್ದಾರೆ. ಮೋದಿ ಹೇಳುತ್ತಾರೆ, ಬಟ್ಟೆಗಳ ಮೂಲಕ ಪ್ರತಿಭಟನಾಕಾರರನ್ನು ಗುರುತಿಸಬಹುದು ಎಂದು. ಯೋಗಿ ಹೇಳುತ್ತಾರೆ, ನಿಮ್ಮ ವಿರುದ್ದ ಸೇಡು ತೀರಿಸಿಕೊಳ್ಳುತ್ತೇನೆ ಎಂದು. ಸಂಸದ ತೇಜಸ್ವಿ ಸೂರ್ಯ ಹೇಳುತ್ತಾರೆ ಪಂಚರ್ ಹಾಕುವವರು ಪ್ರತಿಭಟನೆ ಮಾಡುತ್ತಾರೆ ಎಂದರು.
ಗೋದ್ರಾದಂತ ಹತ್ಯಾಕಾಂಡವನ್ನು ನೆನಪಿಸಿಕೊಳ್ಳುವಂತೆ ಸಚಿವ ಸಿ.ಟಿ. ರವಿ ಹೇಳುತ್ತಾರೆ. ಕೇಂದ್ರದ ಸಚಿವರೊಬ್ಬರು ವೆಪನ್ ಇರುವುದು ಪೂಜೆ ಮಾಡುವುದಕ್ಕಾ ಎನ್ನುತ್ತಾರೆ ಇಂತಹ ಭೀತಿ ಹುಟ್ಟಿಸುವ ಪ್ರಚೋದನಾಕಾರಿ ಮಾತುಗಳಿಂದ ಜನರನ್ನು ಹೆದರಿಸುತ್ತಿದ್ದಾರೆಯೇ? ದೇಶದ ಜನರಿಗೆ ಉದ್ಯೋಗ ಕೊಡಬೇಕೆಂದರೆ, ದೇಶ ಸೂಪರ್ ಪವರ್ ಎನಿಸಿಕೊಳ್ಳಬೇಕೆಂದರೆ, CAA / NRC ಯನ್ನು ಕೈಬಿಡಬೇಕು.ಇಂತಹ ಕಾಯಿದೆಯಿಂದ ದೇಶವನ್ನು ಸ್ವಾತಂತ್ರ ಪೂರ್ವಕ್ಕೆ ಕೊಂಡೊಯ್ದು ಹಾನಿ ಮಾಡುವುದನ್ನು ನಾವು ಒಪ್ಪುವುದಿಲ್ಲ ಇಂತಹ ಕಾಯಿದೆ ವಿರುದ್ದ ನಾವು ಶಾಂತಿಯುತ ಹೋರಾಟ ಮಾಡುತ್ತೇವೆ ಇದನ್ನೆ ನಮ್ಮ ಪಕ್ಷದ ನಾಯಕರು ಹೇಳಿದ್ದಾರೆ.
ಮಂಗಳೂರಿನಲ್ಲಿ ಆಟೋದಲ್ಲಿ ತಂದು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದನ್ನು ನಾನು ನೋಡಿಲ್ಲ. ಆದರೆ, ಇಷ್ಟೊಂದು ಗುಂಡು ಹಾರಿಸಿದರು ಯಾರೊಬ್ಬರು ಸತ್ತಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿರುವ ವಿಡಿಯೋ ನೋಡಿದ್ದೇನೆ. ಹಾಗಾದರೆ, ಗೋಲಿಬಾರ್ ಮಾಡುವ ಉದ್ದೇಶ ಮೊದಲೇ ಇತ್ತೇ? ಆಸ್ಪತ್ರೆಯ ಐಸಿಯೂ ನಲ್ಲಿ ಪೊಲೀಸರು ನುಗ್ಗಿದ್ದರ ಕುರಿತು ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.
ಗೋಲಿಬಾರ್ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆದು ಸತ್ಯ ಹೊರಬರಲಿ ತಪ್ಪಿತಸ್ತರಿಗೆ ಶಿಕ್ಷೆಯಾಗಲಿ CAA/ NRC ಜಾರಿಗೆ ಮಾಡುವುದರ ಹಿಂದೆ ದೇಶದ ಅಭಿವೃದ್ದಿ ಉದ್ದೇಶ ಇದೆಯಾ? ಖಂಡಿತ ಇಲ್ಲ. ಧರ್ಮದ ಆಧಾರದ ಮೇಲೆ ದೇಶವನ್ನು ಒಡೆದು, ಪ್ರಸ್ತುತ ಸಮಸ್ಯೆಗಳಿಂದ ಮೋದಿಶಾ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆ ಸೆಳೆಯುವ ಈ ಕುತಂತ್ರ ನಡೆಸಿದ್ದಾರೆ ಪೊಲೀಸ್, ಇಂಟಲಿಜೆನ್ಸ ಇಲಾಖೆ ಸರಕಾರದ ಬಳಿ ಇದೆ. ಸರಕಾರ ನ್ಯಾಯಾಂಗ ತನಿಖೆ ನಡೆಸಲಿ, ಇದು ನಮ್ಮ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಸುಭಾಷ್ ರಾಠೋಡ್ ಸೇರಿದಂತೆ ಮತ್ತಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…