ಬಸವದರ್ಶನಕ್ಕಾಗಿ ಪಯಣ ಆರಂಭಿಸಿದ ಅಕ್ಕನಿಗೆ ಎಲ್ಲರೂ ಗೌರವದಿಂದ ನಮಸ್ಕರಿಸುತ್ತಾರೆ. ದಾರಿಯುದ್ದಕ್ಕೂ ದಾಸೋಹ ಮಂಟಪ ಇರುವುದನ್ನು ಎಲ್ಲರೂ ಶರಣು ಶರಣಾರ್ಥಿ ಎಂದು ಬರಮಾಡಿಕೊಳ್ಳುವುದನ್ನು ಕಂಡ ಅಕ್ಕನಿಗೆ ಬಸವಣ್ಣನವರ ಕಾಯಕ-ದಾಸೋಹದ ಬೀಜಮಂತ್ರಗಳು ಅರ್ಥವಾಗುತ್ತವೆ. “ಲೋಕದೊಳಗೆ ಕಲ್ಯಾಣವೇ ಕೈಲಾಸವೆನಿಸಿತ್ತು” ಎಂಬ ಚೆನ್ನಬಸವಣ್ಣನವರ ವಚನದ ಹಾಡು ಕೇಳುತ್ತ “ಎನ್ನ ಮಾತಾಪಿತರು ಅಮರಗಣಂಗಳು” ಎನ್ನುತ್ತ ತನ್ನ ಉಸಿರಾಗಿರುವ, ತನ್ನ ಸಂಪತ್ತಿನ ಖಜಾನೆಯಾಗಿರುವ ಕಲ್ಯಾಣದೊಳಗೆ ಪ್ರವೇಶ ಮಾಡುತ್ತಾಳೆ.
ಈಕೆ ಬರುವುದನ್ನು ಗಮನಿಸಿದ ಅಲ್ಲಿನ ಜನರು, ತಾವು ಉಡುತಡಿಯಿಂದ ಆಗಮಿಸಿದ ಮಹಾದೇವಿತಾಯಿಯಲ್ಲವೇ? ಎಂದು ಪ್ರಶ್ನಿಸುತ್ತಿದ್ದರು. ಹೌದು! ಇದೆಲ್ಲ ನಿಮಗೆ ಹೇಗೆ ತಿಳಿಯಿತು? ಎಂದು ಅಕ್ಕ ಅವರಿಗೆ ಕೇಳಿದಾಗ, ನಮ್ಮ ಅನುಭವ ಮಂಟಪದಲ್ಲಿ ಅಣ್ಣ ಬಸವಣ್ಣ ಪ್ರತಿ ದಿನ ನಿಮ್ಮದೇ ಚರ್ಚೆ, ಚಿಂತನೆ ನಡೆಸುತ್ತಿರುತ್ತಾರೆ ಎಂದು ಹೇಳುತ್ತಾರೆ. ಗುರು ಬಸವಣ್ಣನ ದೃಷ್ಟಿ ಹಾಗೂ ರಕ್ಷಾ ಬಯಕೆಯೇ ನನ್ನನ್ನು ಇಲ್ಲಿವರೆಗೆ ಕರೆತಂದಿದೆ. ಇತರರಿಗಾಗಿ ದುಡಿವ ಮಿಡಿವ ಹೃದಯ ಕಲ್ಯಾಣ ಎಂದು ಖುಷಿ ಪಡುತ್ತಾಳೆ ಅಕ್ಕ.
ಅಕ್ಕ ಕಲ್ಯಾಣ ಪ್ರವೇಶ ಮಾಡುವ ನಸುಕಿನ ಜಾವದಲ್ಲಿ ಹೆಣ್ಣುಮಕ್ಕಳು ಬೀಸುವ, ಕುಟ್ಟುವ ಹಾಡುಗಳು ಕೇಳಿಬರುತ್ತವೆ. ಬಾಂಧವರ (ಬಂದವರ) ಓಣಿಯಲ್ಲಿ ಮರೆ ಮಾಡಲೆಂದು ಸೀರೆ ಕಟ್ಟಿ ಸ್ನಾನ ಮಾಡಿ ಪೂಜೆಗೆ ಕುಳಿತುಕೊಂಡಾಗ, ಎದುರಿಗೊಬ್ಬ ವ್ಯಕ್ತಿ ಇವಳನ್ನೇ ದಿಟ್ಟಿಸಿ ನೋಡುತ್ತಿರುತ್ತಾನೆ. ಎಚ್ಚೆತ್ತು ಸೀರೆಯುಟ್ಟುಕೊಳ್ಳಬೇಕೆನ್ನುವಾಗ, ಆಕಳೊಂದು ಬಂದು ಆ ಸೀರೆಯನ್ನು ತಿನ್ನುತ್ತಿರುತ್ತದೆ. ಆಗ ಅಲ್ಲಿರುವ ವ್ಯಕ್ತಿ, ಈ ಜಗತ್ತಿನಲ್ಲಿ ಪುರುಷರ ಮನಸೆಳೆಯಲು ಮಹಿಳೆಯರು ಏನೆಂಥ ನಾಟಕ ಮಾಡುತ್ತರೆ. ನೀನಾದರೆ ಪೂರ್ಣ ಬೆತ್ತಲೆಯಾಗಿರುವೆಲ್ಲ? ಇದೇನಿದು? ಎಂದು ಕೇಳಿದಾಗ, ಇದು ಚೆನ್ನಮಲ್ಲಿಕಾರ್ಜುನನಿಗಾಗಿ ಮೀಸಲಾದ ದೇಹ ಎಂದುತ್ತರಿಸುತ್ತಾಳೆ ಅಕ್ಕ. ದೇಹ ಬೆತ್ತಲೆಯಾದರೇನು? ಮನ ಬೆತ್ತಲೆಯಾಗಬೇಕಲ್ಲ! ಎಂದು ಮರು ಪ್ರಶ್ನಿಸಿದ ಆತನಿಗೆ “ದೇವರ ಮುಂದೆ ಮುಚ್ಚು ಮರೆಯ ಠಾವೆಲ್ಲಿ?” ಎಂದುತ್ತರಿಸುತ್ತಾಳೆ ಅಕ್ಕ.
ಕಾಣದ ದೇವರಿಗೆ ಮರೆ ಏಕೆ? ದೇವರೆಂಬುದೇ ಕಾಲ್ಪನಿಕ ಎಂಬ ಆ ವ್ಯಕ್ತಿಯ ಮತ್ತೊಂದು ಪ್ರಶ್ನೆಗೆ “ಗೂಬೆಗೆ ಸೂರ್ಯನಿಲ್ಲ. ಕಾಗೆಗೆ ಚಂದ್ರನಿಲ್ಲ” ಎನ್ನುವಂತೆ ನೀನಿರುವೆ ಎಂದುತ್ತರಿಸುತ್ತಾಳೆ ಅಕ್ಕ. ಆದರೂ ನಿನ್ನ ಸೌಂದರ್ಯಕ್ಕೆ ಸೋತಿದ್ದೇನೆ. ಪವಿತ್ರ ಪ್ರೇಮದಿಂದ ನಾವಿಬ್ಬರೂ ಮದುವೆಯಾಗಿ ಅನುಭವ ಮಂಟಪದಲ್ಲಿ ಶರಣ ದಂಪತಿಯಾಗಿ ಬದುಕೋಣ ಎಂದು ಮುಂತಾಗಿ ಕೇಳಿದಾಗ, ಎಲೆ ಅಣ್ಣಾ ನೀನು ಹುಲ್ಲಿನಂಥವನು. ನಾನು ಜೀವಂತ ಸುಡುವ ಕೆಂಡ ಎಂದು ಹೇಳುತ್ತಾಳೆ.
ಆ ವ್ಯಕ್ತಿ ಅಕ್ಕನನ್ನು ಮತ್ತೆ ದಿಟ್ಟಿಸಿ ನೋಡುತ್ತಾನೆ. ಕಾಮದ ಲವಲೇಷ ಇಲ್ಲದ ಪರಿಪೂರ್ಣ ವೈರಾಗ್ಯದ ಮೂರ್ತಿಯಾಗಿ ಕಂಡು ಬರುತ್ತಾಳೆ. ಕೊನೆಗೆ ಅಲ್ಲಮಪ್ರಭು ತನನ್ನು ಕಳಿಸಿದ್ದಾಗಿ ತಿಳಿಸಿ, ಹುಲಿ ಸಿಕ್ಕಿ ಬದುಕಿದೆನವ್ವಾ ನಾನು ಎಂದು ತನ್ನ ಹೆಸರು ಕಿನ್ನರಿ ಬೊಮ್ಮಯ್ಯ ಎಂದು ಹೇಳಿ ಪಾದಕ್ಕೆ ನಮಸ್ಕರಿಸುತ್ತಾನೆ.
ಆಗ ಅಕ್ಕ ಕಿನ್ನರಿ ಬೊಮ್ಮಯ್ಯನೆಂಬ ಸಹೋದರನ ಪಡೆದ ನಾನೇ ಧನ್ಯ! ಎಂದು ಅಲ್ಲಿರುವ ಶರಣರೊಡಗೂಡಿ ಅನುಭವ ಮಂಟಪ ಪ್ರವೇಶ ಮಾಡುತ್ತಾಳೆ. ಶರಣೆ ಮಾಯಾದೇವಿ ವಚನ ಹಾಡಿ, ಮಡಿವಾಳ ಮಾಚಿದೇವ ಮಡಿ ಹಾಸಿ ಬರ ಮಾಡಿಕೊಳ್ಳುತ್ತಾರೆ. ಅನುಭವ ಮಂಟಪದ ಎಲ್ಲ ಶರಣರು ದಿಗಂಬರೆಯಾಗಿ ಬಂದ ಅಕ್ಕನನ್ನು ಕಂಡು ಉಸಿರು ಬಿಗಿ ಹಿಡಿದು ಕುಳಿತಿದ್ದರು. ಅಲ್ಲಮಪ್ರಭುಗಳು ಗಂಭೀರವದನರಾಗಿದ್ದರು. ಗಂಭೀರತೆಯ ಈ ಮುದ್ರೆ ಒಡೆಯಲು ಬಸವಣ್ಣನ ಎದುರಿಗೆ ನಿಂತ ಅಕ್ಕ, “ಎನ್ನ ಹೆತ್ತ ತಂದೆ, ಗುರು ಸಂಗನ ಬಸವ” ಎಂದು ನಮಸ್ಕರಿಸುತ್ತಾಳೆ. ಆಗ ಬಸವಣ್ಣನವರು ಅಕ್ಕನಿಗೆ “ನಮೋ ನಮೋ” ಎನ್ನುತ್ತಾರೆ.
ಅಕ್ಕನ ಭುಜ ಹಿಡಿದು ಮೇಲಕ್ಕೆತ್ತಿದಾಗ ಹಿತವಾದ ಮಾತೃಸ್ಪರ್ಶವಾದಂತಹ ಅನುಭವ ಅಕ್ಕನಿಗಾಯಿತು. ಅಲ್ಲಮ ಹುಬ್ಬು ಗಂಟಿಕ್ಕಿ, ಉಳಿದ ಶರಣರೆಲ್ಲರೂ ಉಸಿರು ಬಿಗಿ ಹಿಡಿದು ಕುಳಿತಿರುವುದನ್ನು ಕಂಡ ಬಸವಣ್ಣನವರು, ಹೆಂಗೂಸಿನಂಗವ ನೋಡಿರೆ ಪುರಾತನರು…, ರೂಹಿಲ್ಲದವರಿಗೆ ಒಲಿದವನಿಗೆ ತನುವಿನ ಹಂಗುಂಟೆ?” ಎಂದು ಹೇಳಿ ಆ ವಾತಾವರಣಕ್ಕೊಂದು ದೃಷ್ಟಿಕೋನ ಕೊಡುತ್ತಾರೆ. ಎಲ್ಲರೂ ಉಸಿರು ಬಿಡುತ್ತಾರೆ. ಆದರೂ ಅಲ್ಲಮಪ್ರಭುಗಳು, ಉದಮದದ ಯೌವನ ಹೊತ್ತಿರುವ ನೀನಾರು? ನಿನ್ನ ಪತಿಯ ಹೆಸರೇಳಿ ಒಳಗೆ ಬಾ ಇಲ್ಲದಿದ್ದರೆ ತೊಲಗಾಚೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಕ್ಕ ಕೊಡುವ ಉತ್ತರದಿಂದ ಶರಣರೆಲ್ಲರೂ ಚಕಿತರಾಗುತ್ತಾರೆ.
ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…