ಸುರಪುರ: ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ಸಂಘದ ಸಭೆಯನ್ನು ಡಿ. ೨೯ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರೆಯಲಾಗಿದೆ.
ಸಭೆಯಲ್ಲಿ ರಾಜನಹಳ್ಳಿ ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸುವುದು ಮತ್ತು ಸಮಾಜದ ಸಂಘಟನೆಯ ಕುರಿತು ಚರ್ಚಿಸಲಾಗುವುದು ಎಂದು ಸಂಘದ ಅಧ್ಯಕ್ಷ ರಾಜಾ ಪಿಡ್ಡನಾಯಕ, ಉಪಾಧ್ಯಕ್ಷ ಶಂಕರಗೌಡ ಕೋಳಿಹಾಳ, ಕಾರ್ಯದರ್ಶಿ ಬಲಭೀಮನಾಯಕ ದೇವಪುರ ತಿಳಿಸಿದ್ದಾರೆ.