ಯಾದಗಿರಿ, ಶಹಾಪುರ: ಕೇತು ಗ್ರಹಸ್ತ ಸೂರ್ಯಗ್ರಹಣದ ಹಿನ್ನಲೆಯಲ್ಲಿ ಎಳ್ಳಾ ಅಮಾವಾಸೆಯಂದು ನೆಡೆಯಲ್ಲಿರುವ ಶಹಾಪುರ ತಾಲುಕಿನ ಶ್ರೀ ಆಚಿಜನಯ್ಯಸ್ವಾಮೀ ದೇಗುಲಕ್ಕೆ ಬೀಗ ಹಾಕಲಾಗಿತ್ತು.
ಅಮಾವಸೆಯಂದು ಶ್ರೀ ಆಚಿಜನಯ್ಯ ದೇವರ ಪಲ್ಲಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೇರವಣಿಗೆ ನೆಡೆದರೂ ಗರ್ಭ ದೇಗಲ ಪ್ರವೇಶ ಮಾಡುವಂತಿಲ್ಲ, ಬೆಳಿಗೆ 8 ಗಂಟೆಯಿಂದ 11 ಗಂಟೆಯವರೆಗೂ ದೇಗುಲಕ್ಕೆ ಬೀಗ ಹಾಕಿ ನಂತರದಲ್ಲಿ ಪೂಜಾ ವಿಧಿವಿಧಾನಗಳಿಂದ ದೇವಸ್ಥಾನವನ್ನು ಸ್ವಚ್ಚಗೊಳಿಸಿಕೊಂಡು ನಂತರದಲ್ಲಿ ಪಲ್ಲಕಿ ಉತ್ಸವ ದೇಗಹುಲ ಪ್ರವೇಶ ಪಡೆಯುತ್ತದೆ ಎಂದು ಅರ್ಚಕರು ಪತ್ರಿಕೆಗೆ ತಿಳಿಸಿದ್ದಾರೆ.
ದಿನವೀಡಿ ಗ್ರಾಮದ ಜನರು ನೀರು ಓಕಳಿ ಆಟ ಆಡಿಕೊಂಡು ದೇವಸ್ಥಾನದತ್ತ ಸಾಗುತ್ತಿರುತ್ತಾರೆ, ಈ ಕಾರ್ಯ ನೂರಾರು ವರ್ಷಗಳ ಕಾಲ ಆಚರಣೆ ಮಾಡುತ್ತಾ ಬರಲಾಗುತ್ತಿದ್ದು ನಿನ್ನೆ ನೆಡೆದ ಕೇತು ಗ್ರಹಸ್ತ ಸೂರ್ಯ ಗ್ರಹಣದಿಂದ ಆಂಜನಯ್ಯ ದೇವಸ್ಥಾನಕ್ಕೂ ಗ್ರಹಣದ ದೊಷ ಬಾರದಿರಲಿ ಎಂದು ಅರ್ಚಕರು ದೇಗುಲಕ್ಕೆ ಬೀಗ ಹಾಕಿದ್ದು ವಿಶೇಷ ವಾಗಿತ್ತು.