ಕಲಬುರಗಿ: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ತಮ್ಮ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟು ಪಾಲಕರು ಕಾವಲು ಕಾಯುತ್ತಿದ್ದ ದ್ರಶ್ಶ ನಗರದ ಹೊರವಲಯರ ತಾಜ್ ಸುಲ್ತಾನಪುರ ಗ್ರಾಮದ ಹೊಲವೊಂದರಲ್ಲಿ ನಡೆದಿದೆ.
ಮಕ್ಕಳನ್ನು ಮಣ್ಣಿನಲ್ಲಿ ಇಲ್ಲವೆ ತಿಪ್ಪೆಯಲ್ಲಿ ಹೂತಿಟ್ಟರೆ ಅಂಗವೈಕಲ್ಶ ನಿವಾರಣೆಯಾಗುತ್ತದೆ. ಮೂಗರಿದ್ದರೆ ಮಾತು ಬರುತ್ತವೆ. ದೀರ್ಘ ಕಾಲದ ಅನಾರೋಗ್ಶ ಇದ್ದರೆ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಈ ರೀತಿ ಮಾಡಲಾಗಿದೆ.
ಮಗುವನ್ನು ಕುತ್ತಿಗೆಯತನಕ ತಿಪ್ಪೆಯಲ್ಲಿ ಮುಚ್ಚಿಟ್ಟು ಪಾಲಕರು ಮಾತ್ರ ಮಗುವಿನ ಸುತ್ತ ಕುಳಿತು ಕಾವಲು ಕಾಯುತ್ತಿದ್ದಾರೆ. ಇಂತಹ ಮೂಢನಂಬಿಕೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದುˌ ಕೂಡಲೇ ಇವರಿಗೆ ಜಾಗ್ರತಿ ಮೂಡಿಸಬೇಕಾದ ಅವಶ್ಶಕತೆ ಇದೆ.
ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಡುವುದು ಮೂಢನಂಬಿಕೆ ಪರಮಾವಧಿ. ಇದಕ್ಕೆ ಯಾವುದೇ ಆಧಾರವಿಲ್ಲ. ಯಾವ ಕಾಯಿಲೆಯೂ ಗುಣಮುಖವಾಗುವುದಿಲ್ಲ. ಈ ರೀತಿಯಾಗಿ ಮಕ್ಕಳನ್ನು ಹಿಂಸೆಗೆ ಗುರಿಪಡಿಸಬಾರದು – ಡಾ.ಸಿದ್ದು ಪಾಟೀಲ್ˌ ವೈದ್ಶಾಧಿಕಾರಿ