ನನ್ನ ಆತ್ಮೀಯ ಗೆಳೆಯ ಸೂರಿ (ಇಂದ್ರಜಿತ್) ಸತ್ಯಂಪೇಟೆ ಪ್ರತಿ ವರ್ಷ ಡಿಸೆಂಬರ್೨೬ ಬಂತೆಂದರೆ ಮನಸೇಕೋ ಚಡಪಡಿಸುತ್ತಿದೆ ಗೆಳೆಯ ನೀನಿಲ್ಲವೆಂದು ನನ್ನ ಸನಿಹ ಕಾಣಿಸದೆ ನಿನಗೆ ಈ ಅಗಲಿಕೆಯ ನೋವ ತಡೆಯಲಾಗುತ್ತಿಲ್ಲ. ಗೆಳೆಯ ನನಗೆ ಈ ಮನಸಿನ ಭಾರವ ವರ್ಷಗಳು ಉರುಳುತಿವೆ ಹೊರತು ನಿನ್ನ ನೆನಪುಗಳು ಇನ್ನು ಅಚ್ಚ ಹಸಿರಾಗಿ ಉಳಿದಿವೆ ಅನುದಿನವು. ನಾಲ್ಕನೇ ಕ್ಲಾಸ್ ಉತ್ತೀರ್ಣರಾಗಿ ಮುಂದಿನ ವಿಧ್ಯಾಭ್ಯಾಸಕ್ಕೆ ಸೂರಿ ಮತ್ತು ನನ್ನನು ಶಹಾಪುರದ ಶ್ರೀ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಗೆ ಲಿಂಗಣ್ಣ ಸತ್ಯಂಪೇಟೆ ಮತ್ತು ಅಪ್ಪ ಶಿವಣ್ಣ ಇಜೇರಿಯೊಂದಿಗೆ ಹೋದಾಗ ಅಲ್ಲಿ ೫ನೇ ತರಗತಿಗೆ ಸೂರಿಗೆ ಮಾತ್ರ ಪ್ರವೇಶ ಸಿಕ್ಕಿತು. ನನಗೆ ಪ್ರವೇಶ ಸಿಗಲಿಲ್ಲ. ನನಗೆ ಸಿ.ಪಿಎಸ್. ಶಾಲೆಯಲ್ಲಿ ಪ್ರವೇಶ ಸಿಕ್ಕಿತ್ತು .ಒಂದೆರಡು ದಿನಗಳಲ್ಲಿ ಸೂರಿ ಸಿ.ಬಿ.ಸ್ಕೂಲ್ ಬಿಟ್ಟು ಮತ್ತೆ ನಾನಿರುವ ಸಿ.ಪಿ.ಎಸ್. ಸ್ಕೂಲ್‌ಗೆ ಪ್ರವೇಶ ಪಡೆದುಕೊಂಡ. ನನ್ನೊಂದಿಗೆ ಅವನಿಗೆ ಅಷ್ಟೊಂದು ಪ್ರೀತಿ ಇತ್ತು.
ಎನ್ನುವ ಹಾಗೆ ಗೆಳೆಯ ಸೂರಿ (ಇಂದ್ರಜಿತ್) ಸತ್ಯಂಪೇಟೆ ಸದಾ ಹಸನ್ಮಖಿ. ಯಾವಾಗಲೂ ಪಾದರಸದಂತೆ ಎಲ್ಲರೊಂದಿಗೆ ಆತ್ಮೀಯವಾಗಿ ಪರಿಚಯವಿಲ್ಲದವರನ್ನು ಪರಿಚಯದವರಂತೆ ಮಾತನಾಡಿಸುವ ಕಲೆಗಾರ. ಹಿರಿಯರಿಗೆ, ಕಿರಿಯನಾಗಿ ,ಕಿರಿಯರಿಗೆ, ಹಿರಿಯನಾಗಿ ಎಲ್ಲರೊಂದಿಗೆ ಆತ್ಮೀಯನಾಗಿ ಸದಾಕಾಲ ನಗುತ್ತಲೇ ಕಾಲ ಕಳೆದಾತ. ಮಕ್ಕಳೊಂದಿಗೆ ಆಟವಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ನಮ್ಮ ಓಣಿಯಲ್ಲಿ ಹೂರಟನೆಂದರೆ ದಾರಿಯುದ್ದಕ್ಕು ಎಲ್ಲರೊಂದಿಗೆ ಮಾತನಾಡಿಸುತ್ತಲೆ ಅವರ ಯೋಗ ಕ್ಷೇಮವನ್ನು ವಿಚಾರಿಸುತ್ತಲೇ ಹೋಗುವಾತ. ಅಷ್ಟೊಂದು ಎಲ್ಲರಿಗೂ ಬೇಕಾದವನಾಗಿದ್ದ. ಶಾಲಾ ದಿನಗಳಲ್ಲಿ ಅವನ್ನೊಂದಿಗೆ ಕಳೆದ ಕ್ಷಣಗಳು ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ಅವನ ವ್ಯಕ್ತಿತ್ವವೇ ಹಾಗೆ. ಯಾರೊಂದಿಗಾದರು ಸ್ನೇಹ ಬೆಳಸಿದನೆಂದರೆ ಯಾವತ್ತು ಅವರೊಂದಿಗೆ ಯಾವುದೇ ಕಾರಣಕ್ಕೂ ಜಗಳವಾಡುವುದಾಗಲಿ ಅವರ ಸ್ನೇಹ ತೊರೆಯುವುದಾಗಲಿ ನಾವು ಎಂದು ಕಾಣೇವು. ನಮ್ಮ ಗೆಳೆಯರಲ್ಲಿ ಯಾರಾದರು ಜಗಳವಾಡಿದರೆ ಸೂರಿನೆ ಮಧ್ಯಸ್ಥಿಕೆ ವಹಿಸಿ ಎಲ್ಲರನ್ನು ಒಗ್ಗುಡಿಸುತ್ತಿದ್ದ. ಅಷ್ಟೊಂದು ಚರುಕಾಗಿದ್ದ ವಿಧ್ಯಾಭ್ಯಾಸದಲ್ಲಿಯೂ ಕೂಡಾ ಮುಂದೆ ಇದ್ದ.
ನಮ್ಮ ಮನೆಗೆ ಆಗಾಗ ಬರುತ್ತಿದ್ದ. ಮನೆಯಲ್ಲಿ ಅಜ್ಜಿ,ಅವ್ವಾ ಇಲ್ಲದಿದ್ದರು ಕೂಡಾ ತಾನೆ ಊಟ ಬಡಿಸಿಕೊಂಡು ತನಗೆ ಬೇಕಾದ ಪಲ್ಯ ಮತ್ತು ಕೆನೆ ಮೊಸರು, ಮಜ್ಜಿಗೆ ಇರುತ್ತಿತ್ತು. ಅದನ್ನೆ ಊಟಮಾಡಿ ಹೋಗುತ್ತಿದ್ದ. ಅಷ್ಟು ಸರಳ ಸ್ವಭಾವ. ಮಾರನೇ ದಿನ ಬಂದು ನನ್ನ ಅವ್ವನಿಗೆ ಹೇಳುವ. ನಿನ್ನೆ ನಿಮ್ಮ ಮನೆಯಲ್ಲಿ ಊಟಮಾಡಿ ಹೋಗಿದ್ದೇನೆ ಎಂದಾಗ “ಎಪ್ಪಾ ಏನಿತ್ತೊ ಏನಿಲ್ಲ” ಎಂದಾಗ ನನಗೆ ಏನು ಬೇಕು ಕಟಿ ರೊಟ್ಟಿ ಸೇಂಗಿನಖಾರ ಮೊಸರು ಇತ್ತು. ಅದೆ ಊಟ ಮಾಡಿನಿ ಅನ್ನುತ್ತಿದ್ದ. ಯಾವಾಗಲೂ ನನ್ನ ಜೊತೆಗೆ ಮನೆಯಲ್ಲಿ ಏನು ಇರುತ್ತದೆಯೊ ಅದನ್ನೆ ಊಟಮಾಡುತ್ತಿದ್ದ. ಅವನು ಹಠವಾದಿ ಮತ್ತು ಛಲಗಾರ ,ಕನಸುಗಾರನಾಗಿದ್ದ. ಅವನಿಗೆ ಸ್ವಂತ ವ್ಯಾಪಾರ ಮಾಡಬೇಕೆಂದು ಹಂಬಲವಿತ್ತು. ಆದರೆ ಕೊನೆಗೂ ಅದು ಅವನಿಂದ ಸಾದ್ಯವಾಗಲ್ಲಿಲ್ಲ.
ಅವನಿಗೆ ಸಾಧಿಸುವ ಛಲ ಇತ್ತು. ಕನಸೂ ಇತ್ತು. ಆದರೆ ಎಲ್ಲವೂ ಅರೆಬರೆಯಾದಂತೆ ತನ್ನ ಕನಸುಗಳನ್ನು ಬಿಟ್ಟು ತೆರಳಿಯೇ ಬಿಟ್ಟ. ಅನುಗಾಲದ ಗೆಳೆಯನ ಅಗಲಿಕೆಯ ನೋವು ಅನು ದಿನವು ಕಾಡುತ್ತಿದೆ.
ಅಗಲಿ ಹೋದ ಗೆಳೆಯನಿಗೆ ನಮನಗಳು….
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…