ಕಲಬುರಗಿ,ಜೇವರ್ಗಿ: ತಾಲೂಕಿನ ರೇವನೂರ ಗ್ರಾಮದ ಕಡ್ಲೆಪ್ಪ ತಂದೆ ಧೂಳಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರೈತ ಬ್ಯಾಂಕಿನಲ್ಲಿ ಮತ್ತು ಖಾಸಗಿ ಸೇರಿ 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಸ್ವಂತ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೂರು ಹೆಣ್ಣುˌ ಇಬ್ಬರು ಗಂಡು ಮಕ್ಕಳಿದ್ದು, ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.