ಕಲಬುರಗಿ: ನಗರದ ಹಸಿರೀಕರಣ ಹಾಗೂ ಸೌಂದರ‍್ಯೀಕರಣದ ಮುಖ್ಯ ಉದ್ದೇಶಗಳೊಂದಿಗೆ ಸ್ಥಾಪನೆಯಾದ ಕಲಬುರಗಿ ಸ್ಮಾರ್ಟ್ ಸಿಟಿ ಕ್ಲಬ್‌ನ ಪ್ರಯತ್ನದಿಂದ ಮಹಾನಗರ ಪಾಲಿಕೆಯು ಎಚ್ಚೆತ್ತುಕೊಂಡಿದ್ದು, ಶುಕ್ರವಾರ ನಗರದ ಶಕ್ತಿ ನಗರದಲ್ಲಿನ ಉದ್ಯಾನವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಿತ್ತು.
ಈ ಮೊದಲು ಉದ್ಯಾನವನದ ಸ್ವಚ್ಛತೆಯನ್ನು ಪಾಲಿಕೆಯು ಕೈಗೊಂಡಿತ್ತು. ಆದಾಗ್ಯೂ, ಸಮರ್ಪಕ ರೀತಿಯಲ್ಲಿ ಸ್ವಚ್ಛತೆ ಕಾರ್ಯ ಆಗಿರಲಿಲ್ಲ. ಇದರಿಂದ ಕ್ಲಬ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರು ಸಲ್ಲಿಸಿದ್ದರಿಂದ ಪಾಲಿಕೆಯ ಕರ್ಮಚಾರಿಗಳು ಉದ್ಯಾನವನ್ನು ಶುಚಿಗೊಳಿಸುವ ಕಾರ್ಯ ಮಾಡಿದರು.
ಉದ್ಯಾನವನದ ಸುತ್ತಮುತ್ತಲೂ ಗಿಡ, ಗಂಟಿಗಳು ಬೆಳೆದು ಯಾರೊಬ್ಬರೂ ಉದ್ಯಾನವನದೊಳಗೆ ಹೋಗುವಂತಿರಲಿಲ್ಲ. ಉದ್ಯಾನವನದ ಸ್ವಚ್ಛತೆಯಿಂದಾಗಿ ಇನ್ನು ಮುಂದೆ ಸಾರ್ವಜನಿಕರು ಉದ್ಯಾನವನದಲ್ಲಿ ವಿಶ್ರಾಂತಿ ಪಡೆಯಲು ಹಾಗೂ ವಿಹರಿಸಲು ಅನುಕೂಲ ಒದಗಿಸಿದಂತಾಗಿದೆ.
ಉದ್ಯಾನವನದ ಸ್ವಚ್ಛತಾ ಕಾರ್ಯವು ಮೇಲ್ವಿಚಾರಕರಾದ ಅವಿನಾಶ್ ಹಾಗೂ ರೆಡ್ಡಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಲಬುರ್ಗಿ ಸ್ಮಾರ್ಟ್ ಸಿಟಿ ಕ್ಲಬ್ ಅಧ್ಯಕ್ಷ ಪಿ.ಎಸ್. ಮಹಾಗಾಂವಕರ್ ಅವರು ಮಾತನಾಡಿ, ಉದ್ಯಾನವನಗಳು ಅಭಿವೃದ್ಧಿ ಆದಲ್ಲಿ ಅದರಿಂದ ಆ ಪ್ರದೇಶದಲ್ಲಿ ಉತ್ತಮ ವಾತಾವರಣ ನಿರ್ಮಾಣಗೊಳ್ಳುತ್ತದೆ. ಆದ್ದರಿಂದ ಕಾಲಮಿತಿಯಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಪಾಲಿಕೆಯ ಮೇಲ್ವಿಚಾರಕರಿಗೆ ಹೇಳಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕ ಅವಿನಾಶ್ ಅವರು ಮಾತನಾಡಿ, ಮಹಾನಗರ ಪಾಲಿಕೆಯ ೫೧ನೇ ವಾರ್ಡ್‌ನಲ್ಲಿ ಸುಮಾರು ೧೨ ಉದ್ಯಾನವನಗಳು ಬರುತ್ತವೆ. ಪ್ರತಿ ಭಾನುವಾರ ಒಂದೊಂದು ಉದ್ಯಾನವನವನ್ನು ಸ್ವಚ್ಛಗೊಳಿಸುತ್ತೇವೆ. ಶಕ್ತಿನಗರದ ಉದ್ಯಾನವನದಲ್ಲಿ ಇನ್ನೂ ಸ್ವಚ್ಛತಾ ಕಾರ್ಯ ಆಗಬೇಕಾಗಿತ್ತು. ಮುಂದಿನ ಭಾನುವಾರ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಹಾಗಾಂವಕರ್ ಅವರು ಮಾತನಾಡಿ, ಕಲಬುರ್ಗಿ ಸ್ಮಾರ್ಟ್ ಸಿಟಿ ಕ್ಲಬ್ ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಈಗಾಗಲೇ ಹಲವಾರು ಉದ್ಯಾನವನಗಳಲ್ಲಿ ಸುಮಾರು ೫೦೦ ಗಿಡಗಳನ್ನು ನೆಡಲಾಗಿದೆ. ಅವುಗಳ ಸಮರ್ಪಕ ನಿರ್ವಹಣೆಗೂ ಆಸಕ್ತಿ ವಹಿಸಿದೆ. ಈಗ ಪಾಲಿಕೆಯು ಕೈಗೊಂಡ ಸ್ವಚ್ಛತಾ ಕಾರ್ಯದಲ್ಲಿ ಮುಂದಿನ ಭಾನುವಾರದಿಂದ ಕ್ಲಬ್‌ನ ನಾಲ್ಕೈದು ಸದಸ್ಯರು ಸಹ ಭಾಗವಹಿಸಲಿದ್ದಾರೆ. ಇದರಿಂದ ಉದ್ಯಾನವನದ ಸ್ವಚ್ಛತಾ ಕಾರ್ಯವು ಸಮರ್ಪಕವಾಗಿ ನೆರವೇರಲಿದೆ ಎಂದರು.
ಈ ಸಂದರ್ಭದಲ್ಲಿ ಕ್ಲಬ್‌ನ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ನಳಿನಿ ಮಹಾಗಾಂವಕರ್ ಅವರು ಮಾತನಾಡಿ, ಉದ್ಯಾನವನದಲ್ಲಿನ ಗಿಡ, ಗಂಟಿಗಳಿಗೆ ಬೆಂಕಿ ಹಚ್ಚಿ ಸ್ವಚ್ಛಗೊಳಿಸಬಾರದು. ಕಸಕ್ಕೆ ಬೆಂಕಿ ಹಚ್ಚುವುದನ್ನು ಪಾಲಿಕೆಯು ನಿಷೇಧಿಸಿದೆ. ಬೆಂಕಿಯಿಂದ ಗಿಡ, ಗಂಟಿಗಳು ಹಾಗೂ ಕಸದಲ್ಲಿರುವ ಜೀವ, ಜಂತುಗಳು ಸುಟ್ಟು ಭಸ್ಮವಾಗುತ್ತವೆ. ಆದ್ದರಿಂದ ಬೆಂಕಿ ಹಚ್ಚದೇ ಗಿಡ, ಗಂಟಿಗಳನ್ನು ತೆರವುಗೊಳಿಸುವಂತಹ ಕಾರ್ಯ ಮಾಡಬೇಕು ಎಂದು ಸಲಹೆ ಮಾಡಿದರು.
ಕ್ಲಬ್ ಜಂಟಿ ಕಾರ್ಯದರ್ಶಿ ಹಾಗೂ ನ್ಯಾಯವಾದಿ ರಾಜಶೇಖರ್ ಡೊಂಗರಗಾಂವ್, ನ್ಯಾಯವಾದಿ ಅನಿತಾ ರೆಡ್ಡಿ, ಖಜಾಂಚಿಗಳಾದ ನ್ಯಾಯವಾದಿ ಎಂ.ಎಂ.ಎಲ್. ಅಲಂಕಾರ್, ಕಾರ್ಯನಿರ್ವಾಹಕ ಸದಸ್ಯರಾದ ಎಸ್.ಆರ್. ಚಿಗೋನ್ ಅವರು ಸಹ ಈ ಬಾರಿಯು ಪಾಲಿಕೆಯ ವತಿಯಿಂದ ಕೈಗೊಂಡ ಉದ್ಯಾನವನದ ಸ್ವಚ್ಛತೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಹಲವಾರು ಕಾರಣಗಳಿಂದ ಕ್ಲಬ್‌ನ ಅನೇಕ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿಲ್ಲ. ಮುಂದಿನ ಬಾರಿ ಕನಿಷ್ಠ ಐವರು ಕ್ಲಬ್ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವ ಕುರಿತು ಕ್ಲಬ್ ಅಧ್ಯಕ್ಷರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…