ಬಿಸಿ ಬಿಸಿ ಸುದ್ದಿ

ಪೂಜ್ಯ ಶ್ರೀ ವಿಶ್ವೇಶ್ವರ ತೀರ್ಥರ ನಿಧನಕ್ಕೆ ಗಣ್ಯರಿಂದ ಸಂತಾಪ

ಕಲಬುರಗಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶ್ವರ ತೀರ್ಥರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಪೂಜ್ಯರು ತಮ್ಮ ಬದುಕಿನುದ್ದಕ್ಕೂ ಸಮಾಜದ ಸರ್ವರ ಏಳಿಗೆಗೆ ಹಾಗೂ ಸೌಹಾರ್ದತೆ ಬೆಸುಗೆಗಾಗಿ ಬಹು ದೊಡ್ಡ ಕಾರ್ಯವನ್ನು ಮಾಡಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಸುಭಾಷ ರಾಠೋಡ ಕಂಬನಿ ಮಿಡಿದಿದ್ದಾರೆ.

ಸಾಮಾಜಿಕ ಪಿಡುಗಾದ ಅಸ್ಪಶ್ಯತೆ ನಿವಾರಣೆಗಾಗಿ ದಲಿತ ಓಣಿಗಳಲ್ಲಿ ಪಾದಯಾತ್ರೆ ಮಾಡಿ ಸಮಾನತೆಗಾಗಿ ಬಹುದೊಡ್ಡ ಕಾರ್ಯವನ್ನು ಮಾಡಿರುವ ಶ್ರೀಗಳು ತಮ್ಮ ಶ್ರೀಮಠದಲ್ಲಿ ಇಫ್ತಾರ್ಕೂಟ ಏರ್ಪಡಿಸುವ ಮೂಲಕ ಭಾತೃತ್ವವನ್ನು ಮೂಡಿಸುವ ಕಾರ್ಯ ಮಾಡುವ ಮೂಲಕ ಕೋಮು ಸಾಮರಸ್ಯ ಮೂಡಿಸಿದವರು ಅವರ ಅಗಲಿಕೆಯ ಸಹಿಸಿಕೊಳ್ಳುವ ಶಕ್ತಿಯನ್ನು ಭಕ್ತವೃಂದಕ್ಕೆ ಭಗವಂತ ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.

ಕಲಬುರಗಿ: ನಾಡಿನ ಹಲವೆಡೆ ವಿದ್ಯಾಸಂಸ್ಥೆಗಳನ್ನು ತೆರೆದು ಸಾವಿರಾರು ಬಡಮಕ್ಕಳಿಗೆ ಆಶ್ರಯದಾತರಾಗಿದ್ದ ಮತ್ತು ಶ್ರೇಷ್ಠ ಯತಿಗಳಲ್ಲಿ ಒಬ್ಬರಾಗಿದ್ದ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶ್ವರ ತೀರ್ಥರ ನಿಧನ ಸಮಾಜಕ್ಕೆ ಬಹು ದೊಡ್ಡ ನಷ್ಟವಾಗಿದ್ದು ಹಿಂದುತ್ವ, ರಾಷ್ಟ್ರೀಯತೆ, ಪ್ರಾಚೀನ ಮೌಲ್ಯಗಳ ಪ್ರಸಾರಕ್ಕಾಗಿ ತಮ್ಮ ಬದುಕನ್ನೆ ಅರ್ಪಿಸಿಕೊಂಡಿದ್ದ ಸಂತರಾಗಿದ್ದರೆಂದು ಗಾಯತ್ರಿ ಬ್ರಾಹ್ಮಣ ಮಹಿಳಾ ಟ್ರಸ್ಟ್ನ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ದೇಶಮುಖ ಶೋಕ ವ್ಯಕ್ತಪಡಿಸಿದ್ದಾರೆ.

ಇಳಿ ವಯಸ್ಸಿನಲ್ಲೂ ಹಗಲಿರುಳು ದೇಶ ಸುತ್ತಿ ಬಿಡುವಿಲ್ಲದೆ ಜನತೆಯ ಬದುಕು ಹಸನು ಮಾಡಲು ದುಡಿದು ಧರ್ಮ ಜಾಗೃತಿ, ಸಾಮರಸ್ಯ, ಶಾಂತಿ ಮೂಡಿಸುವ ಕಾರ್ಯದಲ್ಲಿ ಮಹಾಪೂಜ್ಯರು ಕೃಷ್ಣ ಪೂಜೆಯೊಂದಿಗೆ ಜನಸೇವೆಯನ್ನು ಮಾಡಿ ವಿಶ್ವದ ಜನತೆಯ ಮನ್ನಣೆಗೆ ಪಾತ್ರರಾಗಿದ್ದರು. ಅವರ ಅಗಲಿಕೆಯ ಸಹಿಸಿಕೊಳ್ಳುವ ಶಕ್ತಿಯನ್ನು ಅಪಾರ ಭಕ್ತವೃಂದಕ್ಕೆ ನೀಡಲೆಂದು ಟ್ರಸ್ಟ್ನ ಕಾರ್ಯದರ್ಶಿಗಳಾದ ಶ್ರೀಮತಿ ಮಂದಾಕಿನಿ ಪೂಜಾರಿ ಉಪಾಧ್ಯಕ್ಷೆ ಉಮಾ ಪೂಜಾರಿ ಶೋಕ ವ್ಯಕ್ತ ಪಡಿಸಿದ್ದಾರೆ.

ಕಲಬುರಗಿ: ನಾಡಿನ ಶ್ರೇಷ್ಠ ಯತಿಗಳಲ್ಲಿ ಒಬ್ಬರಾಗಿದ್ದ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶ್ವರ ತೀರ್ಥರ ನಿಧನ ಸಮಾಜಕ್ಕೆ ಬಹು ದೊಡ್ಡ ನಷ್ಟವಾಗಿದ್ದು ರಾಷ್ಟ್ರೀಯತೆ, ಸನಾತನ ಹಿಂದೂಧರ್ಮ, ಪ್ರಸಾರಕ್ಕಾಗಿ ತಮ್ಮ ಬದುಕನ್ನೆ ಸಮರ್ಪಿಸಿದ ಬಹುದೊಡ್ಡ ಚೇತನ ಪೂಜ್ಯರಾಗಿದ್ದರೆಂದು ಅಫಜಲಪೂರ ತಾಲೂಕಿನ ಸುಕ್ಷೇತ್ರ ಗೊಬ್ಬೂರವಾಡಿಯ ಸದ್ಗುರು ಶ್ರೀ ಸೇವಾಲಾಲ ಬಂಜಾರಾ ಶಕ್ತಿಪೀಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಬಳಿರಾಮ ಮಹಾರಾಜರು ಶೋಕ ವ್ಯಕ್ತಪಡಿಸಿದ್ದಾರೆ.

ಇಳಿ ವಯಸ್ಸಿನಲ್ಲೂ ಹಗಲಿರುಳು ನಾಡಸುತ್ತಿ ಜನರಲ್ಲಿ ಧರ್ಮ ಜಾಗೃತಿ, ಸಾಮರಸ್ಯ, ಶಾಂತಿ ಮೂಡಿಸುವ ಮಹಾಕಾಯಕದಲ್ಲಿ ಮಹಾಪೂಜ್ಯರು ನಿರತರಾಗಿದ್ದರು. ಹಿರಿಯ ಚೇತನವಾಗಿದ್ದ ಪೂಜ್ಯರು ಸಂತಗಣಕ್ಕೆ ಮಾರ್ಗದರ್ಶಕರಾಗಿದ್ದರೆಂದು ಪೂಜ್ಯರು ನುಡಿದಿದ್ದಾರೆ. ಪೂಜ್ಯರ ಆತ್ಮಕ್ಕೆ ಭಗವಂತ ಶಾಂತಿ ದಯಪಾಲಿಸಲಿ ಅವರ ಅಗಲಿಕೆಯ ಸಹಿಸಿಕೊಳ್ಳುವ ಶಕ್ತಿಯನ್ನು ಅಪಾರ ಭಕ್ತವೃಂದಕ್ಕೆ ನೀಡಲೆಂದು ಪ್ರಾರ್ಥಿಸುತ್ತೇವೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago