ಆಶಿಕ್ ಮುಲ್ಕಿ ಕಾವ್ಯಕ್ಕೆ ಮನವಿಡೋಣ;

0
232

ದೊರೆಯೇ
ನನ್ನ ಬಳಿ ಸಾಬೀತು
ಪಡಿಸಲು ಏನೂ ಉಳಿದಿಲ್ಲ
ಉಳಿದಿರುವುದು ಈಗ
ನನ್ನ ಬಳಿಯೂ ಇಲ್ಲ

ಕಾಣದ ಊರು ನನ್ನದಾಗುವಾಗ
ಆಳುತ್ತಾ ಬಿದ್ದ ಊರು ನನ್ನದಲ್ಲವಂತೆ
ಏನು ಹೇಳಲಿ ದೊರೆಯೇ
ಇದು ಗೊತ್ತಿದ್ದರೆ ಹುಟ್ಟಿ
ಬಿಳುವಾಗಲೇ ಒಂದಿಡಿ ಮಣ್ಣು
ಅಂಗೈಯಲ್ಲಿ ಜೋಪಾನ ಮಾಡಿಕೊಳ್ಳುತ್ತಿದ್ದೆ

Contact Your\'s Advertisement; 9902492681
ಚಿತ್ರ ಕೃಪೆ : ನಭಾ ಒಕ್ಕುಂದ

ನನ್ನ ಹಿರಿಯರು ಮೋಸ ಹೋಗುತ್ತಿದ್ದಾರೆ
ಬಿಳಿಯರ ಬೂಟು ನೆಕ್ಕಿದ ನಾಲಗೆ ಈಗ
ನನ್ನನ್ನು ಪರಕೀಯನೆಂದು ಹೇಳುವಾಗ
ಎಲ್ಲಿಂದ ತಂದು ಕೊಡಲಿ ದೊರೆಯೇ
ಸಾಬೀತಿನ ಪತ್ರವಾ..?

ಹಾಗಾದರೆ ಅವರೊಂದು
ಕೆಲಸ ಮಾಡಲಿ ದೊರೆಯೇ
ಬಿಳಿ ಹುಳುಗಳ ಬೂಟು
ಹುಡುಕಿಕೊಂಡು ತರಲಿ
ಆ ಬೂಟಿನ ತಳಪದರದಲ್ಲಿ
ನನ್ನ ಪೂರ್ವಜರ ಎದೆಯ
ಅಚ್ಚೆ ಇದೆ, ಮೇಲೆ ಕೆಲ ನಾಲಗೆಯ
ಅಚ್ಚೆಯೂ ಇದೆ, ಅದಷ್ಟೇ
ನನ್ನ ಬಳಿ‌ ಇರುವ ಏಕೈಕ ಸಾಬೀತು ಪತ್ರ

ಇಲ್ಲ ದೊರೆಯೇ ನೀನೇ
ದರೆಗಿಳಿದು ಬಂದರೂ ಸರಿ
ನಾನು ಒಂದಿಂಚೂ ಸರಿಯುವುದಿಲ್ಲ
ಈ‌ ನೆಲದ ಬದಲಿಗೆ ಸ್ವರ್ಗದ
ಆಮಿಷವೊಡ್ಡಿದರೂ ಅಷ್ಟೇ
ಕೊನೆಯ ಉಸಿರು‌ ಇಲ್ಲಿನ
ಗಾಳಿಯಲ್ಲಿ ಲೀನಗೊಳ್ಳಬೇಕು
ನನ್ನ ರಕ್ತವನ್ನ ಈ ನೆಲದ
ಮಣ್ಣಷ್ಟೇ ಕುಡಿಯಬೇಕು
ನನ್ನ ಮಾಂಸವನ್ನ ಈ
ನೆಲದ ಮಣ್ಣಷ್ಟೇ ತಿಂದು ತೇಗಬೇಕು

– ಆಶಿಕ್ ಮುಲ್ಕಿ, ಪತ್ರಕರ್ತ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here