ಅಂಕಣ ಬರಹ

ಗುರಿ ಇಲ್ಲದ ತಮ್ಮನಿಗೆ ಅಕ್ಕನ ಧೈರ್ಯದಿಂದ ಸಿಕ್ಕಿತು ವಿಶ್ವಾಸ, ತಮ್ಮನ ಯಶಸ್ವಿನ ಲೇಖನ

ಮನುಷ್ಯಜೀವನದಲ್ಲಿ ಬಹುಬೇಗ ಬೆಳೆಯಬೇಕಾದರೆ ಒಂದು ಸಿನಿಮಾ ನಟ, ಅಥವಾ ಕ್ರೀಡಾಪಟು, ಇಲ್ಲ ರಾಜಕಾರಣಿ ಈ ಮೂರರಲ್ಲಿ ಒಬ್ಬನಾಗಿರಬೇಕು ಎಂದು ಹೇಳಿದ ಅಕ್ಕನ ಮಾತುಗಳು ಈಗಲೂ ಮನಸ್ಸಲ್ಲಿ ಅಚ್ಚಳಿಯದ ಹಾಗೇ ಉಳಿದಿವೆ. ಅವಳ ಆಸೆ ಅಷ್ಟೇ ಅಲ್ಲ ನನ್ನಾಸೆಕೂಡ ಅದೇ ಆಗಿತ್ತು.

ಆಗ ತಾನೇ ಡಿಗ್ರಿ ಮುಗಿಸಿ ಮುಂದೇ ಯಾವ ಕೋರ್ಸ್ ಮಾಡಬೇಕೆಂದು ಸ್ವಲ್ಪವು ಆಲೋಚನೆಯಿಲ್ಲದೆ ಊರಲ್ಲಿ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ಕಾಲ ಕಳೆಯುತ್ತಿದ್ದೆ. ನನ್ನ ಬಾಲ್ಯದ ಕೆಲ ಗೆಳೆಯರು ಪೊಲೀಸ್ ಇಲಾಖೆಯಲ್ಲಿ ಸೇರಿದ್ದರು. ನನಗೆ ನಿಧಿರ್ಷ್ಟವಾದ ಗುರಿ ಇರಲಿಲ್ಲ. ನಮ್ಮದು ಬಡ ಕುಟುಂಬ. ಅಪ್ಪ ಶ್ರಮ ಪಡುತ್ತಿದ್ದನ್ನು ನೋಡಿ ಕಣ್ಣಲ್ಲಿ ನೀರು ಬರುತ್ತಿತ್ತು. ಇಲ್ಲಿಗೆ ನನ್ನ ವಿದ್ಯಾಭ್ಯಾಸ ನಿಲ್ಲಿಸಿ ಅಪ್ಪನ ಕೆಲಸದಲ್ಲಿ ನೆರವಾಗಬೇಕೆಂದು ನಿರ್ಧಾರ ಮಾಡಿದ್ದೆ.

ಒಂದು ದಿನ ಅಕ್ಕ ನನ್ನ ಸ್ಥಿತಿಯನ್ನು ನೋಡುವುದಕ್ಕೆಆಗದೇ ಕರೆಸಿ ಕೂರಿಸಿಕೊಂಡು ಬುದ್ದಿವಾದ ಹೇಳುತಾ, ಜಗತ್ತಿನಲ್ಲಿ ಹೆಚ್ಚು ಜನಪ್ರೀಯ ವ್ಯಕ್ತಿಯಾಗಬೇಕೆಂದರೆ ಒಂದು ಸಿನಿಮಾ ನಟ, ರಾಜಕಾರಣಿ ಯಾಗಿರಬೇಕು ಇಲ್ಲಾ ಜನಗುರುತಿಸುವ ಹಾಗೆ ಬೆಳೆಯಬೇಕು. ಯಾವದಾದರು ಕೋರ್ಸ್ ಮಾಡು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸು. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದು ಅಲ್ಲ. ತಾಳ್ಮೆ, ನಂಬಿಕೆ, ಹಾಗೂ ಆತ್ಮವಿಶ್ವಾಸ ಇದ್ದರೆ ಎನನ್ನಾದರು ಸಾಧಿಸಬಹುದು. ಸುಮ್ಮನೆ ಕೂತು ಕಾಲ ಕಳೆಯಬೇಡ ಎಂದು ತಿಳಿಹೇಳಿದಳು.

ಒಡ ಹುಟ್ಟಿದವಳು ಹೇಳಿದ್ದನ್ನು ಕೇಳಿ ಒಂಟಿಯಾಗಿ ತುಂಬಾ ಗಾಢವಾಗಿ ಯೋಚನೆ ಮಾಡಿ. ಅವಳ ಮಾತುಗಳಿಗೆ ಬೆಲೆ ಕೊಟ್ಟು ಅವಳಾಸೆಯಂತೆ ನಾನಗೂ ಕೂಡ ಜನಗುರುತಿಸುವ ಹಾಗೆ ಬೆಳೆದು ನಿಲ್ಲಬೇಕೆಂದು ಮನದಲ್ಲಿಯೇ ಅಂದುಕೊಂಡೆ. ಅಕ್ಕಗೆ ಗೊತ್ತೆಯಾಗದೆ ನಾನೇ ಆಯ್ಕೆಮಾಡಿಕೊಂಡಿದ್ದು ಪತ್ರಿಕೋದ್ಯಮ ಕೋರ್ಸ್. ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಪತ್ರಿಕೋದ್ಯಮ ಸೇರಿಕೊಂಡೆ, ಆದರೆ ಯಾರು ಕೂಡ ನನಗೆ ಪರಿಚಯ ವಿರಲಿಲ್ಲ. ಇಲ್ಲಿ ಎಲ್ಲಾ ಹೊಸತಾಗಿತ್ತು. ಕಾಲೇಜಿಗೆ ಹೋಗಲು ಪ್ರಾರಂಭ ಮಾಡಿದಂತೆ ನಿಧಾನವಾಗಿ ಒಬ್ಬೊಬ್ಬರು ಪರಿಚಯವಾದರು. ಇಲ್ಲಿ ಓದಲು ಬಂದಿದ್ದ ಪ್ರತಿಯೊಬ್ಬರು ನನ್ನ ಹಾಗೆ ಒಂದೊಂದು ನಿರ್ಧಿಷ್ಠ ಗುರಿಯನ್ನುಇಟ್ಟುಕೊಂಡು ಬಂದಿದ್ದರು. ನನ್ನಲ್ಲಿನ ಆಲಾಸ್ಯದ ಭಾವನೆಗಳನ್ನು ಹೋಗಲಾಡಿಸುವಂತ ಶಿಕ್ಷಕರು ಸಿಕ್ಕಿದ್ದು ನನ್ನ ಪುಣ್ಯ. ಕಾಲ ಉರುಳಿದಂತೆ ದಿನಗಳು ಉರುಳುತ್ತವೆ. ಅಂದ ಹಾಗೇ ಕಾಲೇಜಿ ದಿನಗಳ ಕಳೆದು, ನೆನಪಿನ ದಿನಗಳು ಮಾತ್ರ ಉಳಿದಿರುವುದು ಗೊತ್ತೆಯಾಗಲಿಲ್ಲ. ಇನ್ನೇನು ಉಳಿದಿರೋದು ಮೂರು ತಿಂಗಳು ಮಾತ್ರ. ಕೋರ್ಸ್ ಮುಗಿಸಿದ ತಕ್ಷಣ ನನ್ನೆಲ್ಲಾ ಸ್ನೇಹಿತರು ಒಂದೊಂದು ದಿಕ್ಕಿನಂತ ಹೊರಡಲು ಸಿದ್ಧವಾಗುತ್ತಿದ್ದಾರೆ.

ನನಗೆ ನಟನೆಯಲ್ಲಿ ತುಂಬಾ ಹುಚ್ಚು. ನಾನು ಮತ್ತು ನನ್ನ ಬಾಲ್ಯದ ಗೆಳೆಯ ಇಬ್ಬರು ಕಾಲೇಜಿನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆವು. ಇವಾಗ ಅವನು ಬೆಂಗಳೂರಿನಲ್ಲಿದ್ದು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತ ಧಾರವಾಹಿಗಳಲ್ಲಿ ನಟಿಸುತ್ತಿದ್ದಾನೆ. ಸ್ವಂತ ಹಣದಲ್ಲಿ ಕಿರುಚಿತ್ರಗಳನ್ನು ತೆಗೆಯುತ್ತಾ ಅವನು ಒಂದು ಉನ್ನತ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ. ಈ ಕ್ಷೇತ್ರದಲ್ಲಿ ತನ್ನ ಭಾಗದ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಬೇಕೆಂಬುವುದು ಅವನ ಆಸೆ. ರೋಗಿ ಬಯಸುದ್ದು ಹಾಲು, ಎನ್ನುವಂತೆ ನನ್ನ ಗೆಳೆಯ ಕ್ಯಾಮೆರಾಮ್ಯಾನ್ ಹಾಗೂ ನಿರ್ದೇಶಕರ ಕೈ ಕೆಳಗೆ ಬರಹಗಾರರಿಗೆ ಕೆಲಸ ಹಾಗೂ ನಟನೆಗೂ ಅವಕಾಶ ಸಿಗಬಹುದೆಂದು ಹೇಳಿದ್ದನ್ನು ಕೇಳಿ ನನಗೆ ಬಯಸಿದ ಬಾಗಿಲು ಕೂಡ ತೆರೆದಂತೆ ಯಾಗಿದೆ.

ಯಾವ ದಿನಗಳಿಗಾಗಿ ಕಾಯುತ್ತಿದ್ದೆನೋ ಆ ದಿನಗಳು ಸಮೀಪಿಸುತ್ತಿವೆ. ಅಕ್ಕನ ಆಸೆಯನ್ನುಈಡೇರಿಸುವ ಕ್ಷಣಗಳನ್ನು ಕಂಡು ಮನದಲ್ಲೆನೋ ಅರ್ಧದಷ್ಟು ಸಾಧಿಸಿದಂತ ಖುಷಿ. ಕನಸುಗಳ ಮೂಟೆಯನ್ನೊತ್ತಿಕೊಂಡು ಬೆಂಗಳೂರಿಗೆ ಹೋಗಿ ಗೆಳೆಯನ ಜೊತೆಯಲ್ಲಿ ಧಾರವಾಹಿಗಳಲ್ಲಿ ಪಾತ್ರ ಅಥವಾ ಬೇರೆಯಾವುದೇ ಕೆಲಸ ಇದ್ದರು. ಮಾಡಬೇಕೆಂದುಕೊಂಡಿದ್ದೆನೆ.  ಸಿನಿಮಾದಲ್ಲಿ ಕೆಲಸ ಖಾಯಂ ಆಗಿದ್ದು ಮಾಡಬೇಕೆಂದು ಖಚಿತವಾಗಿ ನಿರ್ಧರಿಸಿದ್ದೇನೆ. ನಾನು ಕೆಲಸ ಮಾಡುವ ವಿಷಯ ಬಗ್ಗೆ ಅಕ್ಕನಿಗೆ ತಿಳಿಸುವ ಆಸೆ. ಆದರೆ ಅವಳೊಂದಿಗೆ ಜಗಳವಾಡಿ ಮಾತು ಬಿಟ್ಟುದೂರವಾಗಿದ್ದೆನೆ. ಅವಳಿಗೆ ಈ ನನ್ನ ಲೇಖನದ ಮುಖಾಂತರ ತಿಳಿಸುತ್ತಿದ್ದೇನೆ.

ನಿಂಗಣ್ಣಎಮ್. ಕಾಡಮಗೇರಾ

ಪತ್ರಿಕೋದ್ಯಮ ವಿದ್ಯಾರ್ಥಿ

 9880421730

sajidpress

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 hour ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

3 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

10 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

10 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

11 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

21 hours ago