ಕಲಬುರಗಿ: ಈಗಿನ ಕಾಲದ ಯುವಜನತೆಗೆ ಪುಸ್ತಕ ಓದುವ ತಾಳ್ಮೆಯು ಇಲ್ಲ, ಸಮಯವೂ ಇಲ್ಲ ಆದಕಾರಣ ವಿದ್ಯಾರ್ಥಿ ಪುಸ್ತಕಗಳನ್ನು ಅಧ್ಯಯನ ಮಾಡುವುದ ಹವ್ಯಾಸ ಹೊಂದುವುದರಿಂದ ವಿದ್ಯಾರ್ಥಿಗಳಲ್ಲಿನ ವ್ಯಕ್ತಿತ್ವ ಮತ್ತು ಪ್ರತಿಭೆ ಹೊರಬರುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಅವರು ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಅಡಿಯಲ್ಲಿ ಎಮ್.ಎ ಕನ್ನಡ ವಿಭಾಗದಲ್ಲಿ ಆಯೋಜಿಸಿದ್ದ ಜಾಣ-ಜಾಣೆಯರ ಬಳಗ ಕಾರ್ಯಕ್ರಮ ಹೂವಿನ ಕುಂಡಕ್ಕೆ ನೀರು ಎರುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸದರು. ಪುಸ್ತಕ ಪ್ರಾಧಿಕಾರ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ವೇದಿಕೆ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಮುಖ್ಯಅಥಿತಿಗಳಾಗಿ ಆಗಮಿಸಿದ್ದ ಸೋಮಶಂಕರಯ್ಯಾ ಅವರು ಪುಸ್ತಕ ಓದುವ ರುಚಿ ವಿದ್ಯಾರ್ಥಿಗಳು ಬೇಳಸಿಕೊಳ್ಳಬೇಕು ಆಗ ಮಾತ್ರ ಜೀವನದಲ್ಲಿ ಏನಾದರು ಸಾಧಿಸಲು ಅಣಿಆಗುತ್ತೀರಿ, ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಲ್ಲಿ ತಿಳಿ ಹೇಳಿದರು.
ವೇದಿಕೆ ಮೇಲೆ ಕನ್ನಡ ವಿಭಾಗದ ಡೀನ್ ಡಾ.ಎಂ.ಎಸ್.ಪಾಟೀಲ್ ಹಾಗೂ ಇಂಗ್ಲಿಷ್ ವಿಭಾಗದ ಡೀನ್ ಡಾ.ಎಲೆನೊರ್ ಗೀತಮಾಲಾ ಉಪಸ್ಥಿತರಿದ್ದರು. ಡಾ ನಾನಾಸಾಹೇಬ ಹಚ್ಚಡದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಶಿವರುದ್ರಯ್ಯ, ಬಸವರಾಜ, ಸತ್ಲಜಾ, ಸುವರ್ಣ ಇವರು ನನ್ನ ನೆಚ್ಚಿನ ಪುಸ್ತಕದ ಮೇಲೆ ಅಭಿಪ್ರಾಯ ಮಂಡನೆ ಮಾಡಿದರು.
ವಿದ್ಯಾರ್ಥಿಗಳಾದ ಸರೋಚನ ನಿರೂಪಿಸಿದರು, ಶಿವರುದ್ರಯ್ಯ ಸ್ವಾಗತಿಸಿದರು, ಹಾಗೂ ಮಲ್ಲಿಕಾರ್ಜುನ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.