ಬಾಗಲಕೋಟ: ನೀರಿನ ಸಮಸ್ಯೆ ಕುರಿತು ಶಾಸಕ ಆನಂದ ನ್ಯಾಮಗೌಡ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಮಹಾರಾಷ್ಟ್ರದ ನೀರಾವರಿ ಸಚಿವರಾದ ಗಿರೀಶ್ ಮಹಾಜನ್‍ರವರನ್ನು ಭೇಟಿಯಾಗಿ ನಮ್ಮ ಭಾಗದ ನೀರಿನ ಅಭಾವನ್ನು ವಿವರಿಸಿ ಕೋಯ್ನಾ ಜಲಾಶಯದಿಂದ 2 ಟಿ.ಎಂ.ಸಿ. ನೀರನ್ನು ಕೃಷ್ಣಾ ನದಿಗೆ ಹರಿಸಬೇಕೆಂದು ಕೇಳಿಕೊಳಲಾಗಿದೆಂದು ಅವರು ತಿಳಿಸಿದ್ದರು.
ಇದೇ ಸಂದರ್ಭದಲ್ಲಿ ಸದರಿ ಸಮಸ್ಯೆಗೆ ಶಾಶ್ವತವಾದ ಒಂದು ಪರಿಹಾರ ಕಂಡುಕೊಳ್ಳುವ ಬಗ್ಗೆಯೂ ಚರ್ಚೆ ನಡೆಯಿತು, ಎರಡು ರಾಜ್ಯಗಳು ಪರಸ್ಪರ ಕೆಲ ಒಪ್ಪದಂದ ಮಾಡಿಕೊಳ್ಳುವ ಮೂಲಕ ಮುಂಬರುವ ದಿನಗಳಲ್ಲಿ ಈ ಶಾಶ್ವತ ಪರಿಹಾರ ಅನುಷ್ಟಾನಗೊಳ್ಳಲಿರು ವಿಶ್ವಾಸ ವ್ಯಕ್ತಪಡಿಸಿದ್ದರು.
ಇದೇ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಕಾಶ ಹುಕ್ಕೇರಿಯವರು ಮಹಾರಾಷ್ಟ್ರದ ಸಚಿವರಿಗೆ ದೂರವಾಣಿಯ ಮುಖಾಂತರ ಮಾತನಾಡಿ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಕೇಳಿಕೊಂಡರು.
ಮಹಾರಾಷ್ಟ್ರದ ನೀರಾವರಿ ಸಚಿವರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದ್ದು ನೀರು ಬಿಡಲು ಸಮ್ಮತಿ ನೀಡಿದ್ದಾರೆಂದು ಅವರು ಭೇಟಿಯಾದ ನಿಯೋಗ ತಿಳಿಸಿದೆ.