ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಆರೋಪಿಗಳಿಗೆ ಮರಣ ದಂಡಣೆ

0
115

ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮತ್ತು ಕೊಲೆಯ ಕ್ರೋರ ಕೃತ್ಯ ನಡೆದು ಏಳು ವರ್ಷಗಳ ಬಳಿಕ ಅಪರಾಧಿಗಳಿಗೆ ಇದೆ ತಿಂಗಳು 22ರಂದು ಮರಣ ದಂಡನೆ ಆದೇಶ ಹೂರಡಿಸಿರುವುದು ಶ್ಲಾಘನೀಯ ಕ್ರಮ 2012 ಡಿಸೇಂಬರ 16ರಂದು ರಾತ್ರಿಯ ವೇಳೆ ಕ್ರೋರವಾಗಿ ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆ ಹಾಗೂ ನಿರ್ಭಯ ಗೆಳೆಯನನ್ನು ಬೇತಲಾಗಿಸಿ ರಸ್ತೆಗೆ ಎಸೆದಿದ್ದು ಹೇಯ ಕೃತ್ಯ ನಡೆದಿರುವುದರಿಂದ ಈ ಘಟನೆದಿಂದ ದೇಶವೆ ಬೆಚ್ಚಿ ಬಿದ್ದಿತ್ತು ಇದರಿಂದ ಮಹಿಳೆರಿಗೆ ದೊಡ್ಡ ಅಘಾತವಾಗಿತ್ತು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ  ಅತ್ಯಾಚಾರ ಪ್ರಕರಣದ ವಿವರಗಳು ಎಷ್ಟೊಂದು ಭೀಭತ್ಸವಾಗಿದ್ದವೆಂದರೆ ಅತ್ಯಾಚಾರಿಗಳನ್ನು ಕೂಡಲೇ ಗಲ್ಲಿಗೇರಿಸಿ ಎಂದು 2012ರಲ್ಲಿ ಭಾರತೀಯರೆಲ್ಲ ಬೀದಿಗಿಳಿದು ಪ್ರತಿಭಟಿಸಿದ್ದರು.

ಹೆಣ್ಣು ಮಕ್ಕಳ ಸುರಕ್ಷತೆಯ ವಿಚಾರ ದೇಶದ ಪ್ರಮುಖ ಚರ್ಚಾ ವಿಷಯವಾಯಿತು ಈ ಪ್ರಕರಣದಲ್ಲಿ ಅತಿಹೆಚ್ಚು ಹಿಂಸೆ ಮಾಡಿದ ಬಾಲಾಪರಾಧಿಯು ಕುಣಿಕೆಯಿಂದ ಪಾರಾಗಿದ್ದೂ ಕೂಡ ಆಕ್ರೋಶಕ್ಕೆ ಕಾರಣವಾಯಿತು. ಜನಾಕ್ರೋಶ ಮುಗಿಲುಮುಟ್ಟಿದ ರೀತಿ ಹೇಗಿತ್ತೆಂದರೆ, ಸರ್ಕಾರ ಕೂಡಲೇ ಎಚ್ಚೆತ್ತು ಹಲವಾರು ಕಾನೂನುಗಳನ್ನು ಜಾರಿಗೆ ತಂದಿತು, ಅತ್ಯಾಚಾರ ಪ್ರಕರಣಗಳ  ವಿಚಾರಣೆಗೆಂದೇ ಪ್ರತ್ಯೇಕ ತ್ವರಿತ ಗತಿ ನ್ಯಾಯಾಲಯಗಳನ್ನು ಸೃಷ್ಟಿಸಲಾಯಿತು. ಒಂದರ್ಥದಲ್ಲಿ ನಿರ್ಭಯಾ ಪ್ರಕರಣ ದೇಶದಲ್ಲಿ ಮಹಿಳೆಯರ ವಿರುದ್ಧದ ಅತ್ಯಾಚಾರ, ಹಿಂಸೆ, ಲೈಂಗಿಕ ದೌರ್ಜನ್ಯಗಳ ಬಗ್ಗೆ ವಿಸ್ತೃತ ಚರ್ಚೆಗೆ, ಚಿಂತನೆಗಳಿಗೆ ಕಾರಣವಾಯಿತು ಆದರೆ ಇದೆಲ್ಲದರ ಹೊರತಾಗಿಯೂ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ ಎನ್ನುವುದು ದುರಂತ.

Contact Your\'s Advertisement; 9902492681

ಇತ್ತೀಚೆಗೆ ಹೈದ್ರಾಬಾದ್‌ ಹಾಗೂ ಉನ್ನಾವೋಗಳಲ್ಲಿ ನಡೆದ ಅತ್ಯಾಚಾರ-ಕೊಲೆ ಪ್ರಕರಣಗಳಷ್ಟೇ ಅಲ್ಲದೆ, ಪ್ರತಿವರ್ಷ ದೇಶಾದ್ಯಂತ ದಾಖಲಾಗುತ್ತಿರುವ ಸಾವಿರಾರು ಪ್ರಕರಣಗಳು ಮಹಿಳಾ ಸುರಕ್ಷತೆಯ ಪ್ರಶ್ನೆಯನ್ನು ಎತ್ತುತ್ತಲೇ ಇವೆ  ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆ ಎಷ್ಟು ವಿಳಂಬ ಗತಿ, ಜಟಿಲತೆ ಹೊಂದಿದೆಯೆಂದರೆ, ಅಪರಾಧಿಗಳೆಲ್ಲ ಅಪೀಲಿನ ಮೇಲೆ ಅಪೀಲು ಸಲ್ಲಿಸುತ್ತಾ, ಜಾಮೀನು ಪಡೆಯುತ್ತಾ ಆರಾಮಾಗಿ ಇದ್ದುಬಿಡುತ್ತಾರೆ. ಉನ್ನಾವೋ ಪ್ರಕರಣದಲ್ಲಂತೂ ಜಾಮೀನಿನ ಮೇಲೆ ಹೊರಬಂದ ದುರುಳರು, ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ ಕೊಂದುಹಾಕಿದರು. ಇದೆಲ್ಲದರ ಫ‌ಲವಾಗಿ ಸಂತ್ರಸ್ತ ಕುಟುಂಬಗಳು ವರ್ಷಗಟ್ಟಲೇ ನ್ಯಾಯಾಲಯಗಳ ಮೆಟ್ಟಿಲು ಹತ್ತುತ್ತಾ, ನ್ಯಾಯಕ್ಕಾಗಿ ಅಂಗಲಾಚುತ್ತಾ ಬದುಕು ಸವೆಸುವಂತಾಗಿದೆ.

ನ್ಯಾಯಾಂಗ ವ್ಯವಸ್ಥೆಯ ವಿಳಂಬ ಕಾರ್ಯವೈಖರಿಯ ಮೇಲೆ ದೇಶವಾಸಿಗಳಿಗೆ ಎಷ್ಟೊಂದು ಅಸಮಾಧಾನವಿದೆ ಎನ್ನುವುದು ಹೈದ್ರಾಬಾದ್‌ ಪ್ರಕರಣದಲ್ಲಿ ಸಾಬೀತಾಯಿತು ಅಪರಾಧಿಗಳೆಲ್ಲ ಎನ್‌ಕೌಂಟರ್‌ನಲ್ಲಿ ಸತ್ತರು ಎನ್ನುವ ಸುದ್ದಿ ಕೇಳಿ ದೇಶವಾಸಿಗಳೆಲ್ಲ ಬೀದಿಗಿಳಿದು ಹರ್ಷೋದ್ಗಾರ ಮಾಡಿದರು. ಹೈದ್ರಾಬಾದ್‌ ಪೊಲೀಸರನ್ನು ಎತ್ತಿ ಕುಣಿದಾಡಿದರು.ಈ ಆದೇಶದಿಂದ ಇಂತಹ ಕೃತ್ಯ ಎಸೆಗಿದವರಿಗೆ ಎಚ್ಚೇರಿಕೆ ಗಂಟೆಯ ಪಾಠವಾಗಬೇಕು ಎಷ್ಟೋ ಯುವತಿಯರು ಅತ್ಯಾಚಾರಕ್ಕೆ ಒಳಗಾಗಿ ದೂರು ಸಲ್ಲಿಸಲು ಸಹ ಮುಂದೆ ಬರುವುದೀಲ್ಲಾ ಅದರಲು ನ್ಯಾಯಲಯ ಮೊರೆ ಹೋಗುವುದು ದೂರದ ಮಾತು ಎಲ್ಲಿ ಮಾನ ಮಾರ್ಯಾದೆ ಹೋಗುತ್ತದೆ ಎಂಬ ಸಂತ್ರಸ್ಥೆಯರು ನ್ಯಾಯಲದ ಮೊರೆದಿಂದ ದೂರ ಉಳಿದಿದೆ ಹೆಚ್ಚು.

ಎಲ್ಲಿ ಪ್ರಕರಣ ಸುಳ್ಳು ಆಗುತ್ತೇ ಅನ್ನೋ ಭಯದಿಂದ ಹಿಂದೆಟು ಹಾಕುತ್ತೀದರು ಇಂತಹ ಸೂಕ್ತ ಆದೇಶದಿಂದ ಮುಗ್ದ ಮಹಿಳೆಯರಿಗೆ ಧೈರ್ಯ ಬಂದತೆ ಹಾಗೂ  ಕಾನೂನಿನ ಮೇಲೆ ಸಂಪೂರ್ಣವಾಗಿ ನಂಬಿಕೆ ಬಂದತೆಯಾಗಿದೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಮುಚ್ಚಿಡದಂತೆ ನ್ಯಾಯಲಯದ ಮೊರೆ ಹೋಗಿ ಆತ್ಯಾಚಾರಕ್ಕೆ ಒಳಗಾದ ಪ್ರತಿ ಹೆಣ್ಣು ಅಪರಾಧಿಗಳಿಗೆ ಮರಣ ದಂಡನೆಯಂತಹ ಶಿಕ್ಷೆ ವಿಧಿಸಲು ನ್ಯಾಯಲದ ಮೊರೆ ಹೋಗುವುದು ಅನಿವಾರ್ಯ ಆದರೆ ಇದು ದೊಡ್ಡ ಮಟ್ಟೀಗೆ ಸಂದೇಶ ನೀಡಿದಂತೆ ಮತ್ತು ಎಚ್ಚೇರಿಕೆಯ ಪಾಠವಾಗಿದೆ ಇಂತಹ ಒಳ್ಳೇಯ ಆದೇಶದಿಂದ ಅತ್ಯಾಚಾರದಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ನ್ಯಾಯ ಸಿಕ್ಕೀದು ತಡವಾದರು ನ್ಯಾಯ ಜಯವಾಗಿದೆ ಇನ್ನಾದರು ಸರ್ಕಾರ ನ್ಯಾಯದ  ಪರವಾಗಿ ಬಾಕಿ ಉಳಿದಿರುವ ಪ್ರಕರಣಗಳು ಶಿಘ್ರವಾಗಿ ಕ್ರಮ ತೇಗೆದುಕೋಳಲ್ಲಿ ಹಾಗೂ ಸಮಾಜದಲ್ಲಿ ಕಿಡಿಗೇಡಿಗಳಿಂದ ಆಗುವ ಕೃತ್ಯಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಿ ದೇಶದ ಶಾಂತಿ ಸುವ್ಯವಸ್ಥೆ ಕಾಪಾಡಬೇಕಿದೆ 7 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ನಿರ್ಭಯಾ ಪೋಷಕರು ಶಾಂತಿಯಿಂದ ಇರಲು ಸಮಯ ಬಂದಿದೆ.

ಸಂತೋಷ ಜಾಬೀನ್ ಸುಲೇಪೇಟ
ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here