ಬಿಸಿ ಬಿಸಿ ಸುದ್ದಿ

ಸ್ಮಾರ್ಟ್ ಸಿಟಿ ಕ್ಲಬ್ ಬೇಡಿಕೆಗೆ ಪಾಲಿಕೆ ಆಯುಕ್ತರ ಸ್ಪಂದನೆ: ಉದ್ಯಾನವನಗಳ ಅಭಿವೃದ್ಧಿಗೆ ಚಾಲನೆ

ಕಲಬುರಗಿ: ನಗರದ ಹಸಿರೀಕರಣ, ಸೌಂದರ‍್ಯೀಕರಣ ಮತ್ತು ಮೂಲಭೂತ ಸೌಲಭ್ಯಗಳಿಗಾಗಿ ಅಸ್ತಿತ್ವಕ್ಕೆ ಬಂದಿರುವ ಕಲಬುರ್ಗಿ ಸ್ಮಾರ್ಟ್ ಸಿಟಿ ಕ್ಲಬ್‌ನ್ನು ಸೋಮವಾರ ಉಪ ನೊಂದಣಿ ಅಧಿಕಾರಿಗಳ ಕಚೇರಿಯಲ್ಲಿ ಅಧಿಕೃತವಾಗಿ ನೊಂದಣಿ ಮಾಡಲಾಯಿತು.

ಕ್ಲಬ್ ಅಧ್ಯಕ್ಷ ಪ್ರಭುಲಿಂಗ್ ಕೆ. ಮಹಾಗಾಂವಕರ್, ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಡೊಂಗರಗಾಂವ್, ಜಂಟಿ ಕಾರ್ಯದರ್ಶಿ ಶ್ರೀಮತಿ ಅನಿತಾರೆಡ್ಡಿ, ಖಜಾಂಚಿ ಎಂ.ಎಂ.ಎಲ್. ಅಲಂಕಾರ್, ಕಾರ್ಯನಿರ್ವಾಹಕ ಸದಸ್ಯರಾದ ಶ್ರೀಮತಿ ನಳಿನಿ ಮಹಾಗಾಂವಕರ್, ಎಸ್.ಆರ್. ಚಿಗೋನ್, ಸಿ.ಎಸ್. ಬಗಲಿ, ಸಿ.ಎ. ಗಡವಾಲ್, ಯಶವಂತ್ ಸಿಂಧೆ, ಕೆ.ಬಿ. ಭಂಕೂರ್, ಶಿವಪ್ಪ ದೊಡ್ಡಮನಿ, ಸಿದ್ರಾಮಪ್ಪ ನೀಲೂರ್, ಕಮಲಾಕರ್ ಎಲಕಪಳ್ಳಿ, ಮಹಾದೇವ್ ವಡಗಾಂವ್, ಬಸವರಾಜ್ ಚಿನಿವಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಹಿಂದೆ ಕ್ಲಬ್ ವತಿಯಿಂದ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ, ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ್ ಅವರಿಗೆ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ಪಾಂಡ್ವೆ ಅವರಿಗೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದಾಗ ಬೇಡಿಕೆಗಳಿಗೆ ಸ್ಪಂದಿಸಿದರು. ಆಯುಕ್ತರ ನಿರ್ದೇಶನದ ಮೇಲೆ ಪಾಲಿಕೆಯ ಅಭಿಯಂತರೆ ಸುಷಮಾ ಸಾಗರ್ ಅವರು ಕಾರ್ಯಾಚರಣೆ ಆರಂಭಿಸಿದರು.

ಹೊಸ ವರ್ಷದ ದಿನದಂದೇ ಶಕ್ತಿನಗರದಲ್ಲಿ ಅಪೂರ್ಣಗೊಂಡಿದ್ದ ಉದ್ಯಾನವನದ ಸ್ವಚ್ಛತಾ ಕಾರ್ಯಕ್ಮೆ ಮರು ಚಾಲನೆ ನೀಡಿದರು. ಜೆಸಿಬಿ ಯಂತ್ರಗಳ ಮೂಲಕ ಪೌರ ಕಾರ್ಮಿಕರು ಉದ್ಯಾನವನದಲ್ಲಿನ ಹಾಗೂ ಸುತ್ತಮುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿದರು. ಇಡೀ ಉದ್ಯಾನವನ ಈಗ ಝಳಝಳವಾಗಿ ಕಂಗೊಳಿಸುತ್ತಿದೆ. ಸುತ್ತಮುತ್ತಲೂ ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ಹಾಕುತ್ತಿರುವ ಕುರಿತು ತಿಳುವಳಿಕೆ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಅದೇ ರೀತಿ ಡಾ. ಎಂ.ಆರ್. ತಂಗಾ ಬಡಾವಣೆಯಲ್ಲಿನ ಒಂದು ಉದ್ಯಾನವನದ ಸ್ವಚ್ಛತಾ ಕಾರ್ಯವನ್ನು ಮಂಗಳವಾರ ಕೈಗೊಳ್ಳಲಾಗಿದೆ. ಇಡೀ ವಾರ್ಡ್ ಮಾದರಿಯಾಗಿ ಮಾಡಲು ಕ್ಲಬ್ ಪಣ ತೊಟ್ಟಿದ್ದು, ಅಂತಹ ಕಾರ್ಯಕ್ಕೆ ಪಾಲಿಕೆ ಅಭಿಯಂತರೆ ಸುಷ್ಮಾ ಸಾಗರ್ ಅವರೂ ಸಹ ಸಂಪೂರ್ಣ ಬೆಂಬಲಿಸಿ ಕಾರ್ಯಾಚರಣೆಗೆ ಧುಮುಕಿದ್ದಾರೆ. ಆದಾಗ್ಯೂ, ತಂಗಾ ಬಡಾವಣೆಯಲ್ಲಿನ ಸ್ವಚ್ಛತಾ ಕಾರ್ಯವು ನಿಧಾನಗತಿಯಲ್ಲಿ ನಡೆಯುತ್ತಿರುವ ಕುರಿತು ಹಾಗೂ ಅಭಿಯಂತರೆ ಸುಷ್ಮಾ ಸಾಗರ್ ಅವರು ಅನುಪಸ್ಥಿತಿ ಇರುವ ಕುರಿತು ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ನಳಿನಿ ಮಹಾಗಾಂವಕರ್ ಅವರು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಸುಷ್ಮಾ ಸಾಗರ್ ಅವರು ಸ್ಥಳದಲ್ಲಿದ್ದರೆ ಎಲ್ಲ ಕೆಲಸವೂ ಸುಗಮವಾಗಿ ಹಾಗೂ ಸಮರ್ಪಕವಾಗಿ, ಸಕಾಲದಲ್ಲಿ ನಡೆಯುವುದು ಎಂದು ತಿಳಿಸಿದ್ದಾರೆ.

ಈ ಅತೃಪ್ತಿಗೆ ಪಾಲಿಕೆಯ ಅಭಿಯಂತರೆ ಸುಷ್ಮಾ ಸಾಗರ್ ಅವರು ಪ್ರತಿಕ್ರಿಯಿಸಿ, ಪ್ಲಾಸ್ಟಿಕ್ ಬಳಕೆ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದೆ. ತಂಗಾ ಬಡಾವಣೆಯಲ್ಲಿನ ಸ್ವಚ್ಛತಾ ಕಾರ್ಯವು ಮುಂದುವರೆದಿದೆ. ಬುಧವಾರದಂದೂ ನಾನೂ ಪ್ಲಾಸ್ಟಿಕ್ ಬಳಕೆ ವಿರುದ್ಧ ದಾಳಿ ಕಾರ್ಯಾಚರಣೆಯಲ್ಲಿ ತೊಡಗುವೆ. ಸ್ವಚ್ಛತಾ ಕಾರ್ಯಕ್ಕೆ ಇದರಿಂದ ಯಾವುದೇ ರೀತಿಯ ಸಮಸ್ಯೆ ಹಾಗೂ ಹಿನ್ನಡೆ ಆಗದು ಎಂದು ಭರವಸೆ ನೀಡಿದರು.

ಈಗಾಗಲೇ ನೆಟ್ಟಿದ್ದ ೫೦೦ ಗಿಡಗಳಿಗೆ ನೀರು ಹಾಕುವಂತಹ ಕಾರ್ಯಕ್ಕೂ ಚಾಲನೆ ಸಿಕ್ಕಿದೆ. ಪ್ರತಿ ಭಾನುವಾರ ಒಂದೊಂದು ಉದ್ಯಾನವನ ಅಭಿವೃದ್ಧಿಗೆ ಪಾಲಿಕೆಯ ಅಭಿಯಂತರೆ ಮುಂದಾಗಿದ್ದು, ಇಂತಹ ಕಾರ್ಯಾಚರಣೆ ನಿರಂತರವಾಗಿ ಮುಂದುವರೆದಲ್ಲಿ ನಗರದ ಎಲ್ಲ ಉದ್ಯಾನವನಗಳು ಪುನಶ್ಚೇತನಗೊಂಡು ಕಂಗೊಳಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕ್ಲಬ್ ಅಧ್ಯಕ್ಷ ಪಿ.ಕೆ. ಮಹಾಗಾಂವಕರ್ ಅವರು ಹೇಳಿದರು.

ಬರುವ ಜನವರಿ ೨೬ರಂದು ಜರುಗುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಶಕ್ತಿನಗರದ ಉದ್ಯಾನವನದಲ್ಲಿಯೇ ಶಾಲಾ ವಿದ್ಯಾರ್ಥಿಗಳಿಂದ ಅದ್ದೂರಿಯಾಗಿ ಹಮ್ಮಿಕೊಳ್ಳಲು ಈಗಾಗಲೇ ಕ್ಲಬ್ ಅನೌಪಚಾರಿಕ ಸಭೆಯಲ್ಲಿ ನಿರ್ಧರಿಸಿದ್ದು, ಆ ಕುರಿತು ಮುಂದಿನ ಸಭೆಯಲ್ಲಿ ಅಧಿಕೃತವಾಗಿ ತೀರ್ಮಾನಿಸಲಾಗುವುದು ಎಂದು ಮಹಾಗಾಂವಕರ್ ಅವರು ತಿಳಿಸಿದ್ದಾರೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago