ಕಲಬುರಗಿ: ಇತ್ತೀಚಿಗೆ ಕಲಬುರಗಿಯಲ್ಲಿ ಪೌರತ್ವ ಪರ ನಡೆದ ರ್ಯಾಲಿ ಕುರಿತು ” ಕಲಬುರಗಿಯಲ್ಲಿ ಪೌರತ್ವದ ಪರ ಜನರ ಸುನಾಮಿ” ಎಂದು ವರ್ಣಿಸಿ ಭಾರತದ ಜನರು ಪೌರತ್ವ ಕಾಯಿದೆಯನ್ನು ಸ್ವಾಗತಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
ಪಿಯೂಷ್ ಗೋಯಲ್ ಅವರ ಟ್ವೀಟ್ ಗೆ ತಿರುಗೇಟು ನೀಡಿರುವ ಶಾಸಕರಾದ ಪ್ರಿಯಾಂಕ್ ಖರ್ಗೆ, ” ಪಿಯೂಷ್ ಅವರೇ ಈಗ ಕಲಬುರಗಿ ನಿಮ್ಮ ಗಮನ ಸೆಳೆಯಿತು. ಹಾಗೆಯೇ, ಯುಪಿಎ ಅವಧಿಯಲ್ಲಿ ಮಂಜೂರಾದ ಕಲಬುರಗಿ ರೈಲ್ವೇ ವಲಯ ಹಾಗೂ ನಿಮ್ಜ್ ಯೋಜನೆಯ ಸಧ್ಯದ ಸ್ಥಿತಿಗತಿಯ ಬಗ್ಗೆಯೂ ಸ್ವಲ್ಪ ಹೇಳುತ್ತೀರಾ” ? ಎಂದು ತಿರುಗೇಟು ನೀಡಿದ್ದಾರೆ.
ಪಿಯೂಷ್ ಗೋಯಲ್ ಅವರಲ್ಲದೇ ಕಲಬುರಗಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರಿಗೂ ಟಾಂಗ್ ನೀಡಿರುವ ಶಾಸಕರು, ಈ ಯೋಜನೆಗಳ ಬಗ್ಗೆ ಈಗಿನ ಕಲಬುರಗಿ ಎಂಪಿ ಅವರಿಗೂ ಮಾಹಿತಿ ಇಲ್ಲವೆಂದು ಕಾಣುತ್ತದೆ ಎಂದಿದ್ದಾರೆ.
ಕೇಂದ್ರ ಸರಕಾರ ಅನುದಾನ ನೀಡುವಲ್ಲಿ ವಿಫಲವಾಗಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯಗಳಿಂದಾಗಿ ನಮ್ಮ ರಾಜ್ಯದ ಅನುದಾನಕ್ಕೆ ಕತ್ತರಿ ಬಿದ್ದಿದೆ.
ಒಂದೆಡೆ,
> ವಸತಿ ಯೋಜನೆಗಳಿಗೆ – ರೂ. 1,000 ಕೋಟಿ
> ಮಹಿಳಾ ಕಲ್ಯಾಣ ಯೋಜನೆಗಳಿಗೆ – ರೂ. 1,786 ಕೋಟಿ
> ಶಿಕ್ಷಣ ಯೋಜನೆಗಳಿಗೆ – ರೂ. 267 ಕೋಟಿ
> ಯುವ ಸಬಲೀಕರಣ ಯೋಜನೆಗಳಿಗೆ – ರೂ. 474 ಕೋಟಿ
ಹಣವನ್ನು ನೀಡದೇ ಸತಾಯಿಸುತ್ತಿದೆ.
ಮತ್ತೊಂದೆಡೆ,
> ಸ್ಟಾಂಪ್ ಡ್ಯೂಟಿ (-3.74%)
> ಸಾರಿಗೆ (-10.3%)
> ಕೇಂದ್ರದ ತೆರಿಗೆ ಪಾಲು (-5.54%)
> ವಾಣಿಜ್ಯ ತೆರಿಗೆ (-0.49%)
ಸಂಗ್ರಹವೂ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ರಾಜ್ಯದ ಜಿ.ಎಸ್.ಟಿ ಪಾಲಿನ ತೆರಿಗೆಯಲ್ಲೂ ಸರಿಸುಮಾರು 7 ಸಾವಿರ ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ 2 ತಿಂಗಳಿಂದ ನೀಡದೇ ಸತಾಯಿಸುತ್ತಿದೆ.
Ripri? ಸುಭಿಕ್ಷೆಯ ನಾಡು ಇಂದು ಬಿಜೆಪಿ ಆಡಳಿತದಲ್ಲಿ ಈ ಪರಿಸ್ಥಿತಿ ತಲುಪಿರುವುದು ಕಳವಳಕಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಕಲಬುರಗಿ ಯಲ್ಲಿ ನಡೆದ ಪೌರತ್ವ ಪರ ಕಾಯಿದೆ ರ್ಯಾಲಿ ಬಗ್ಗೆ ಟ್ವೀಟ್ ಮಾಡಿದ್ದ ಪಿಯೂಷ್ ಗೋಯಲ್ ಶಾಸಕರ ಚಾಟಿ ಮಾತಿಗೆ ಸಿಲುಕಬೇಕಾಯ್ತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…