ಕಲಬುರಗಿ: ನಗರದಲ್ಲಿ ಹೆಚ್‌ಕೆಇಎಸ್ ಸಭಾಂಗಣದ ಎಸ್‌ಎಸಿ ಬಿಲ್ಡಿಂಗ್ ಹಾಗೂ ಪಿಡಿಎ ಕಾಲೇಜಿನಲ್ಲಿ ಜನೆವರಿ ೨೩ ರಂದು ಕಾಲೇಜ್ ಕ್ವಿಜ್ ಚಾಂಪಿಯನ್‌ಶಿಪ್ ಅನ್ನು ಹಮ್ಮಿಕೊಳ್ಳಲಾಗಿದೆ ಸೃವಸ್ತಿ ಫೌಂಡೇಷನ್ ಛೇರಮೇನ್ ಡಾ. ಕಿರಣ ದೇಶಮುಖ ಅವರು ತಿಳಿಸಿದ್ದಾರೆ.
ಸೃವಸ್ತಿ ಫೌಂಡೇಷನ್ ಕಲಬುರಗಿ ಯುವಜನರನ್ನು ಔದೋಗಿಕವಾಗಿ, ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಚಟುವಟಿಕೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಯಾವುದೇ ಲಾಭದ ಉದ್ದೇಶವಿಲ್ಲದೇ ಆಯೋಜಿಸುತ್ತಿದ್ದು, ಜನೇವರಿ ೨೩ ರಂದು ನಮ್ಮ ಕಲಬುರಗಿ ನೆಕ್ಸಟ್ ಕಾರ್ಯಕ್ರಮದಡಿ, ಕರ್ನಾಟಕ ಕ್ವಿಜ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಚಾಂಪಿಯನ್ ಶಿಪ್‌ನಲ್ಲಿ ಜಿಲ್ಲೆಯ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಚಾಂಪಿಯನ್‌ಶಿಪ್ ನಡೆಸಲಾಗುತ್ತದೆ ಹಾಗೂ ಇತಿಹಾಸ, ವಿಜ್ಞಾನ, ಪ್ರಚಲಿತ ವಿದ್ಯಮಾನ ಸೇರಿದಂತೆ ಅನೇಕ ವಿಷಯಗಳನ್ನು ಒಳಗೊಂಡಿರುತ್ತದೆ.
ವೇಳಾ ಪಟ್ಟಿಯು ನೊಂದಣೆ, ಪ್ರಾಥಮಿಕ ಮತ್ತು ಹಾಗೂ ಅದೇ ದಿನ ನಡೆಯುವ ಫೈನಲ್ ಹಂತವನ್ನು ಒಳಗೊಂಡಿದೆ. ಪ್ರಾಥಮಿಕ ಹಂತವು ಯಾವುದೇ ರೀತಿಯ ಋಣಾತ್ಮತ ಅಂಕಗಳನ್ನು ಒಳಗೊಂಡಿರುವುದಿಲ್ಲ. ಈ ಮೂಲಕ ಸ್ಪರ್ಧಿಗಳು ನೀರ್ಭಿತಿಯಿಂದ ತಮ್ಮ ಊಹೆಯ ಉತ್ತರಗಳನ್ನು ನೀಡಬಹುದು. ಪ್ರಾಥಮಿಕ ಹಂತದ ಅಗ್ರ ೮ ತಂಡಗಳು ಫೈನಲ್‌ಗೆ ಲಗ್ಗೆ ಇಡಲಿದ್ದು, ಫೈನಲ್ ಹಂತವು ಅದೇ ದಿನ ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ. ವಿಜೇತರಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ನೀಡಲಾಗುವುದು. ಮತ್ತು ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು.
ಕಲಬುರಗಿ ಕಾಲೇಜು ರಸಪ್ರಶ್ನೆ ಚಾಂಪಿಯನ್‌ಶಿಪ್ ೨೦೨೦ ವಿದ್ಯಾರ್ಥಿಗಳ ವೈಜ್ಞಾನಿಕ ಮತ್ತು ಶೈಕ್ಷಣಿಕ ಮನೋಭಾವವನ್ನು ಅನ್ವೇಷಿಸಲು, ಪ್ರೋತ್ಸಾಹಿಸಲು ಮತ್ತು ಅವರ ಜ್ಞಾನವನ್ನು ಹೆಚ್ಚಿಸಲು ಆಯೋಜಿಸಲಾಗಿದೆ ಅಲ್ಲದೇ, ಶಿಕ್ಷಣತಜ್ಞರಿಗೆ ಜಿಲ್ಲೆಯ ಯುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಅವರ ಬೌದ್ಧಿಕ ಕುತೂಹಲವನ್ನು ಪೂರೈಸಲು ಸರಿಯಾದ ವೇದಿಕೆಯನ್ನು ಒದಗಿಸುತ್ತದೆ ಎಂದು ಡಾ.ಕಿರಣ ದೇಶಮುಖ ತಿಳಿಸಿದ್ದಾರೆ.
ಮೊದಲನೇ ಬಹುಮಾನ ೨೦,೦೦೦ ರೂ., ಎರಡನೇ ಬಹುಮಾನ ೧೫,೦೦೦ ರೂ. ಹಾಗೂ ಮೂರನೇ ಬಹುಮಾನವಾಗಿ ೧೦,೦೦೦ ರೂ.ಗಳನ್ನು ನೀಡಲಾಗುವುದು ಎಂದು ಡಾ. ಕಿರಣ ದೇಶಮುಖ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೋ. 9845279693 ಗೆ ಸಂಪರ್ಕಿಸಬಹುದಾಗಿದೆ. ರಸಪ್ರಶ್ನೆ ಚಾಂಪಿಯನ್‌ಶಿಪ್ ೨೦೨೦ ಯಲ್ಲಿ ಭಾಗವಹಿಲು ವೆಬ್ ಸೈಟ್‌ಗೆ ಲಾಗಿನ್ ಆಗುವ ಮುಖಾಂತರ ನೋದಾಯಿಸಿಕೊಳ್ಳಬಹುದು. www.kalaburaginext.com
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…