ಕಲಬುರಗಿ: ಮನಸ್ಸು ಮತ್ತು ದೇಹ ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ ಒಂದು ತೊಂದರೆಗೊಳಗಾದರೆ ಇನ್ನೊಂದು ಅನಾರೋಗ್ಯಕ್ಕೀಡಾಗುತ್ತದೆ. ಮನಸ್ಸು ಒತ್ತಡಕ್ಕೊಳಗಾದಾಗ ದೇಹ ಹಲವು ರೋಗಗಳಿಗೆ ತುತ್ತಾಗುವ ಅಪಾಯವಿದ್ದು ಈ ನಿಟ್ಟಿನಲ್ಲಿ ಈ ಒಂದು ಉಪಯುಕ್ತ ಕಾರ್ಯಾಗಾರವನ್ನು ಆಯೋಜಿಸಿದ್ದು ಬಹಳ ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಒತ್ತಡ ನಿರ್ವಹಣ ಶಾಸ್ತ್ರ ಹಾಗೂ ಒತ್ತಡದ ಬಗೆಗಿನ ತಪ್ಪು ಪರಿಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳಲು ಈ ಕಾರ್ಯಾಗಾರ ಪೊಲೀಸ್ ಸಿಬ್ಬಂದಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ಯುವ ಉದ್ಯಮಿ ಹಾಗೂ ಎಸ್ ಬಿ ಪಾಟೀಲ್ ಗ್ರುಪ್ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಚಂದು ಪಾಟೀಲ್ ಅವರು ಹೇಳಿದರು.
ಕಲಬುರ್ಗಿಯ ತಾಜ್ ಸುಲ್ತಾನಪುರದಲ್ಲಿರುವ ಆರನೇ ಪಡೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗಾಗಿ ಇಂದು ಆಯೋಜಿಸಿದ್ದ ಒತ್ತಡ ಮುಕ್ತ ಮನಸ್ಸು, ರೋಗ ಮುಕ್ತ ದೇಹ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ತಮ್ಮ ಕಾರ್ಯದಲ್ಲಿ ಸದಾ ಒತ್ತಡವಿರುತ್ತದೆ. ಪೊಲೀಸ್ ಸಿಬ್ಬಂದಿಗಳು ವೃತ್ತಿಯಲ್ಲಿರುವಾಗಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮುಂಜಾಗ್ರತೆಯಿಂದ ಇರಬೇಕು. ಆರಕ್ಷಕರು ಸ್ವಸ್ಥವಾಗಿದ್ದರೆ ನಾಗರಿಕರು ಸುರಕ್ಷತೆಯಿಂದ ಇರಲು ಸಾಧ್ಯವಾಗುತ್ತದೆ. ದೇಹ ಆರೋಗ್ಯವಾಗಿದ್ದಾಗ ಮನಸ್ಸೂ ಸಹಿತ ಪ್ರಫುಲ್ಲವಾಗಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ ಎಂದು ನುಡಿದರು.
ಒತ್ತಡದ ಬಗೆಗಿನ ತಪ್ಪು ತಿಳುವಳಿಕೆಯಿಂದ ಬಹಳಷ್ಟು ಜನ ಹಾನಿಗೊಳಗಾಗಿದ್ದಾರೆ. ನಮ್ಮ ಭಾವನೆ ಹಾಗೂ ಮನೋಭಾವನೆ ಬದಲಾದರೆ ಒತ್ತಡ ನಿರ್ವಹಿಸುವುದು ಸುಲಭ ಎಂದು ಬೆಂಗಳೂರಿನಿಂದ ಆಗಮಿಸಿದ ತರಬೇತುದಾರ ಮನೋತಜ್ಞ ಭುಜಬಲಿ ಬೋಗಾರ ಕಾರ್ಯಾಗಾರ ನಡೆಸಿಕೊಟ್ಟು ವಿವಿಧ ಪ್ರಾಯೋಗಿಕ ತಂತ್ರಗಳನ್ನು ಹೇಳಿದರು .ಶೇಕಡಾ ೮೭% ಮಾನಸಿಕ ಮತ್ತು ದೈಹಿಕ ರೋಗಗಳು ಯಾವುದೇ ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ಅಲ್ಲ ನಮ್ಮ ಮನಸ್ಸಿನಿಂದಲೇ ಬರುತ್ತವೆ.ಮನಸ್ಸಿನ ಆಲೋಚನಾ ಕ್ರಮಗಳ ಬಗ್ಗೆ ಜಾಗೃತಿ ಹೋಂದಿದರೆ ಹಲವಾರು ರೋಗಗಳಾದ ಬಿಪಿ,ರಕ್ತದೊತ್ತಡ,ಮಧುಮೇಹ,ಕ್ಯಾನ್ಸರ್,ಹೃದಯ ಸಂಬಂದಿ ರೋಗಗಳನ್ನು ನಮ್ಮ ಕುಟುಂಬ ಸದಸ್ಯರ ಸುತ್ತ ಸುಳಿಯದಂತೆ ನೋಡಿಕೊಳ್ಳಬಹುದು.ಅನಾರೋಗ್ಯ ಬರುವುದು ಮನುಷ್ಯರಿಗೆ ಹೊರತು ದೇಹಕ್ಕಲ್ಲ.
ದೇಹವು ತನ್ನಷ್ಟಕ್ಕೆ ತಾನೇ ಗುಣಮುಖ ಹೊಂದುವ ಮೆಕ್ಯಾನಿಜಮ್ ಹೊಂದಿದೆ.ಮನಸ್ಸಿನಲ್ಲಿ ಉಂಟಾಗುವ ನಕಾರಾತ್ಮಕ ವಿಚಾರಗಳಿಂದಾಗಿ ದೇಹವು ನೈಸರ್ಗಿಕವಾಗಿ ಗುಣಮುಖವಾಗುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎಂದು ಮನೋವಿಜ್ಙಾನಿ ಭುಜಬಲಿ ಮಾರ್ಮಿಕವಾಗಿ ನುಡಿದರು. ಆರನೇ ಪಡೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ ಅಸಿಸ್ಟೆಂಟ್ ಕಮಾಂಡೆಂಟ್ ನಿಸ್ಸಾರ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ ರೇವೂರ್ ಮತ್ತು ಅಸಿಸ್ಟೆಂಟ್ ಕಮಾಂಡೆಂಟ್ ಚನ್ನಬಸವ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಪ್ರಾರ್ಥನಾಗೀತೆಯನ್ನು ಶಿವರಾಜ್ ಹಾಡಿದರು. ಕಾರ್ಯಕ್ರಮದಲ್ಲಿ ಆರನೇ ಪಡೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ .ಸಬ್ ಇನ್ಸ್ಪೆಕ್ಟರ್ ಶ್ರೀಕಾಂತ್ ಚವ್ಹಾಣ್,ಮೌನಯೋಗಿ ಫೌಂಡೇಶನ್‌ನ ಅಧ್ಯಕ್ಷ ಶ್ರಾವಣಯೋಗಿ ಹಿರೇಮಠ, ಕೆ ಎಸ್ ಆರ್ ಪಿ ಅಧಿಕಾರಿ ಮತ್ತು ನೂರಾರು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…