ಕಲಬುರಗಿ: ಮನುಷ್ಯನ ಬದಲಾದ ಜೀವನ ಶೈಲಿಯಿಂದ ಹಾಗೂ ಆಹಾರದಿಂದ ನಮ್ಮಲ್ಲಿ ಹೊಸ ಹೊಸ ರೋಗಗಳು ಉಲ್ಬಣಗೊಳ್ಳುತ್ತಿದ್ದು, ಇದರಿಂದ ಮನುಷ್ಯನ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯ ಕೂಡಾ ಹದಗೆಡುತ್ತಿದ್ದು ಇದನ್ನು ತಡೆಗಟ್ಟುವುದು ಇಂದಿನ ಅಗತ್ಯವಾಗಿದ್ದು, ಈ ದಿಶೆಯಲ್ಲಿ ಎಲ್ಲರೂ ಆಲೋಚಿಸುವಂತೆ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ ಅವರು ಸಲಹೆ ನೀಡಿದರು.
ಸಮೀಪದ ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಲಿಂ. ಪೂಜ್ಯ ಶ್ರೀ ಚಿಕ್ಕವೀರೇಶ್ವರ ಮಹಾಸ್ವಾಮಿಗಳ 73ನೇ ಪುಣ್ಯಾರಾಧನೆ ಅಂಗವಾಗಿ ಸಾಧಕರಿಗೆ ನೀಡುವ ಪ್ರತಿಷ್ಠಿತ ಚಿನ್ನದ ಕಂತಿ ಪ್ರಶಸ್ತಿ ಸ್ವೀಕರಿಸಿ ಧರ್ಮ ಸಭೆಯಲ್ಲಿ ಮಾತನಾಡಿದ ಅವರು ಒತ್ತಡದಿಂದ ಮುಕ್ತರಾಗಿ, ಸಮಾಜದ ಎಲ್ಲ ಜನರೊಂದಿಗೂ ಪ್ರೀತಿಯಿಂದ ನಗುತ್ತ ಮಾತನಾಡುವುದು ಅತ್ಯಂತ ದಿವ್ಯ ಔಷಧಿಯಾಗಿದ್ದು, ಇನ್ನೂ ಗ್ರಾಮೀಣ ಭಾಗದಲ್ಲಿ ಇದು ಕಣ್ಮರೆಯಾಗಿಲ್ಲ ಎನ್ನುವುದು ನೆಮ್ಮದಿಯ ವಿಷಯವಾಗಿದ್ದು, ನಗರ ಪ್ರದೇಶಗಳಲ್ಲಿ ಪರಸ್ಪರ ಭೇಟಿಯೇ ಅಪರೂಪವಾಗಿದೆ ಎಂದು ಉದಾಹರಣೆ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟರು.
ವೈದ್ಯರು ರೋಗಿಗಳ ಪಾಲಿನ ಆಪದ್ಭಾಂಧವರಾಗಬೇಕು, ತಮ್ಮ ಬಳಿ ಬರುವ ರೋಗಿಗಳಿಗೆ ಸಾಧ್ಯವಾದಷ್ಟು ನಗುತ್ತ ಮಾತನಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುದು ಮತ್ತು ಅವರಿಗೆ ಧೈರ್ಯ ಹೇಳುವುದು ನಮ್ಮ ಕರ್ತವ್ಯವಾಗಿದ್ದು ಹಣ ಮಾಡುವುದೇ ಮನುಷ್ಯನ ದೊಡ್ಡ ಗುರಿಯಲ್ಲ. ಭೌತಿಕ ವಸ್ತುಗಳನ್ನು ಬಿಟ್ಟು ನಾವೆಲ್ಲ ಒಂದು ದಿನ ಈ ಭೂಮಿಯಿಂದ ಹೋಗಬೇಕಾಗಿದ್ದು, ಜೀವಂತವಿದ್ದಾಗ ಉತ್ತಮ ಕೆಲಸ ಮಾಡುವ ಮೂಲಕ ಜನರ ಕಣ್ಣೀರೊರೆಸಲು ಮುಂದಾಗಬೇಕೆಂದು ಕರೆ ನೀಡಿದರು.
ಒತ್ತಡದಿಂದ ಮುಕ್ತರಾಗಿ, ಸಮಾಜದ ಎಲ್ಲ ಜನರೊಂದಿಗೂ ಪ್ರೀತಿಯಿಂದ ನಗುತ್ತ ಮಾತನಾಡುವುದು ಅತ್ಯಂತ ದಿವ್ಯ ಔಷಧಿಯಾಗಿದ್ದು, ಇನ್ನೂ ಗ್ರಾಮೀಣ ಭಾಗದಲ್ಲಿ ಇದು ಕಣ್ಮರೆಯಾಗಿಲ್ಲ ಎನ್ನುವುದು ನೆಮ್ಮದಿಯ ವಿಷಯವಾಗಿದ್ದು, ನಗರ ಪ್ರದೇಶಗಳಲ್ಲಿ ಪರಸ್ಪರ ಭೇಟಿಯೇ ಅಪರೂಪವಾಗಿದೆ ಎಂದು ಉದಾಹರಣೆ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟರು. ವೈದ್ಯರು ರೋಗಿಗಳ ಪಾಲಿನ ಆಪದ್ಭಾಂಧವರಾಗಬೇಕು, ತಮ್ಮ ಬಳಿ ಬರುವ ರೋಗಿಗಳಿಗೆ ಸಾಧ್ಯವಾದಷ್ಟು ನಗುತ್ತ ಮಾತನಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುದು ಮತ್ತು ಅವರಿಗೆ ಧೈರ್ಯ ಹೇಳುವುದು ನಮ್ಮ ಕರ್ತವ್ಯವಾಗಿದ್ದು ಹಣ ಮಾಡುವುದೇ ಮನುಷ್ಯನ ದೊಡ್ಡ ಗುರಿಯಲ್ಲ. ಭೌತಿಕ ವಸ್ತುಗಳನ್ನು ಬಿಟ್ಟು ನಾವೆಲ್ಲ ಒಂದು ದಿನ ಈ ಭೂಮಿಯಿಂದ ಹೋಗಬೇಕಾಗಿದ್ದು, ಜೀವಂತವಿದ್ದಾಗ ಉತ್ತಮ ಕೆಲಸ ಮಾಡುವ ಮೂಲಕ ಜನರ ಕಣ್ಣೀರೊರೆಸಲು ಮುಂದಾಗಬೇಕೆಂದು ಕರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿ ಶ್ರೀಮಠದ ಪೂಜ್ಯ ಶ್ರೀ ಡಾ. ರೇವಣಸಿದ್ದ ಶಿವಾಚಾರ್ಯರು ಮಾತನಾಡಿ ಜಯದೇವ ಸಂಸ್ಥೆಯ ಮೂಲಕ ಡಾ. ಮಂಜುನಾಥ ರವರು ನಾಡಿನ ಜನತೆಯ ಹೃದಯ ಕಾಪಾಡುವ ಹೃದಯವಂತ ವೈದ್ಯರಾಗಿದ್ದು ಹೀಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಯದೇವ ಸಂಸ್ಥೆ ಈ ಭಾಗದ ಜನತೆಯ ಪಾಲಿಗೆ ಸಂಜೀವಿನಿಯಾಗಿದ್ದು, ಮಂಜುನಾಥ ರವರ ಸರಳತೆ, ಮುಗ್ಧತೆ ಮೂಲಕ ಲಕ್ಷಾಂತರ ಜನತೆಯ ಮನವನ್ನು ಗೆದ್ದಿದ್ದಾರೆ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜನಪರ ಚಿಂತಕ ಶ್ರೀ ಸುಭಾಷ ರಾಠೋಡ ಮಾತನಾಡಿ ಪರಂಪರೆಯ ಜೊತೆಗೆ ಸಮಾಜದಲ್ಲಿನ ಪರಿವರ್ತನೆ ತರುವ ಮತ್ತು ಎಲ್ಲರನ್ನೂ ನಮ್ಮವರೆನ್ನುವ ಧರ್ಮದ ಜೊತೆಗೆ ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆ-ಸಾಹಿತ್ಯದ ಸೇವೆಯಲ್ಲಿ ನಿರತರಾಗಿರುವ ಶ್ರೀನಿವಾಸ ಸರಡಗಿ ಮಠದ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದರು.
ಮುತ್ಯಾನ ಬಬಲಾದ ವಿರಕ್ತ ಮಠದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು, ಮಮದಾಪುರ ಮಠದ ಪೂಜ್ಯ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಆಲಮೇಲ್‌ದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಮುಳವಾಡದ ಪೂಜ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು. ಶ್ರವಣಕುಮಾರ ಮಠ ಪ್ರಾರ್ಥಿಸಿದರು, ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು, ರವಿ ಶಹಾಪೂರಕರ ವಂದಿಸಿದರು. ಸಮಾರಂಭದಲ್ಲಿ ಗ್ರಾಮದ ಗಣ್ಯರು, ಶ್ರೀಮಠದ ಪರಮ ಶಿಷ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…