ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ರೂ.50.000 ಶಾಶ್ವತ ನಿಧಿ (ದತ್ತಿನಿಧಿ) ಇರಿಸಿ, ಅದರಿಂದ ಬಂದ ಬಡ್ಡಿಯ ಹಣವನ್ನು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ ಎಂದು ವಿಶ್ವ ಶಿವ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಡಾ. ಸೋಮಶಂಕ್ರಯ್ಯ ರಾಚಯ್ಯ ವಿಶ್ವನಾಥ ಮಠ ತಿಳಿದ್ದಾರೆ. ವಿವಿ ಕುಲಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಈ ಕೈಂಕರ್ಯಕ್ಕೆ ಅನುಮತಿ ನೀಡಿ, ಶ್ಲಾಘಿಸಿದ್ದಾರೆ.