ಸುರಪುರ: ಸ್ವಲ್ಪ ಓದು ಸ್ವಲ್ಪ ಮೋಜು ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ನಗರದ ಸತ್ಯಂಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು .
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ ಮಕ್ಕಳಿಗೆ ಪೇಂಟಿಂಗ್ ಹಾಡು ಕಥೆಗಳು ವ್ಯವಹಾರ ಗಣಿತ ಕುರಿತು ವೈವಿಧ್ಯಮಯವಾದ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು .ಮಕ್ಕಳು ಕಳೆದ ಒಂದು ವಾರದಿಂದ ತಾವು ಕಲಿತಿರುವ ಚಟುವಟಿಕೆಗಳನ್ನು ಪಾಲಕರೊಂದಿಗೆ ಹಂಚಿಕೊಂಡು ಸಂಭ್ರಮಿಸಿದರು. ಪಾಲಕರು ತಮ್ಮ ಮಕ್ಕಳಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗಮನಿಸಿ ತುಂಬಾ ಖುಷಿ ಪಟ್ಟರು .
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಜೀಮ್ ಪ್ರೇಮಜಿ ಫೌಂಡೇಶನ್ನ ಅನ್ವರ್ ಜಮಾದಾರ್ ಮಾತನಾಡಿ, ಶಾಲೆ ಸಮುದಾಯದ ಭಾಗವಾಗಿರುವುದರಿಂದ ಪಾಲಕರು ನಿರಂತರವಾಗಿ ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಕಲಿಕೆಯನ್ನು ಶಿಕ್ಷಕರೊಂದಿಗೆ ಚರ್ಚಿಸುವುದರಿಂದ ಶಿಕ್ಷಕರಲ್ಲಿಯೂ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು .
ಶಿಕ್ಷಕರಾದ ರೇಣುಕಾ ವಾಲಿ ರಾಜೇಶ್ವರಿ ಶಿವಕುಮಾರ ಕಮತಗಿ ಪಾಲಕ ಪೋಷಕರು ಭಾಗವಹಿಸಿದ್ದರು.