ಬಿಸಿ ಬಿಸಿ ಸುದ್ದಿ

ತನ್ನ ತಾನರಿದು ತಾನಾರೆಂಬುದು ತಿಳಿಯುವುದೇ “ದೇವರು”

ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ
ಮರ ದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ
ದೇವರು ದೇವರಲ್ಲ, ಸೇತುರಾಮೇಶ್ವರ, ಗೋಕರ್ಣ
ಕಾಶಿ, ಕೇದಾರ ಮೊದಲಗಿ ಅಷ್ಟಾಷಷ್ಠಿಕೋಟಿ ಪುಣ್ಯ
ಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ, ತನ್ನ ತಾನರಿದು
ತಾನಾರೆಂದು ತಿಳಿದಡೆ ತಾನೇ ದೇವ ನೋಡಾ
ಅಪ್ರಮಾಣ ಕೂಡಲಸಂಗಮದೇವ
-ಬಸವಣ್ಣನವರು

ಸ್ವಾಮಿಗಳೆಂದರೆ ಶಾಪ ಕೊಡುವವರಲ್ಲ. ಸ್ವಾಮಿಗಳ ಬಗೆಗಿನ ಭಯ ಹೋಗಬೇಕು. ಬಸವಣ್ಣನವರು ಅರಿವು ಗುರು ಎಂದು ಹೇಳಿದರೆ ಸ್ವಾಮಿಗಳಾದವರು ಅರಿವೆ (ಬಟ್ಟೆ, ಬರೆ) ಗುರು ಎಂದು ತಿಳಿದಿದ್ದೇವೆ. ಆಶೀರ್ವಾದ ಮಾಡುವವರು ಸ್ವಾಮಿಗಳಲ್ಲ. ಎಲ್ಲಿಯವರೆಗೆ ನಮ್ಮಲ್ಲಿ ಭಯ ಮತ್ತು ಭ್ರಮೆ ಹೋಗುವುದಿಲ್ಲವೋ ಅಲ್ಲಿಯವರೆಗೆ ನಮಗೆ ನಿಜವಾದ ದೇವರು, ಧರ್ಮ ಅರ್ಥವಾಗುವುದಿಲ್ಲ. ನಮ್ಮಲ್ಲಿರುವ ಭಯ ಮತ್ತು ಭ್ರಮೆಯನ್ನು ಉಪಯೋಗಿಸಿಕೊಂಡ ಬಹುತೇಕ ಸ್ವಾಮಿಗಳು ತುಳಿಯುವುದು ನನ್ನ ಧರ್ಮ, ತುಳಿಸಿಕೊಳ್ಳುವುದು ನಿನ್ನ ಧರ್ಮ ಎಂದು ಮೋಸ ಮಾಡುತ್ತ ಬರುತ್ತಿದ್ದಾರೆ.

ಗುಡಿಯೊಳಗಿನ ದೇವರನ್ನು ತೋರಿಸಿ ನಮಗೆ ಗೋ ಮೂತ್ರ ಕುಡಿಸಿ ತಾವು ತುಪ್ಪ ತಿನ್ನುವ ಸ್ವಾಮಿಗಳೂ ಇದ್ದಾರೆ. ಈ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ನಮ್ಮ ತಲೆ ಕಸದ ಬುಟ್ಟಿಯಾಗಲಿದೆ. ಜಾತಿ ನಾಶವಾಗಲಿ ಎಂದು ಹೇಳುವುದು ಕೇವಲ ಬೂಟಾಟಿಕೆಯ ಮಾತಾಗಿದೆ. ಕೆಳ ವರ್ಗದವರಿಗೆ ಈ ದೇಶದಲ್ಲಿ ಈವರೆಗೆ ಯಾವ ರೀತಿಯ ನ್ಯಾಯವೂ ಸಿಕ್ಕಿಲ್ಲ. ದೇವರು, ಧರ್ಮದ ಹೆಸರು ಹೇಳಿ ಫಲಾನುಭವಿಗಳಾದವರು ಕೆಲವು ವರ್ಗದ ಜನರು! ಕೆಳ ವರ್ಗದವರು ಸಹ ತಮ್ಮ ಕೀಳರಿಮೆಯಿಂದ ಹೊರ ಬರಬೇಕು. ದೇವರು ಕಷ್ಟ ಪರಿಹರಿಸುವುದಿಲ್ಲ. ಯಾವುದೇ ಪಾಪ, ಕರ್ಮಗಳಿಲ್ಲ. ಸ್ವಾಮಿಗಳಾದವರು ಭಯ ಹುಟ್ಟಿಸಬಾರದು. ಜನರ ಬದುಕು ಕಟ್ಟಬೇಕು.

ವಚನ ಸಾಹಿತ್ಯ ಸಂರಕ್ಷಣೆ ಮಾಡಿದವರು ಲಿಂಗಾಯತರಲ್ಲ. ಜಂಗಮರಲ್ಲ. ಪೀಠಾಧಿಪತಿಗಳಲ್ಲ. ವಚನ ಸಾಹಿತ್ಯ ಸಂರಕ್ಷಿಸಿದ ಕೀರ್ತಿ ರೇವಣಸಿದ್ಧನ ಮಗ ರುದ್ರಮುನಿಗೆ ಸಲ್ಲಬೇಕು. ರೇವಣಸಿದ್ಧರು ಸೊಲ್ಲಾಪುರದ ಚಾಮಲಾದೇವಿಯ ಗುರುಗಳು. ದ್ರಾವಿಡ ಸಂಸ್ಕೃತಿಯ ಮೂಲ ಗುರು ಅವರು. ಶಿವಯೋಗಿ ಸಿದ್ಧರಾಮ ರೇವಣಸಿದ್ಧರ ಆಶಿರ್ವಾದಿಂದ ಹುಟ್ಟಿದವರು ಎಂದು ಹೇಳಲಾಗುತ್ತದೆ. ಸಂಪ್ರದಾಯವಾದಿಗಳು ವಚನ ಸಹಿತ್ಯ ಸುಟ್ಟ ಹಾಕುವ ಸಂದರ್ಭದಲ್ಲಿ ಅಕ್ಕನಾಗಮ್ಮನ ಜೊತೆ ಹೋರಾಡಿದ ಅಗ್ರಗಣ್ಯರಲ್ಲಿ ರುದ್ರಮುನಿ ಕೂಡ ಒಬ್ಬರು.

ಬುದ್ಧ, ಬಸವ, ಕನಕ, ವಾಲ್ಮೀಕಿ ಮುಂತಾದ ಮಹಾತ್ಮರು “ಬಿತ್ತಿದ ಬೀಜ ಕೆಟ್ಟಿತೆನಬೇಡ. ಫಲದಲ್ಲಿ ಅರಸಿಕೋ” ಎಂದು ಬಾಳಿ ಬದುಕಿದವರು. ಆದರೂ ಜಾತಿ ವಾಸನೆಯನ್ನು ನಮ್ಮಿಂದ ಈವರೆಗೆ ತೆಗೆಯುವುದಕ್ಕೆ ಆಗಿಲ್ಲ. ಚಾತುವರ್ಣವನ್ನು ಅಷ್ಟೊಂದು ಗಟ್ಟಿಗೊಳಿಸಿದ್ದಾರೆ. ಮಾಂಸ ತಿಂದವರು ಕ್ರೂರಿಗಳಾದರೆ, ಮನೆತನ ಒಡೆದವರಿಗೆ ಏನೆನ್ನಬೇಕು? ಈ ಬಗ್ಗೆ ಆಲೋಚಿಸಬೇಕಿದೆ. ತಲೆ ಇರುವುದು ಯೋಚಿಸುವುದಕ್ಕೆ ಹೊರತು ಸುಮ್ಮನೆ ಗೋಣು ಹಾಕುವುದಕ್ಕೆ ಅಲ್ಲ.

ವಿಭೂತಿ ಹಚ್ಚುವುದು, ಕಾಲು ತೊಳೆದು ನೀರು ಕುಡಿಯುವುದು, ಪ್ರಾರ್ಥನೆ ಮಾಡುವುದು, ನಮಾಜ್ ಮಾಡುವುದು ಧರ್ಮವಲ್ಲ. ಬದುಕಿನಲ್ಲಿ ಎದುರಾಗುವ ಸಂಕಷ್ಟಗಳಿಗೆ ದೇವರು ಕಾರಣನಲ್ಲ. ನಿನ್ನ ಕಷ್ಟಕ್ಕೆ ನಿನ್ನ ಶ್ರಮ, ಬುದ್ಧಿ, ತೋಳ್ಬಲವೇ ಪರಿಹಾರ ಎಂಬುದನ್ನು ಅರಿಯಬೇಕಿದೆ. ದೇವರು ಕಲ್ಲಲ್ಲ, ಮುಳ್ಳಲ್ಲ, ನೀರಲ್ಲ, ಗಾಳಿಯೂ ಅಲ್ಲ. ಸೃಷ್ಟಿಯೇ ದೇವರು. ನಾವು ಇದನ್ನು ನೋಡಲು ಬಂದವರಷ್ಟೇ!. ಬದುಕಿರುವವರೆಗೆ ಒಳ್ಳೆಯದನ್ನು ಮಾಡಿ ಸಾವನ್ನಪ್ಪಬೇಕು. ಅಂತೆಯೇ “ಆವ ವಿದ್ಯೆ ಕಲಿತಡೇನು, ಸಾವ ವಿದ್ಯೆ ಬೆನ್ನ ಬಿಡದನ್ನಕ್ಕ” ಎಂದು ಶರಣರು ಹೇಳಿದ್ದಾರೆ.

ಇಲ್ಲಿ ಯಾರೂ ಪರಿಪೂರ್ಣರಲ್ಲ. ಮಹಾತ್ಮರೂ ಕೂಡ ಪರಿಪೂರ್ಣರಲ್ಲ. ಆದರೆ ಅವರು ಹೇಳಿದ ತತ್ವಗಳು ಪರಿಪೂರ್ಣವಾಗಿವೆ. ಯಾಕೆಂದರೆ ಮಹಾತ್ಮರೂ ಮನುಷ್ಯರಲ್ಲವೇ? ಶಾಸ್ತ್ರ, ಪಂಚಾಂಗ ಹೇಳುವವರು ಜನರಲ್ಲಿ ಭಯ ಹುಟ್ಟಿಸಬಾರದು. ಜನ ಬದುಕುವ ವಿದ್ಯೆ ಕಲಿಸಬೇಕು. ಸತ್ಯದ ದಾರಿಯಲ್ಲಿ ಸಾಗಬೇಕು. ಎಲ್ಲರನ್ನು ಅಪ್ಪಿಕೊಳ್ಳುವ ಪ್ರೀತಿಯ ಹೃದಯವಂತರಾಗಬೇಕು.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ

(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago