ವಾಡಿ: ಕಲಬುರಗಿ ನಗರಕ್ಕೆ ಸೀಮಿತವಾಗಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಪ್ರಚಾರ ಕಾರ್ಯ ಪಟ್ಟಣ ಪ್ರದೇಶದಲ್ಲೂ ಚಾಲನೆ ದೊರೆತಿದೆ. ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು ಸುಂದರವಾದ ಗೋಡೆ ಬರಹ ಬರೆಯುವ ಮೂಲಕ ಕನ್ನಡದ ಡಿಂಡಿಮದ ಕಹಳೆ ಮೊಳಗಿಸಿದ್ದಾರೆ.
ಪಟ್ಟಣದ ರೈಲು ನಿಲ್ದಾಣ ಪ್ರವೇಶ ದ್ವಾರದ ಗೋಡೆಗೆ ಬಾರಿಸೋಣ ಬನ್ನಿ ಕನ್ನಡದ ಡಿಂಡಿಮವ ಎಂಬ ಟ್ಯಾಗ್‌ಲೈನ್ ನೀಡುವ ಮೂಲಕ ಆಕರ್ಷಕ ಗೋಡೆ ಬರಹ ಮೂಡಿಸಿ ಗಮನ ಸೆಳೆದಿದ್ದಾರೆ. ಫೆ. ೫,೬,೭ ರಂದು ಮೂರು ದಿನಗಳ ಕಾಲ ಕಲಬುರಗಿ ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪೂರಕವಾಗಿ ವಿವಿಧ ರೀತಿಯ ಪ್ರಚಾರ ಕಾರ್ಯಕ್ಕೆ ಮುಂದಾಗಿರುವ ಸಂಚಲನ ಸಾಹಿತ್ಯ ವೇದಿಕೆ ಸದಸ್ಯರು, ತಮ್ಮದೇ ರೀತಿಯಲ್ಲಿ ಸಾಹಿತ್ಯ ಸೇವೆಗೆ ಆಧ್ಯತೆ ನೀಡಿರುವುದು ವಿಶೇಷ.
ಗೋಡೆ ಬರಹಕ್ಕೆ ಚಾಲನೆ ನೀಡಿ ಮಾತನಾಡಿದ ಸಂಚಲನ ಸಾಹಿತ್ಯ ವೇದಿಕೆ ಅಧ್ಯಕ್ಷ ಮಡಿವಾಳಪ್ಪ ಹೇರೂರ, ಬಿಸಿಲು ನಗರಿ ಕಲಬುರಗಿಗೆ ಆಗಮಿಸಿರುವ ಕನ್ನಡ ನುಡಿ ತೇರಿಗೆ ಅದ್ಧೂರಿಯಾಗಿ ಸ್ವಾಗತಿಸಬೇಕಾದ್ದು ನಮ್ಮ ಕರ್ತವ್ಯ. ನೂನ್ಯತೆಗಳನ್ನೇ ದೊಡ್ಡದಾಗಿ ಪ್ರಚಾರ ಮಾಡುವುದಕಿಂತ ಶೂನ್ಯತೆಗಳನ್ನು ತುಂಬಿ ಕನ್ನಡದ ಡಿಂಡಿಮ ಬಾರಿಸಬೇಕಿದೆ. ಈ ಬಾರಿಯ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳು ಕಲ್ಯಾಣ ಕರ್ನಾಟಕದ ಜನರ ಸಾಹಿತ್ಯ-ಜೀವನ ಕ್ರಮ ಹಾಗೂ ಅಭಿವೃದ್ಧಿ ಕಾಣದೆ ಸ್ಮಾರಕಗಳಂತೆ ನಿಂತಿರುವ ಗ್ರಾಮೀಣ ಭಾಗದ ಸರಕಾರಿ ಕನ್ನಡ ಶಾಲೆಗಳ ದುಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವಾಗುತ್ತದೆ ಎಂಬ ಮಹದಾಸೆ ಹೊಂದಿದ್ದೇವೆ. ಸಾಹಿತ್ಯ ಸಮ್ಮೇಳನ ಜಾತ್ರೆಯಾಗಿ ಅಂತ್ಯಗೊಳ್ಳದೆ ಪರಿವರ್ತನೆಯ ದೀಪ ಬೆಳಗಿಸಬೇಕಿದೆ. ಮುಗ್ಗರಿಸಿರುವ ಕನ್ನಡದ ಶಾಲೆಗಳು ಚೇತರಿಕೆ ಕಾಣಬೇಕಿದೆ. ಸರಕಾರಿ ಕನ್ನಡ ಶಾಲೆಗಳಲ್ಲಿ ಓದುವ ಬಡ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಾನ್ವೆಂಟ್ ಶಾಲೆಗಳಿಗೆ ಮೀರಿಸುವಂತಿರಬೇಕು. ಆಗ ಕನ್ನಡ ಸ್ವಾಭೀಮಾನ ಗರ್ವ ಉಂಟಾಗುತ್ತದೆ ಎಂದರು.
ಸಂಚಲನ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಚಂದ್ರು ಕರಣಿಕ, ಸಿದ್ದಯ್ಯಶಾಸ್ತ್ರೀ ನಂದೂರಮಠ, ಶ್ರವಣಕುಮಾರ ಮೌಸಲಗಿ, ಮಲ್ಲೇಶ ನಾಟೀಕಾರ, ವೀರಣ್ಣ ಯಾರಿ, ದತ್ತು, ಸುನೀಲ, ವಿಜಯಕುಮಾರ ಯಲಸತ್ತಿ ಪಾಲ್ಗೊಂಡಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…