ಸುರಪುರ: ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಬಲಿದಾನಗಳ ಮೂಲಕ ಹೋರಾಡಿದ ಮಹನಿಯರುಗಳಲ್ಲಿ ಟಿಪ್ಪುಕೂಡ ಒಬ್ಬರಾಗಿದ್ದಾರೆ ಎಂದು ಹಜರತ್ ಟಿಪ್ಪುಸುಲ್ತಾನ ಸಂಯುಕ್ತ ರಂಗದ ಜಿಲ್ಲಾದ್ಯಕ್ಷ ಮಹ್ಮದ ಮೌಲಾಅ ಸೌದಾಗರ್ ಮಾತನಾಡಿದರು.
ನಗರದ ಟಿಪ್ಪುಸುಲ್ತಾನ ವೃತ್ತದಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ,ಟಿಪ್ಪು ಸುಲ್ತಾನ ಓರ್ವ ಅಪ್ರತಿಮ ದೇಶಪ್ರೇಮಿಯಾಗಿದ್ದರು,ಅವರು ತನ್ನ ಆಳ್ವಿಕೆಯ ಸಂದರ್ಭದಲ್ಲಿ ತಂದ ಅನೇಕ ಯೋಜನೆಗಳು ಇಂದಿಗು ಜೀವಂತವಾಗಿವೆ.ಅಲ್ಲದೆ ನೂರಾರು ಕೆರೆ ಕಟ್ಟೆಗಳ ಕಟ್ಟಿಸುವ ಮೂಲಕ ತನ್ನ ರಾಜ್ಯವು ಸುಭಿಕ್ಷೆಯಿಂದ ಬೆಳಗುವಂತೆ ಮಾಡಿದ ಮಹಾನ್ ವ್ಯಕ್ತಿಯಾಗಿದ್ದರು,ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟು ಬ್ರೀಟಿಷರಿಗೆ ಸಿಂಹ ಸ್ವಪ್ನವಾಗಿದ್ದ ದಿಟ್ಟ ಹೋರಾಟಗಾರನಾಗಿದ್ದ,ತನ್ನ ಕೆಚ್ಚೆದೆಯ ಹೋರಾಟದಲ್ಲಿ ಬ್ರಿಟೀಷರ ವಿರುಧ್ದ ಹೋರಾಡುತ್ತಲೆ ರಣರಂಗದಲ್ಲಿ ಮೇ ೪ ರಂದು ವೀರ ಮರಣವನ್ನಪ್ಪಿದ ದೇಶಪ್ರೇಮಿ ಎಂದರು.
ಶನಿವಾರ ಸಂಜೆ ಟಿಪ್ಪು ಹುತಾತ್ಮ ದಿನಾಚರಣೆ ಅಂಗವಾಗಿ ಟಿಪ್ಪು ವೃತ್ತದಲ್ಲಿ ಹಲವರು ಸೇರಿ ಟಿಪ್ಪು ಫಲಕಕ್ಕೆ ಮಾಲಾರ್ಪಣೆ ಮಾಡಿ,ನಂತರ ಮೇಣದ ಬತ್ತಿ ಬೆಳಗಿಸಿ ಟಿಪ್ಪು ಹುತಾತ್ಮ ದಿನದ ಸ್ಮರಣೆ ನಡೆಸಿದರು.ಈ ಸಂದರ್ಭದಲ್ಲಿ ರತ್ನರಾಜ ಸಾಲಿಮನಿ,ಖಾಜಾ ಖಲೀಲ ಅಹ್ಮದ ಅರಕೇರಿ,ದಾವೂದ್ ಪಠಾಣ,ಅಮ್ಜದ್ ಹುಸೇನ್,ಅಬೀದ್ ಹುಸೇನ,ಆದಿಲ್,ಖಾಜಾ ಪಾಶಾ ಪಗಡಿ,ಸಾದೀಕ್ ಜಹಾಗೀರದಾರ,ಅಬ್ದುಲ್ ಮೋಲಾಸಾಬ್,ಇಕಬಾಲ್ ಸೌದಾಗರ್ ಸೇರಿದಂತೆ ಅನೇಕರಿದ್ದರು.