ಬಿಸಿ ಬಿಸಿ ಸುದ್ದಿ

‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ಸರ್ವರನ್ನು ಸಮಾನವಾಗಿ ಕಂಡ ಮಹಾ ಪುರುಷ ಬಸವಣ್ಣ

ಅಸ್ಪೃಶ್ಯರು ಮಾತನಾಡುವ, ಮಾತನಾಡಿದ್ದನ್ನು ಕೇಳಿಸಿಕೊಳ್ಳುವ, ವೇದಾದ್ಯಯನ ಪಠಣ ಮಾಡುವ ಅವಕಾಶವಿರಲಿಲ್ಲ, ದೇವರ ಗುಡಿಗಳಿಗೆ ಪ್ರವೇಶವಿರಲಿಲ್ಲ. ಮಾನವೀಯತೆಯ ಮೌಲ್ಯಗಳೆ ಇಲ್ಲದಿರುವ ವಿಷಮ ಸನ್ನಿವೇಶದಲ್ಲಿ ’ಮಾನವರೆಲ್ಲರು ಒಂದು ಬೇಧವು ಸಲ್ಲದು ಎಂದು’ ತಾರತಮ್ಯ ತೋಡೆದು ಹಾಕುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ ಕ್ರಾಂತಿಕಾರಕ ಸುಧಾರಣೆಯ ಮೂಲಕ ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣ ಮಧುವರಸರ ಕುಟುಂಬಗಳ ಅಂತರಜಾತಿ ವಿವಾಹ ಮಾಡಿಸಿದ ಕ್ರಾಂತಿ ಪುರುಷ ಬಸವಣ್ಣ, ವೈದಿಕರ  ಕಂಗೆಣ್ಣಿಗೆ ಗುರಿಯಾದರು. ಕಲ್ಯಾಣ ಕ್ರಾಂತಿಗೆ ಕಾರಣರಾದರು.

ಬಸವಣ್ಣನವರ ಕುಟುಂಬ, ಬಾಲ್ಯ, ಜೀವನ ಕುರಿತಾಗಿ ಯಾವುದೇ ಅಧೀಕೃತ ದಾಖಲೆಗಳಿಲ್ಲ, ’ಸ್ಥಾವರಕ್ಕೆ ಕಳುವುಂಟು, ಜಂಗಮಕ್ಕೆ ಕಳವಿಲ್ಲ’ ಎಂಬ ತತ್ವಕ್ಕೆ ಬದ್ಧರಾಗಿದ್ದರು, ಭೀಮ ಕವಿಯ ಬಸವ ಪೂರಾಣದಲ್ಲಿನ ಉಲ್ಲೇಖದಂತೆ ಅವರ ಉಪನಯನ ಸಂಸ್ಕಾರದ ಘಟನೆಯಿಂದಲೆ ಕ್ರಾಂತಿಗೆ ಮುಂದಾಗುತ್ತಾರೆ. ಅಕ್ಕ ನಾಗಮ್ಮನಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ ಬಸವಣ್ಣ ’ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ’ ಎಂದು ಅದನ್ನು ನಿರಾಕರಿಸಿ ತನ್ನ ಸಹೋದರಿಗಿಲ್ಲದ್ದು ನನಗೂ ಬೇಡ, ಎಂದು ಮನೆಯನ್ನು ತೊರೆದು ಹೊರಟಾಗ ಅಕ್ಕ ನಾಗಮ್ಮ ’ಬಸವನಿಲ್ಲದ ಮನೆಯಲ್ಲಿ ನಾನು ಇರಲಾರೆ’ ಆದರ್ಶ ಪ್ರಾಯ. ಕಲ್ಯಾಣದ ಬಿಜ್ಜಳನ ಅರ್ಥ ಮಂತ್ರಿಯಾಗಿ ಮಾಡಿದ ಕಾರ್ಯ ಅನುಕರಣೀಯ. ಜೊತೆಗೆ ಮಹಿಳೆಗೂ ಪುರುಷನ ಸಮಾನ ಅವಕಾಶ ಸಿಗುವಂತಾಗಬೇಕು ಎಂದು ಜೀವನದುದ್ದಕ್ಕೂ ಸಾಕ್ಷಿಯಾದರು. ಕಲ್ಯಾಣದ ಹನ್ನೇರಡು ಸಾವಿರ ಸೂಳೆಯರನ್ನು ಶರಣೆಯರನ್ನಾಗಿಸಿ ಅವರಿಗೆ ಶರಣ ಸಂಸ್ಕಾರ ನೀಡಿ ವಚನ ರಚಿಸಿ ವಚನಗಾರ್ತಿಯರಾಗಿ ಮತ್ತು ವೈರಾಗ್ಯದ ಖಣಿಯಾಗಿಸಿ ಅಣ್ಣ ಬಸವಣ್ಣನಾಗುತ್ತಾರೆ.

ಜಾತಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷಗಳ ವಿರುದ್ಧ ಸಿಡಿದೆದ್ದು ಎಲ್ಲರೂ ನಮ್ಮವರೇ ಎನ್ನುವ ಇವ ಬೇರಯಲ್ಲ ಇವ ನಮ್ಮವ, ನಮ್ಮ ಮನೆಯ ಮಗನಂತೆ ಕಾಣಬೇಕು ಎಂಬುವದು ಅವರ ಮಾನವ ಪ್ರೇಮ ತೋರಿಸುತ್ತದೆ. ಅಸ್ಪೃಶ್ಯತೆಯ ಹೆಸರಿನಲ್ಲಿ ದೇವಾಲಯಗಳ ಪ್ರವೇಶ ನಿರ್ಬಂಧವಿರುವಾಗ ಕೆಳಸಮಾಜಕ್ಕೆ ಅಪಮಾನ, ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಬಸವಣ್ಣನವರ ನೇತೃತ್ವದ ಶರಣರ ಸಾಮಾಜಿಕ ಹೋರಾಟ ಚಾರಿತ್ರಿಕ. ಧರ್ಮ, ದೇವರ ಹೆಸರಿನಲ್ಲಿ ಆಗುತಿದ್ದ ಶೋಷಣೆಯಿಂದ ಮುಗ್ಧ ಜನರನ್ನು ಮುಕ್ತಗೊಳಿಸಲು ದೇವಾಲಯವೆಂಬ ಜಂಗಮ ತತ್ವವನ್ನು ಪ್ರತಿಪಾದಿಸಿ ’ಉಳ್ಳವರು ದೇವಾಲಯವು ಮಾಡುತ್ತಾರೆ ನಾನೇನು ಮಾಡಲಿ ಬಡವನಯ್ಯಾ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಬಂಗಾರದ ಕಳಸವಯ್ಯಾ ಕೂಡಲ ಸಂಗಮದೇವ ಕೇಳು ಸ್ಥಾವರಕ್ಕೆ ಕಳುವುಂಟು, ಜಂಗಮಕ್ಕೆ ಕಳವಿಲ್ಲ ಎಂದು ಮೂಢನಂಬಿಕೆ ಹಾಗೂ ಧಾರ್ಮಿಕ ಶೋಷಣೆಯ ವಿರುದ್ಧ ಸಮರ ಸಾರಿದ ಮಹಾ ಪ್ರವಾದಿ.

ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಸಾರುವ ಮೂಲಕ ಸ್ವರ್ಗ ನರಕಗಳನ್ನು ಇಲ್ಲೆ ಅನುಭವಿಸಬಹುದು ಎಂದು ತೋರಿಸಿಕೊಟ್ಟ ಅನುಭಾವಿ ಶರಣ. ಆ ಸಮಯದಲ್ಲಿ ವರ್ಣರಹಿತ, ವರ್ಗರಹಿತ, ಜಾತಿರಹಿತ, ಲಿಂಗಸಮಾನತೆಯ ಹಾಗೂ ಜಾತ್ಯಾತೀತ ಧರ್ಮ ಸ್ಥಾಪಿಸುವದೇ ಹನ್ನೇರಡನೇಯ ಶತಮಾನದ ಶರಣ ಚಳುವಳಿಯ ಗುರಿಯಾಗಿತ್ತು. ಅನುಷ್ಠಾನಕ್ಕೆ ತರುವಾಗ ಅಹಿಂಸೆಯ ಮುಖಾಂತರ ಜನತೆಗೆ ಎಚ್ಚರಿಸಿದರು. ಬಸವಣ್ಣನಂತೆ ಕುಲದ ಹೊಲಸು ತೊಳೆದವರು ಈವರೆಗೂ ಯಾರಗೂ ಆಗಿಲ್ಲ. ಅವರು ಬೇರೆಯವರಿಗೆ ಹೇಳುವುದರಲ್ಲಿ ಜಾಣರಾಗಿರಲಿಲ್ಲ, ತಾವೇ ಅದರಂತೆ ನಡೆದರು. ಅವರ ಸ್ಮರಣೆಯಿಂದ ನಾವೂ ಸ್ವತಂತ್ರ ಧೀರರು, ವೀರರೂ, ಪ್ರಶಾಂತಿಗಳಾಗಿ ಬಾಳುವ ಕಲೆಯನ್ನು ರೂಢಿಸಿಕೊಳ್ಳಬಹುದಾಗಿದೆ ಹರ್ಡೇಕರ್ ಮಂಜಪ್ಪನವರು ಬಸವಣ್ಣನವರು ನುಡುದಂತೆ ನಡೆದರು. ಮತ್ತು ದಾಸೋಹ, ಕಾಯಕ ನಿಷ್ಠೆ ಮಾಡಿದ ಶರಣರು,

‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ವೆಂದು ಸರ್ವರನ್ನು ಸಮಾನವಾಗಿ ಕಂಡು ಕೆಳ ಜಾತಿಯ ಎಲ್ಲಾ ಜನರು ಶರಣ ತತ್ವ ಒಪ್ಪಿಕೊಂಡು ತಮ್ಮ ಕಾಯಕದ ಅನುಭವದಲ್ಲಿ ವಚನ ರಚಿಸಿ ಬಹಿರಂಗ ಸಭೆಯ ವೇದಿಕೆಯೇ ಅನುಭವ ಮಂಟಪ ಇದು ಜಗತ್ತಿನಲ್ಲಿಯೇ ’ಪ್ರಪ್ರಥಮ ಪಾರ್ಲಿಮೆಂಟ್’ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಈ ಅನುಭವ ಮಂಟಪಕ್ಕೆ ಮುಖ್ಯಸ್ಥನಾಗಿ ಇಂದಿಗೂ ಕೀಳಾಗಿ ಕಾಣುವ ನಟುವರ್ ಜಾತಿಯ ಅಲ್ಲಮಪ್ರಭುವಿಗೆ ಕೂಡಿಸಿದರು, ಶರಣರ ತತ್ವ ಚಿಂತನೆಗೆ ಮಹಾ ವೇದಿಕೆಯಾಯಿತು. ಅನುಭವದ ಮೇಲೆ ವಚನ ಸಾಹಿತ್ಯಕ್ಕೆ ನಾಂದಿ ಹಾಡಿತು. ಬಸವ ಧರ್ಮದ ಮೂಲವೇ ದಯೆ. ಜೊತೆಗೆ ಸಕಲ ಜೀವರಾಶಿಗಳಿಗೆ ದಯೆಯ ಬೇಕು ಎಂದವರು ಶರಣರು. ಸಮಾಜದ ಸರ್ವಾಂಗೀಣ ಪ್ರಗತಿಗೆ ದುಡಿಮೆಯ ಸಂಸ್ಕೃತಿ ತಿಳಿಸಿ ಕಾಯಕಕ್ಕೆ ದೈವತ್ವವನ್ನು ತುಂಬಿ ಯಾವ ಕೆಲಸದಿಂದ ವ್ಯಕ್ತಿಗೆ ಹಾಗೂ ಸಮಾಜಕ್ಕೆ ಒಳಿತಾಗುತ್ತದೆಯೋ ಅದು ಕಾಯಕವೆನಿಸಿಕೊಳ್ಳುತ್ತದೆಯೆಂದು ಇಡೀ ಸಮಾಜಕ್ಕೆ ಸಾರಿದರು ಮತ್ತು ಕಾಯಕದಲ್ಲಿ ನಿರತನಾಗದೆ ಸಮಯ ಮತ್ತು ಹಣವನ್ನು ಸಮಾಜದ ಒಳತಿಗಾಗಿ ವಿನಿಯೋಗ ಮಾಡಬೇಕೆಂಬುದೇ ದಾಸೋಹ ತತ್ವವಾಗಿಸಿ ವ್ಯಕ್ತಿ ಸಮಾಜದ ಏಳಿಗೆಗಾಗಿ ಶ್ರಮಿಶಬೇಕೆಂಬುದು ಬಸವಣ್ಣನವರ ಬಯಕೆವಾಗಿತ್ತು.

ಬಸವಣ್ಣನವರು ವಚನಗಳ ಮೂಲಕ ವಿಶ್ವ ಸಮುದಾಯಕ್ಕೆ ನೀತಿ ಸಂಹಿತೆ, ಸ್ವಾಸ್ಥ್ಯ ಸಮಾಜಕ್ಕೆ ಅಗತ್ಯವಾದ ಸೂತ್ರಗಳನ್ನು ನೀಡಿದ್ದಾರೆ ಕಳಬೇಡ ಕೊಲಬೇಡ, ಹುಸಿಯನುಡಿಯಲು ಬೇಡ, ಅನ್ಯರ ಕಂಡರೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ ಇದೇ ಅಂತರಂಗದ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲ ಸಂಗಮದೇವನ ಒಲಿಸುವ ಪರಿ. ಈ ನೀತಿ ಸಾಲುಗಳು ಸ್ವತಂತ್ರ್ಯ ಭಾರತದ ಸಂವಿಧಾನದ ಅಂಗವಾಗಿರುವಾಗ ಬಸವಣ್ಣನವರು ಮಹಾನ್ ದಾರ್ಶನಿಕರಾಗಿ ಕಂಡುಬರುತ್ತಾರೆ. ಇದೆಲ್ಲವನ್ನರಿತ ರಾಷ್ಟ್ರ ಕವಿ ಕುವೆಂಪು ’ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ ಬಟ್ಟೆಗೆಟ್ಟವರಿಗೊಂದು ದೊಂಬಿದಿಕ್ಕಾಗಿ ಎಂಟು ಶತಮಾನಗಳ ಹಿಂದೆ ಅಗ್ನಿ ಖಡ್ಗವನಾಂತು, ಓ ಆಧ್ಯಾತ್ಮ ಕ್ರಾಂತಿವೀರ ದೇವ ದಯದೊಂದು ಹೇ ಧೀರಾವತಾರ ಶ್ರೀ ಗುರು ಬಸವೇಶ್ವರ’ ಎಂದು ಉದ್ಗರಿಸುತ್ತಾರೆ.

ಪಾರ್ಲಿಮೆಂಟನಲ್ಲಿ ಡಾ. ಅಂಬೇಡ್ಕರ್‌ರವರಿಗೆ ಸi ಸಮಾಜದ ಮಾತನಾಡುವಾಗ ಮಾನ್ಯ ನಿಜಲಿಂಗಪ್ಪನವರು ಬಸವಣ್ಣನ ನೇತೃತ್ವದ ವಚನ ಚಳುವಳಿ ಕುರಿತು ವಿವರಿಸಿದಾಗ ತುಂಬಾ ಖುಷಿಯಿಂದ ಆಲಿಸಿದ ಅಂಬೇಡ್ಕರವರು ಬಸವಣ್ಣನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಆಶ್ಚರ್ಯಚಿಕತರಾಗಿ ಇಂತಹ ವ್ಯಕ್ತಿ ಕರ್ನಾಟಕದಲ್ಲಿ ಹುಟ್ಟಿದ್ದೆ ಆಶ್ಚರ್ಯ ಆದರೆ ಲಿಂಗಾಯತರು ಬಸವಣ್ಣನಿಗೆ ತಮ್ಮ ಜೇಬಿನಲ್ಲಿ ಬಿಗಿಯಾಗಿ ಇಟ್ಟುಕೊಂಡಿದ್ದಾರೆಂದು ನೋವಿನಿಂದ ವಿಷಾದಿಸುತ್ತಾರೆಂದು ದಾಖಲೆಗಳು ಹೇಳುತ್ತವೆ.

ಕರ್ನಾಟಕದಲ್ಲಿ ಲಿಂಗಾಯತ ಮತ್ತು ವೀರಶೈವರು ರಾಜಕೀಯವಾಗಿ ಮತ ಬ್ಯಾಂಕಿನಿಂದ ಬಲಿಷ್ಠರಾಗಿದ್ದಾರೆ.  ದಲಿತರಿಗೆ ಶೋಷಿಸುತ್ತಾ, ಅಸ್ಪೃಶ್ಯತೆಯನ್ನು ಪೋಷಿಸುತ್ತಾ, ’ಸ್ಥಾವರಕ್ಕೆ ಕಳುವುಂಟು, ಜಂಗಮಕ್ಕೆ ಕಳವಿಲ್ಲ’ವೆಂದು ಸಾರಿದರೂ ಮುಗಿಲೆತ್ತರದ ಪ್ರತಿಮೆಗಳನ್ನು ಸ್ಥಾಪಿಸುತ್ತಾ ತಮ್ಮ ಅಸ್ಮೀತೆ ದೃಢಪಡಿಸುತ್ತಿವೆ. ಒಂಬತ್ತು ನೂರು ವರ್ಷಗಳ ನಂತರದಲ್ಲಿ ಬಸವಣ್ಣನವರ ಸಮಾಜೋಧಾರ್ಮಿಕ ಕ್ರಾಂತಿಯ ಫಲ ಸ್ಥಾಪಿತ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಸ್ಥಾನಮಾನ ಲಭಿಸಬೇಕು. ಬಸವ ಹೋರಾಟ ಮಾದರಿ ಅನುಸರಿಸಲು ಯೋಗ್ಯ ಎಂದು ಸಮಯ ಬಂದಾಗಲೆಲ್ಲ ತುಂಬಾ ಅಭಿಮಾನದಿಂದ ಹೇಳುವುದರ ಜೊತೆಗೆ ವಾಸ್ತವವಾಗಿ ನಡೆಯಬೇಕು.

ಇಂದಿಗೂ ಸಹ ಬಸವ ಜಯಂತಿ ಎಂದರೆ ಒಕ್ಕಲುತನದ ಎತ್ತುಗಳನ್ನು ಪೂಜಿಸುವ ದಿನವೆಂದು ತಿಳಿದು ಕೊಂಡಿರುವ ಜನತೆಗೆ ನಿಜ ಶರಣ ಬಸವನ ಜಯಂತಿ ಮಾಡುವಂತೆ ಪ್ರೇಪಿಸಿದವರಲ್ಲಿ ಮಾತಾ ಹಾದೇವಿಯವರ ಪಾತ್ರ ದೊಡ್ಡದು. ಶರಣ ಹರ್ಡೇಕರ್ ಮಂಜಪ್ಪನವರು 1913ರಲ್ಲಿ ಬಸವ ಜಯಂತಿಯನ್ನು ಪ್ರಾರಂಭ ಮಾಡಿದ ಕೀರ್ತಿ ಸಲ್ಲುತ್ತದೆ. ಲಿಂಗಾಯತ ಮತ್ತು ವೀರಶೈವರ ಮಠಗಳು ಶರಣರ ಆಶಯಗಳನ್ನು ಸಂಪೂರ್ಣವಾಗಿ ಪ್ರತಿನಿಧಿಸುವಲ್ಲಿ ಸೋತು ಹೋಗಿವೆ. ಅಕ್ಷರ, ಅನ್ನ ದಾಸೋಹವನ್ನು ಕೆಲವು ಮಠಗಳು ಮುಂದುವರಿಸುವ ಮೂಲಕ ಶರಣರ ತತ್ವಕ್ಕೆ ಹತ್ತಿರ, ಆದರೆ ಜಾತಿರಹಿತ ಸಮಾಜ ಸೃಷ್ಟಿಯ ಕನಸು ಕಂಡಿದ್ದ ಶರಣರ ಚಿಂತನೆಗಳಿಗೆ ವಿರುದ್ಧವಾಗಿ ಬಹುತೇಕ ಮಠಗಳು ಜಾತಿಯ ಆಡಂಬೋಲಗಳಾಗಿವೆ. ಬಸವಣ್ಣನವರು ಉನ್ನತ ವಿಪ್ರ ಜಾತಿಯಲ್ಲಿ ಹುಟ್ಟಿದರು ಕೇಳಸ್ತರಿಗೆ ಆತ್ಮಸ್ಥೈರ್ಯ ತುಂಬಲು ’ಕಕ್ಕಯ್ಯನ ಮನೆಯ ದಾಸಿಯ ಮಗನು ಚನ್ನಯ್ಯನ ಮನೆಯ ದಾಸಿಯ ಮಗಳು ಇಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು ಅವರಿಗೆ ಹುಟ್ಟಿದ ಮಗ ನಾನು ಕೂಡಲ ಸಂಗಮದೇವನ  ಸಾಕ್ಷಿಯಾಗಿ ಬಸವಣ್ಣ’ ಎಂದು ವಿನಯದಿಂದ ಸಾರಿದ್ದಾರೆ. ದಲಿತರ ನಿಜವಾದ ವಾರಸುಧಾರರಾಗಿದ್ದಾರೆ. ಈಗಾಗಿ ಎಲ್ಲಾ ತಳ ಸಮುದಾಯಗಳು ಸ್ವಾಭಿಮಾನದಿಂದ  ನೆನಪಿಸಿಕೊಳ್ಳಬೇಕು ಅಂದಾಗ ಬಸವ ಜಯಂತಿಗೆ ಅರ್ಥ ಬರುತ್ತದೆ.

ಡಾ.ಹಣಮಂತ್ರಾಯ ಸಿ,ಕರಡ್ಡಿ ಪಿಎಚ್,ಡಿ

ಉಪನ್ಯಾಸಕರು, ಸಮಾಜಕಾರ್ಯ ಅಧ್ಯಯನ ವಿಭಾಗ

ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ-9886108774

sajidpress

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

4 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

11 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

11 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

22 hours ago